Surveyors Recruitment: ಇನ್ನೂ 600 ಮಂದಿ ಸರ್ವೆಯರುಗಳ ನೇಮಕಕ್ಕೆ ಆದೇಶ -ಕಂದಾಯ ಸಚಿವ ಆರ್ ಅಶೋಕ್

ಕಂದಾಯ ಇಲಾಖೆಗೆ 820 ಜನ ಸರ್ವೆಯರುಗಳ ನೇಮಕಕ್ಕೆ ಆದೇಶ ಕೊಟ್ಟಿದ್ದೇವೆ. ಇದರ ಜೊತೆಗೆ ಇನ್ನೂ 600 ಮಂದಿ ಸರ್ವೆಯರುಗಳ (ಬಾಂದನವರ) ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

Surveyors Recruitment: ಇನ್ನೂ 600 ಮಂದಿ ಸರ್ವೆಯರುಗಳ ನೇಮಕಕ್ಕೆ ಆದೇಶ -ಕಂದಾಯ ಸಚಿವ ಆರ್ ಅಶೋಕ್
ಇನ್ನೂ 600 ಮಂದಿ ಸರ್ವೆಯರ್ ನೇಮಕಕ್ಕೆ ಆದೇಶ: ಕಂದಾಯ ಸಚಿವ ಆರ್ ಅಶೋಕ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 03, 2021 | 2:11 PM

ಬೆಂಗಳೂರು: ಕಂದಾಯ ಇಲಾಖೆಗೆ 820 ಜನ ಸರ್ವೆಯರುಗಳ ನೇಮಕಕ್ಕೆ ಆದೇಶ ಕೊಟ್ಟಿದ್ದೇವೆ. ಇದರ ಜೊತೆಗೆ ಇನ್ನೂ 600 ಮಂದಿ ಸರ್ವೆಯರುಗಳ (ಬಾಂದನವರ-ಭೂಮಾಪಕ surveyor) ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಪೆಂಡಿಂಗ್ ಇರುವ ಎಲ್ಲ ಸರ್ವೆ ಅರ್ಜಿಗಳನ್ನು ಎರಡೇ ತಿಂಗಳಲ್ಲಿ ವಿಲೇವಾರಿ ಮಾಡಲು ಸಾಧ್ಯ. ಕುರುಬ ಬಂಜಾರ ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಆದೇಶ ಹೊರಡಿಸಿದ್ದೇವೆ. ಹಕ್ಕಿ ಪಿಕ್ಕಿ ಜನಾಂಗದವರಿಗೂ ಗ್ರಾಮಗಳ ಘೋಷಣೆ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದೇವೆ. ಸ್ಟಾಂಪ್ ಡ್ಯೂಟಿ ಗೈಡೆನ್ಸ್ ವ್ಯಾಲ್ಯೂ ಕಡಿಮೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಪಾಟ್ ಹೋಲ್ ಗಳಿವೆ, ಅವುಗಳನ್ನು ತುಂಬುವ ಕೆಲಸ ಮಾಡ್ತೇವೆ. ನಿರಂತರ ಮಳೆಯೂ ಜಾಸ್ತಿ ಆಗ್ತಿರೋದ್ರಿಂದ ಕೆಲವು ರಸ್ತೆಗಳು ಹಾನಿಯಾಗ್ತಿವೆ. ಮೂರ್ನಾಲ್ಕು ದಿನಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದಿದ್ದೇವೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಮಾತಿನಿಂದಲೇ ಕುಮಾರಸ್ವಾಮಿ ಘನತೆ ಗೌರವ ಕಡಿಮೆಯಾಗಿದೆ: ಪೆಟ್ರೋಲ್-ಡಿಸೆಲ್ ಮೇಲೆ ಸೆಸ್ ಇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅರುಣ್ ಸಿಂಗ್ ವಿರುದ್ಧ ಎಚ್​ಡಿ ಕುಮಾರಸ್ವಾಮಿ ಆರೋಪ ವಿಚಾರ ಮಾತನಾಡಿದ ಸಚಿವ ಆರ್ ಅಶೋಕ್, ಅರುಣ್ ಸಿಂಗ್ ಬಗ್ಗೆ ಎಚ್​ಡಿ ಕುಮಾರಸ್ವಾಮಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸೂಟ್ ಕೇಸ್ ಸಂಸ್ಕೃತಿ ಬಿಜೆಪಿಯಲ್ಲಿ ಹಿಂದೆಯೂ ಇಲ್ಲ ಮುಂದೆಯೂ ಇಲ್ಲ. ಬಿಜೆಪಿಯದ್ದು ಸೂಟ್ ಕೇಸ್ ಸಂಸ್ಕೃತಿ ಅಲ್ಲವೇ ಅಲ್ಲ. ಅದು ಏನಿದ್ರು ಜೆಡಿಎಸ್ ಸಂಸ್ಕೃತಿ. ಮಾಜಿ ಸಿಎಂ ಆದವರು ಈ ತರದ ಹೇಳಿಕೆ ಕೊಡುವಂಥದ್ದು ಸರಿಯಲ್ಲ. ದೇವೇಗೌಡರ ಮೇಲೆ ನಮಗೆ ವಿಶ್ವಾಸ ಇದೆ. ಯಾವುದನ್ನು ಮಾತಾಡಬೇಕು ಮಾತಾಡಬಾರದು ಅಂತ ಕುಮಾರಸ್ವಾಮಿ ಯೋಚನೆ ಮಾಡಬೇಕು. ಅವರ ಮಾತಿನಿಂದ ಕುಮಾರಸ್ವಾಮಿ ಘನತೆ ಗೌರವವೇ ಕಡಿಮೆಯಾಗಿದೆ. ಇದನ್ನು ಖಂಡಿತವಾಗಿ ಖಂಡಿಸ್ತೀನಿ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಾಗೇಪಲ್ಲಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಹೆಚ್​​ಡಿ ಕುಮಾರಸ್ವಾಮಿ! ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದ ಜೆಡಿಎಸ್ ಮುಖಂಡ

ಜೆಡಿಎಸ್ ಮುಳುಗುತ್ತಿದೆ, ಬಿಜೆಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ: ಮೈಸೂರಿನಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

(another 600 more surveyor to be recruited as revenue minister r ashoka)

Published On - 1:53 pm, Fri, 3 September 21