ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಬಸ್​ ಇದ್ದರೂ ಖಾಸಗಿ ವಾಹನಗಳ ಬಳಕೆ ಹೆಚ್ಚಳ, ಒಂದು ಕೋಟಿ ದಾಟಿದ ಒಟ್ಟು ವಾಹನಗಳ ಸಂಖ್ಯೆ

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹಬ್ಬಗಳಿರುವ ಕಾರಣ ಸಾಮಾನ್ಯವಾಗಿ ಹೊಸ ವಾಹನಗಳ ನೋಂದಣಿ ಹೆಚ್ಚಿರುತ್ತದೆ. ಬೆಂಗಳೂರಿನಲ್ಲಿ ಖಾಸಗಿ ಅಥವಾ, ಸಾರಿಗೆಯೇತರ ವಾಹನಗಳ ಸಂಖ್ಯೆ ಶೀಘ್ರದಲ್ಲೇ ಒಂದು ಕೋಟಿ ಗಡಿ ದಾಟಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಬಸ್​ ಇದ್ದರೂ ಖಾಸಗಿ ವಾಹನಗಳ ಬಳಕೆ ಹೆಚ್ಚಳ, ಒಂದು ಕೋಟಿ ದಾಟಿದ ಒಟ್ಟು ವಾಹನಗಳ ಸಂಖ್ಯೆ
ಸಾಂದರ್ಭಿಕ ಚಿತ್ರ)Image Credit source: PTI/File
Follow us
ಆಯೇಷಾ ಬಾನು
|

Updated on:Oct 23, 2023 | 11:25 AM

ಬೆಂಗಳೂರು, ಅ.23: ನಗರದಲ್ಲಿ ದಿನೇ ದಿನೇ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದಸರಾ-ದೀಪಾವಳಿ ಹಬ್ಬ (Festival Season) ಮುಗಿಯುವ ವೇಳೆಗೆ ಬೆಂಗಳೂರಿನಲ್ಲಿ ನೋಂದಣಿಯಾಗಿರುವ ಖಾಸಗಿ ವಾಹನಗಳ ಸಂಖ್ಯೆ ಒಂದು ಕೋಟಿ ಗಡಿ ಮುಟ್ಟಲಿದೆ ಎಂಬ ಆತಂಕ ಹೆಚ್ಚಾಗಿದೆ (Private Vehicles). ಪ್ರಸ್ತುತ, ನಗರದಲ್ಲಿ 99.8 ಲಕ್ಷ ವಾಹನಗಳಿದ್ದು, ಇವುಗಳನ್ನು ಆರ್‌ಟಿಒಗಳಲ್ಲಿ ಸಾರಿಗೆಯೇತರ ವಾಹನಗಳಾಗಿ ನೋಂದಾಯಿಸಲಾಗಿದೆ. ಅವುಗಳಲ್ಲಿ 75.6 ಲಕ್ಷ ದ್ವಿಚಕ್ರ ವಾಹನಗಳು ಮತ್ತು 23.1 ಲಕ್ಷ ಕಾರುಗಳು ವೈಯಕ್ತಿಕ ವಾಹನಗಳಾಗಿ ನೋಂದಣಿಯಾಗಿವೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹಬ್ಬಗಳಿರುವ ಕಾರಣ ಸಾಮಾನ್ಯವಾಗಿ ಹೊಸ ವಾಹನಗಳ ನೋಂದಣಿ ಹೆಚ್ಚಿರುತ್ತದೆ. ಬೆಂಗಳೂರಿನಲ್ಲಿ ಖಾಸಗಿ ಅಥವಾ, ಸಾರಿಗೆಯೇತರ ವಾಹನಗಳ ಸಂಖ್ಯೆ ಶೀಘ್ರದಲ್ಲೇ ಒಂದು ಕೋಟಿ ಗಡಿ ದಾಟಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿಯಂತಹ ಹಲವು ವಿಧಗಳ ಸಾರಿಗೆ ವ್ಯವಸ್ಥೆ ಇದ್ದರೂ ಸಹ ಜನ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ ಎಂಬುವುದನ್ನು ನಾವು ಇಲ್ಲಿ ಗಮನಿಸಬಹುದು.

ಬೆಂಗಳೂರಿನಲ್ಲಿ 2012-13 ರಲ್ಲಿ ವಾಹನಗಳ ಸಂಖ್ಯೆ 55.2 ಲಕ್ಷ ಇತ್ತು. ಆದರೆ ಈಗ ಈ ವರ್ಷದ ಸೆಪ್ಟೆಂಬರ್ 30ರ ವರೆಗೆ 1.1 ಕೋಟಿಗೆ ದ್ವಿಗುಣಗೊಂಡಿದೆ. ಮೆಟ್ರೋ ಮತ್ತು BMTC ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ನಿರ್ವಾಹಕರು. ಮೆಟ್ರೋ 74 ಕಿಮೀ ಮಾರ್ಗವನ್ನು ಆವರಿಸಿದೆ. ಮತ್ತು ದಿನಕ್ಕೆ 7 ಲಕ್ಷ ಪ್ರಯಾಣಿಕರು ಮೆಟ್ರೋಗೆ ಅವಲಂಬಿಸಿದ್ದಾರೆ. ಬಿಎಂಟಿಸಿಯಲ್ಲಿ ಪ್ರತಿದಿನ 43 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ.ಇನ್ನು ನಮ್ಮ ಮೆಟ್ರೋ ತನ್ನ ಸಂಚಾರ ಮಾರ್ಗವನ್ನು ಹೆಚ್ಚಿಸುತ್ತಿದೆ. ಜೊತೆಗೆ ಐಟಿ ಬಿಟಿ ಹಬ್​ಗಳೊಂದಿಗೂ ಕೈ ಜೋಡಿಸಿದೆ. ಇಷ್ಟೆಲ್ಲಾ ಆದರೂ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಈಗ ರಾಜ್ಯದ ವಿವಿಧ ಜಿಲ್ಲೆಗಳಿಗೂ ಸಂಚಾರ

ಮತ್ತು BMTC ತನ್ನ ಫ್ಲೀಟ್ ಗಾತ್ರವನ್ನು ಹೆಚ್ಚಿಸಿದಾಗ ಮಾತ್ರ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಚಲನಶೀಲ ತಜ್ಞರು ಹೇಳಿದ್ದಾರೆ. ಅವರ ಪ್ರಕಾರ, ವೈಯಕ್ತಿಕ ಕಾರುಗಳ ಯಾವುದೇ ಹೆಚ್ಚಳವು ಈಗಾಗಲೇ ಒತ್ತಡದಲ್ಲಿರುವ ರಸ್ತೆ ಜಾಲದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ, ಇದು ಕಳೆದ ದಶಕದಲ್ಲಿ ಯಾವುದೇ ವಿಸ್ತರಣೆಯನ್ನು ಕಂಡಿಲ್ಲ.

ಸಾರಿಗೆ ಆಯುಕ್ತ ಯೋಗೇಶ್ ಎಎಂ ಮಾತನಾಡಿ, ಕೊಎಒನಾ ನಂತರ, ಖಾಸಗಿ ವಾಹನಗಳನ್ನು ಬಳಸುವ ಜನರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಆ ಅವಧಿಯಲ್ಲಿ ಹೊಸ ವಾಹನಗಳ ನೋಂದಣಿ ಮತ್ತು ಬಳಸಿದ ಖಾಸಗಿ ವಾಹನಗಳನ್ನು ಖರೀದಿಸಲಾಯಿತು. ಆಟೋಮೊಬೈಲ್ ತಯಾರಕರು ಹೊಸ ರೂಪಾಂತರಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಹೊಸ ಮಾದರಿಯ ವಾಹನಗಳಿಂದ ಜನರನ್ನು ಆಕರ್ಷಿಸುತ್ತಿದ್ದಾರೆ. ಜನ ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಜೀವಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರಕಾರ ಸಾರಿಗೆ ಇಲಾಖೆಗೆ 11,500 ಕೋಟಿ ಆದಾಯ ಗುರಿ ನೀಡಿದೆ. 2023-24ರಲ್ಲಿ ಹೊಸ ವಾಹನಗಳ ನೋಂದಣಿ ಮತ್ತು ಇತರ ಮೂಲಗಳಿಂದ ಈ ಹಣಕಾಸು ವರ್ಷದಲ್ಲಿ ಇಲಾಖೆಯು 5,226 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:36 am, Mon, 23 October 23

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ