Odisha Train Accident: ಬೆಂಗಳೂರಿನಿಂದ ಹೌರಾ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ110 ಕನ್ನಡಿಗರು ಪಾರಾಗಿದ್ದೇಗೆ? ಇಲ್ಲಿದೆ

|

Updated on: Jun 03, 2023 | 7:43 AM

ಒಡಿಶಾದ ಬಾಲಸೋರ್​ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ 110 ಜನ ಕನ್ನಡಿಗರು ಕೂಡ ಪ್ರಯಾಣಿಸಿದ್ದು, ದುರಂತದಿಂದ ಪಾರಾಗಿದ್ದಾರೆ.

Odisha Train Accident: ಬೆಂಗಳೂರಿನಿಂದ ಹೌರಾ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ110 ಕನ್ನಡಿಗರು ಪಾರಾಗಿದ್ದೇಗೆ? ಇಲ್ಲಿದೆ
ದುರಂತದಿಂದ ಪಾರಾದ ಕನ್ನಡಿಗರು
Follow us on

ಬೆಂಗಳೂರು: ಒಡಿಶಾದ ಬಾಲಸೋರ್​ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ ಸದ್ಯದ ಮಾಹಿತಿ ಪ್ರಕಾರ 233 ಜನರು ಸಾವನ್ನಪ್ಪಿದ್ದು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು ಅಪಘಾತ ಕೋರಮಂಡಲ್​​ ಎಕ್ಸಪ್ರೆಸ್​​, ಬೈಯಪ್ಪನಹಳ್ಳಿ ಸರ್​​ ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್​​ ಮತ್ತು ಗೂಡ್ಸ್​​ ರೈಲುಗಳ ಮಧ್ಯೆ ಸಂಭವಿಸಿದೆ. ಬೈಯಪ್ಪನಹಳ್ಳಿ ಸರ್​​ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೆಂಗಳೂರು) ಹೌರಾ ಎಕ್ಸ್​ಪ್ರೆಸ್​ನಲ್ಲಿ 110 ಜನ ಕನ್ನಡಿಗರು ಕೂಡ ಪ್ರಯಾಣಿಸಿದ್ದು, ದುರಂತದಿಂದ ಪಾರಾಗಿದ್ದಾರೆ. ಈ ಪ್ರಯಾಣಿಕರು ಪಾರಾಗಿದ್ದು ಹೇಗೆ ಇಲ್ಲಿದೆ ಓದಿ..

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ 110 ಜನ ಬೈಯಪ್ಪನಹಳ್ಳಿ ಸರ್​​ ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್​​​​ನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಬೆಂಗಳೂರಿನಿಂದ ಕೊನೆಯ S5, S6, S7 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು.

ಇದನ್ನೂ ಓದಿ: ಒಡಿಶಾದ ಬಾಲಸೋರ್​​ನಲ್ಲಿ ಭೀಕರ ರೈಲು ದುರಂತ, ಸಾವಿನ ಸಂಖ್ಯೆ 233ಕ್ಕೆ ಏರಿಕೆ

ರೈಲು ನಿನ್ನೆ (ಜೂ.03) ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್​ ಬದಲಿಸಿದೆ. ಇದರಿಂದ ಕಳಸ ತಾಲೂಕಿನ 110 ಜನ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊನೆಯ 4 ಬೋಗಿಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಇನ್ನು ಈ ನಿಲ್ದಾಣದಿ ರೈಲಿನಲ್ಲಿ 1294 ಪ್ರಯಾಣಿಕರು ತೆರಳಿದ್ದರು. 1294 ಪ್ರಯಾಣಿಕರ ಪೈಕಿ 994 ಜನ ಟಿಕೆಟ್‌ ಬುಕ್ ಮಾಡಿಸಿದ್ದರು.

SWR ನೀಡಲಾದ ಸಹಾಯವಾಣಿ

ಬೆಂಗಳೂರು(Bangalor): 080-22356409

ಬಂಗಾರಪೇಟೆ(Bangarpet): 08153 255253

ಕುಪ್ಪಂ(Kuppam): 8431403419

ಎಸ್​ಎಮ್​ವಿಬಿ(SMVB) : 09606005129

ಕೆಜೆಎಮ್​(KJM):+91 88612 03980

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:38 am, Sat, 3 June 23