ಪರಿಸರ ಉಳಿಸಲು ಸರ್ಕಾರದಿಂದ ನೂರು ಕೋಟಿ ಮೊತ್ತದ ಎಕಾಲಾಜಿಕಲ್ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2022 | 1:41 PM

ಅಗ್ನಿಪಥ್​​ ಯೋಜನೆಗೆ ದೇಶಾದ್ಯಂತ ವಿರೋಧ ಹಿನ್ನೆಲೆ ಸಿಎಂ ಪ್ರತಿಕ್ರಿಯಿಸಿದ್ದು, ಈ ಪ್ರತಿಭಟನೆ ಹಿಂದೆ ಕಾಂಗ್ರೆಸ್​ ಕೈವಾಡ ಇದೆ.  ಖಾನಾಪುರ ಶಾಸಕರು ನಡೆಸುತ್ತಿರುವ​ ಪ್ರತಿಭಟನೆಯೇ ಸಾಕ್ಷಿ. ಇದುವರೆಗೂ ಆ ರೀತಿಯ ಯೋಜನೆ ಬಂದಿಲ್ಲ.

ಪರಿಸರ ಉಳಿಸಲು ಸರ್ಕಾರದಿಂದ ನೂರು ಕೋಟಿ ಮೊತ್ತದ ಎಕಾಲಾಜಿಕಲ್ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಪರಿಸರ ಉಳಿಸಲು ಸರ್ಕಾರದಿಂದ 100 ಕೋಟಿ ಮೊತ್ತದ ಎಕಾಲಾಜಿಕಲ್ ಬಜೆಟ್ (Ecological Budget) ಮಂಡನೆ ಮಾಡಲಾಗುತ್ತಿದ್ದು, ಈ ತರದ ಬಜೆಟ್ ದೇಶದಲ್ಲೇ ಮೊದಲು ಎಂದು ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಇಶಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ, ಸದ್ಗುರು ಜಗ್ಗಿವಾಸುದೇವ್ ನೇತೃತ್ವದಲ್ಲಿ ನಡೆಯುತ್ತಿರುವ ಮಣ್ಣು ಉಳಿಸಿ ಅಭಿಯಾನ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಎಲ್ಲೆಲ್ಲಿ ಅರಣ್ಯ ನಾಶ ಆಗಿದೆಯೋ, ಬಂಜರು ಭೂಮಿ ಇದೆಯೋ ಅದನ್ನ ಪುನಶ್ಚೇತನ ಮಾಡುತ್ತೇವೆ. ರಾಜ್ಯದ ಅರಣ್ಯ 24% ಇದೆ. ಮುಂದಿನ ಐದು ವರ್ಷಗಳಲ್ಲಿ ಇದನ್ನು 30% ಕ್ಕೆ ಏರಿಸುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. 2008 ರಲ್ಲಿ ಯಡಿಯೂರಪ್ಪ ಭೂಚೇತನ‌ ಕಾರ್ಯಕ್ರಮ ತಂದರು. ಭೂಚೇತನ ಮಣ್ಣಿನಲ್ಲಿರುವ ಸತ್ವ, ಸಾರ ಉಳಿಸುವ ಯೋಜನೆಯಾಗಿದೆ. ಮಣ್ಣಿನಲ್ಲಿ ನೈಸರ್ಗಿಕ ಸತ್ವ, ಸಾರ ಕಮ್ಮಿ ಇದ್ದರೆ ಅದನ್ನು ಸರಿದೂಗಿಸುವ ಕಾರ್ಯಕ್ರಮ ಇದಾಗಿದೆ. ಮಣ್ಣು ಉಳಿಸಿ ಪರಿಕಲ್ಪನೆಯನ್ನು ದೂರದೃಷ್ಟಿಯಿಂದ‌ ಅಂದೇ ಯಡಿಯೂರಪ್ಪ ಪರಿಚಯಿಸಿದ್ದರು. ಮಣ್ಣು ಉಳಿಸಿ ಅಭಿಯಾನ ಐತಿಹಾಸಿಕ ಮಹತ್ವದ್ದಾಗಿದ್ದು, ಜಗತ್ತಿನ ಇತಿಹಾಸದ ಪುಟಗಳಲ್ಲಿ ಈ ಅಭಿಯಾನ ದಾಖಲೆ ಆಗಲಿದೆ. ಈ ಅಭಿಯಾನ ಯಶಸ್ವಿ ಆಗಿದೆ, ಮುಂದೆಯೂ ಯಶಸ್ವಿಯಾಗಲಿದೆ. ಹುಟ್ಟುವ ಮಗುವಿಗೂ ಈ ಅಭಿಯಾನ ಅವಶ್ಯಕತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Genelia D’Souza: ಸಿಇಒ ಪಾತ್ರದಲ್ಲಿ ನಟಿ ಜೆನಿಲಿಯಾ ಡಿಸೋಜಾ​; ಕಿರೀಟಿ ಸಿನಿಮಾ ಬಗ್ಗೆ ಕೇಳಿಬಂತು ಸ್ಪೆಷಲ್​ ನ್ಯೂಸ್​

ಪಂಚಭೂತಗಳಲ್ಲಿ ಶ್ರೇಷ್ಠವಾದ ಮಣ್ಣು ಉಳಿಸುವ ಅಭಿಯಾನ ನಿಜಕ್ಕೂ ದೊಡ್ಡ ಕೆಲಸ. ಆ ಕೆಲಸವನ್ನು ಸದ್ಗುರು ಜಗ್ಗಿನ್ ವಾಸುದೇವ್​ರವರು ಅದ್ಭುತ ಅಭಿಯಾನ ಮಾಡುತ್ತಿದ್ದಾರೆ. ಅವರು ಹುಟ್ಟಿರೋದೆ ಪ್ರಕೃತಿಯ ಉಳಿವಿಗಾಗಿ, ಇದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದರು.

ಜನಾಭಿಪ್ರಾಯಕ್ಕೆ ಮುಂದಾದ ಪಠ್ಯ ಪರಿಷ್ಕರಣೆ ವಿಚಾರ

ಪಠ್ಯ ಪರಿಷ್ಕರಣೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಸಮಾಧಾನ ವಿಚಾರವಾಗಿ ಮಾತನಾಡಿದ್ದು, ಪಠ್ಯ ಪರಿಷ್ಕರಣೆ ವಿಚಾರ ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ನಮ್ಮ ಸರ್ಕಾರ ಸಾಹಿತಿಗಳಿಗೆ ಗೌರವ ತರುವ ಕೆಲಸ ಮಾಡುತ್ತೆ. ಪಠ್ಯ ಪರಿಷ್ಕರಣೆ ಸಾರ್ವಜನಿಕ ವಲಯದಲ್ಲಿದೆ. ಜನಾಭಿಪ್ರಾಯಕ್ಕೆ ಮುಂದಾಗಿದ್ದೇವೆ, ಲೋಪ ಇದ್ರೆ ತಿಳಿಸಬಹುದು ಎಂದು ಹೇಳಿದರು.

ಈ ಪ್ರತಿಭಟನೆ ಹಿಂದೆ ಕಾಂಗ್ರೆಸ್​ ಕೈವಾಡ ಇದೆ ಎಂದ ಸಿಎಂ

ಅಗ್ನಿಪಥ್​​ ಯೋಜನೆಗೆ ದೇಶಾದ್ಯಂತ ವಿರೋಧ ಹಿನ್ನೆಲೆ ಸಿಎಂ ಪ್ರತಿಕ್ರಿಯಿಸಿದ್ದು, ಈ ಪ್ರತಿಭಟನೆ ಹಿಂದೆ ಕಾಂಗ್ರೆಸ್​ ಕೈವಾಡ ಇದೆ.
ಖಾನಾಪುರ ಶಾಸಕರು ನಡೆಸುತ್ತಿರುವ​ ಪ್ರತಿಭಟನೆಯೇ ಸಾಕ್ಷಿ. ಇದುವರೆಗೂ ಆ ರೀತಿಯ ಯೋಜನೆ ಬಂದಿಲ್ಲ. ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಈ ಯೋಜನೆ ಮೂಲಕ‌ ಸಶಕ್ತ ಯುವಶಕ್ತಿ ರೂಪಿಸಲಾಗುತ್ತೆ. ಈಗಾಗಲೇ ಪರೀಕ್ಷೆ ಬರೆದ ಕೆಲವರಿಗೆ ಆತಂಕ ಇರಬಹುದು. ಅದನ್ನೆಲ್ಲ ಕೇಂದ್ರ ಸರ್ಕಾರ ಗಮನಿಸಿ ನಿರ್ಧಾರ ಕೈಗೊಳ್ಳುತ್ತೆ. ಆದರೆ ಈ ನೆಪದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.