ಬೆಂಗಳೂರಿಗೆ ಪ್ರಧಾನಿ ಆಗಮನ; ಬೆಂಗಳೂರು ವಿಶ್ವವಿದ್ಯಾಲಯದ 64 ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ವಿವಿ ಸಂಯೋಜನೆಗೆ ಒಳಪಟ್ಟ ವಿವಿ ವ್ಯಾಪ್ತಿಯ ಒಟ್ಟು 64 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರಿಗೆ ಪ್ರಧಾನಿ ಆಗಮನ; ಬೆಂಗಳೂರು ವಿಶ್ವವಿದ್ಯಾಲಯದ 64 ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು ವಿವಿ
Follow us
TV9 Web
| Updated By: ಆಯೇಷಾ ಬಾನು

Updated on:Jun 19, 2022 | 2:38 PM

ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಕಾರ್ಯಕ್ರಮ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(Bangalore University) ಸ್ಥಳೀಯ ರಜೆ ಘೋಷಣೆ ಮಾಡಿ ಬೆಂಗಳೂರು ವಿವಿ ಸುತ್ತೋಲೆ ಕಳಿಸಿದೆ. ವಿವಿ ಆವರಣದಲ್ಲಿರುವ ಅಂಬೇಡ್ಕರ್ ಸ್ಕೂಲ್ ಎಕನಾಮಿಕ್ಸ್ ಉದ್ಘಾಟನೆ ಹಿನ್ನೆಲೆ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ರಜೆ ನೀಡಿ ಬೆಂಗಳೂರು ವಿವಿ ಕುಲಸಚಿವರು ಸುತ್ತೋಲೆ ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ವಿವಿ ಸಂಯೋಜನೆಗೆ ಒಳಪಟ್ಟ ವಿವಿ ವ್ಯಾಪ್ತಿಯ ಒಟ್ಟು 64 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ನಾಳೆಯಿಂದ ಎರಡು ದಿನ ಪಿಎಂ ಮೋದಿ ಕರ್ನಾಟಕ ಪ್ರವಾಸ ಕೈಗೊಂಡ ಬಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನಾಳೆ ಬೆಂಗಳೂರು ವಿವಿಯಲ್ಲಿ ಕಾರ್ಯಕ್ರಮವಿದೆ. ಜೂ.21ರಂದು ಮೈಸೂರಿನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Redmi Note 10S: ಬಜೆಟ್ ಬೆಲೆಯ ಈ ಫೋನಿನ ದರದಲ್ಲಿ ಮತ್ತಷ್ಟು ಕಡಿತ: ರೆಡ್ಮಿಯಿಂದ ಬಂಫರ್ ಆಫರ್

ಜೂನ್ 20 ಮತ್ತು 21 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಪಟ್ಟಿ -ಜೂನ್ 20 ರಂದು ಬೆಳಗ್ಗೆ 11.55ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. -ಮಧ್ಯಾಹ್ನ 12.20ಕ್ಕೆ ಯಲಹಂಕ ವಾಯುನೆಲೆಯಿಂದ ಹೆಲಿಕಾಫ್ಟರ್ ಮೂಲಕ ಐಐಎಸ್ಸಿ ಹೆಲಿಪ್ಯಾಡ್ ಗೆ ಆಗಮನ -ಮಧ್ಯಾಹ್ನ 12.30ರಿಂದ 1 ಗಂಟೆಯವರೆಗೆ ಐಐಎಸ್ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ ಮತ್ತು ಬಾಗಚಿ ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ -ಮಧ್ಯಾಹ್ನ 1.15 ಕ್ಕೆ ಹೆಲಿಕಾಪ್ಟರ್ ಮೂಲಕ ಐಐಎಸ್ಸಿ ಹೆಲಿಪ್ಯಾಡ್ ನಿಂದ ಕೊಮ್ಮಘಟ್ಟ ಹೆಲಿಪ್ಯಾಡ್ ಗೆ ಪ್ರಯಾಣ -ಮಧ್ಯಾಹ್ನ 1.35ಕ್ಕೆ ಕೊಮ್ಮಘಟ್ಟ ಹೆಲಿಪ್ಯಾಡ್ ಗೆ ಆಗಮನ -ಮಧ್ಯಾಹ್ನ 1.45ರಿಂದ 3 ಗಂಟೆಯವರೆಗೆ ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಮಾರಂಭ -ಮಧ್ಯಾಹ್ನ 3.15 ಕ್ಕೆ ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟ ಹೆಲಿಪ್ಯಾಡ್ ನಿಂದ ಬೇಸ್ ಹೆಲಿಪ್ಯಾಡ್ ಗೆ ಪ್ರಯಾಣ -ಮಧ್ಯಾಹ್ನ 3.40 ಕ್ಕೆ ಬೇಸ್ ಹೆಲಿಪ್ಯಾಡ್ ಗೆ ಆಗಮನ -ಮಧ್ಯಾಹ್ನ 3.45 ರಿಂದ ಸಂಜೆ 4.30 ರವರೆಗೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ, ಬೇಸ್ ಯುನಿವರ್ಸಿಟಿ ಉದ್ಘಾಟನೆ ಮತ್ತು ಮೇಲ್ದರ್ಜೆಗೇರಿಸಲ್ಪಟ್ಟ ಐಟಿಐಗಳ ಲೋಕಾರ್ಪಣೆ -ಸಂಜೆ 4.30 ರಿಂದ 4.45 ವರೆಗೆ ಕಾಯ್ದಿರಿಸಲ್ಪಟ್ಟ ಸಮಯ -ಸಂಜೆ 5 ಗಂಟೆಗೆ ಬೇಸ್ ಹೆಲಿಪ್ಯಾಡ್ ನಿಂದ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ -ಸಂಜೆ 5.50 ಕ್ಕೆ ಮೈಸೂರಿಗೆ ಆಗಮನ -ಸಂಜೆ 6 ಗಂಟೆಯಿಂದ 7.15 ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ -ರಾತ್ರಿ 7.30 ರಿಂದ 8 ಗಂಟೆಯವರೆಗೆ ಸುತ್ತೂರು ಮಠದಲ್ಲಿ ಕಾರ್ಯಕ್ರಮ -ರಾತ್ರಿ 8.15 ರಿಂದ 8.30 ರವರೆಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ -ರಾತ್ರಿ 8.55 ಕ್ಕೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ

ಜೂನ್ 21ರ ವೇಳ ಪಟ್ಟಿ -ಜೂನ್ 21 ಬೆಳಗ್ಗೆ 6.30ಕ್ಕೆ ಖಾಸಗಿ ಹೋಟೆಲ್ ನಿಂದ ಮೈಸೂರು ಅರಮನೆ ಮೈದಾನಕ್ಕೆ ಆಗಮನ -ಬೆಳಗ್ಗೆ 6.30 ರಿಂದ 7.45 ರವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ -7.45 ರಿಂದ 8 ಗಂಟೆಯವರೆಗೆ ಕಾಯ್ದಿರಿಸಲ್ಪಟ್ಟ ಸಮಯ -8 ಗಂಟೆಯಿಂದ 8.20 ರವರೆಗೆ ಪ್ರದರ್ಶನ ವೀಕ್ಷಣೆ -8.30 ರಿಂದ 9 ಗಂಟೆಯವರೆಗೆ ಮೈಸೂರು ಅರಮನೆಗೆ ಭೇಟಿ -9.20ಕ್ಕೆ ಮೈಸೂರು ಏರ್ ಪೋರ್ಟ್ ನಿಂದ ದೆಹಲಿಗೆ ನಿರ್ಗಮನ.

Published On - 2:38 pm, Sun, 19 June 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ