ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಬೈಕ್​ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಬೈಕ್​ ಸವಾರ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 04, 2022 | 12:27 PM

ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ.

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಬೈಕ್​ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಬೈಕ್​ ಸವಾರ ಸಾವು
ಸಂಗ್ರಹ ಚಿತ್ರ
Follow us on

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಬಳಿ ನಡೆದಿದೆ. ಮಾವಿನಕುಂಟೆ ಗ್ರಾಮದ ರಾಜು(30) ಮೃತ‌ ದುರ್ದೈವಿ. ಬೈಕ್​ಗೆ ಡಿಕ್ಕಿ ಹೊಡೆದ ಬಿಬಿಎಂಪಿ ಕಸದ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ

ರಾಮನಗರ: ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ. ರೈತ ಮುಖಂಡ ಲೋಕೇಶ್ ಪತ್ನಿ ರೂಪಾ(38), ಮಕ್ಕಳಾದ ಹರ್ಷಿತಾ(6), ಸ್ಫೂರ್ತಿ(4) ಮೃತರು.
ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗಾಂಜಾ ಮಾರಾಟ: ಓರ್ವನ ಬಂಧನ

ಯಾದಗಿರಿ: ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯ ಮನೆಯ ಮೇಲೆ‌ ಪೊಲೀಸರು ದಾಳಿ ಮಾಡಿ,  7 ಲಕ್ಷ ಮೌಲ್ಯದ ಒಣ ಗಾಂಜಾ ಜಪ್ತಿ ಮಾಡಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್​ನ ಇಂದಿರಾ ಬಡಾವಣೆಯಲ್ಲಿ ನಡೆದಿದೆ. ಮಹಿಪಾಲ್‌ ಮುಕುಡಿ (23) ಬಂಧಿತ ಆರೋಪಿ. ಗಾಂಜಾ ತಂದುಕೊಟ್ಟು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಗುರುಮಠಕಲ್‌ ಪಿಐ ದೌಲತ್ ಕುರಿ ನೇತೃತ್ವದ ತಂಡದಿಂದ ದಾಳಿ ಮಾಡಿದ್ದು, ಗುರುಮಠಕಲ್‌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಗಂಡನನ್ನ ಬೆಂಗಳೂರಲ್ಲಿ ಕೊಲೆ ಮಾಡಿ ಮಂಡ್ಯದಲ್ಲಿ ಸಿಕ್ಕಿ ಬಿದ್ದ ಹೆಂಡತಿ

ಬೆಂಗಳೂರು: ಗಂಡನನ್ನ ಬೆಂಗಳೂರಲ್ಲಿ ಕೊಲೆ ಮಾಡಿ ಮಂಡ್ಯದಲ್ಲಿ ಹೆಂಡತಿ ಸಿಕ್ಕಿ ಬಿದ್ದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಮಹೇಶ್ ಕೊಲೆಯಾದ ದುರ್ದೈವಿ ಪತಿ. ಹೆಂಡತಿ ಶಿಲ್ಪ ಹಾಗೂ ಶಿಲ್ಪ ಅಕ್ಕನ ಮಗ ಮಹೇಶ್​ನಿಂದ ಕೃತ್ಯವೆಸಗಲಾಗಿದೆ.
ಕೊಲೆಗೆ ಸಹಕರಿಸಿದ್ದ ಶಿಲ್ಪ ತಾಯಿ ಕೂಡ ಅಂದರ್ ಆಗಿದ್ದಾಳೆ. ಕೋಣನಕುಂಟೆ ಪೊಲೀಸರಿಂದ ಶಿಲ್ಪ ಮತ್ತು ಶಿಲ್ಪ ತಾಯಿ ಬಂಧನವಾಗಿದ್ದು, ಮಹೇಶ್ ಪರಾರಿಯಾಗಿದ್ದಾನೆ. ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪ ದಂಪತಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಶಿಲ್ಪ ಬೆಂಗಳೂರಲ್ಲಿ ವಾಸವಿದ್ರೆ, ಮಹೇಶ್ ಮಂಡ್ಯದಲ್ಲಿ ವಾಸವಿದ್ದ. ಆಗಾಗ ಪತಿ ವಾಸವಿದ್ದ ಬೆಂಗಳೂರಿಗೆ ಬಂದು ಹೋಗ್ತಿದ್ದ. ಬರುವಾಲೆಲ್ಲ ಕುಡಿದು ಜಗಳ ಮಾಡ್ತಿದ್ದನಂತೆ. ನಿನಗೆ ಅನೈತಿಕ ಸಂಬಂಧ ಇದೆ ಎಂದು ಕಾಟ ಕೊಡ್ತಿದ್ನಂತೆ. ಈ ಎಲ್ಲಾ ವಿಚಾರವನ್ನು ತನ್ನ ತಾಯಿಗೆ ಹೇಳಿದ್ದ ಶಿಲ್ಪ. ಶಿಲ್ಪ ತಾಯಿ ಹಿರಿ ಮಗಳ ಮಗನಿಗೆ ವಿಚಾರ ಹೇಳಿದ್ಳು. ಬುದ್ಧಿ ಹೇಳಲು ಬಂದು ಮಹೇಶ್ ಮೇಲೆ ಹಲ್ಲೆ ಮಾಡಿದ್ದು, ಈ ವೇಳೆ ಮಹೇಶ್ ಮೃತಪಟ್ಟಿದ್ದಾನೆ.

ಐನಾತಿ ಪತ್ನಿಯಿಂದ ನಾಟಕ ಶುರುವಾಗಿದ್ದು, ನಂತರ ಪಿಡ್ಸ್ ಬಂದು ಸಾವನ್ನಪ್ಪಿದ್ದಾನೆ ಎಂದು ಮೃತದೇಹವನ್ನ ಹುಟ್ಟೂರಿಗೆ  ಶಿಲ್ಪ ತೆಗೆದುಕೊಂಡು ಹೋಗಿದ್ದಾಳೆ. ಈ ವೇಳೆ ಅನುಮಾನಗೊಂಡು ಮೃತದೇಹ ಪರೀಕ್ಷಿಸಿದ್ದ ಮಹೇಶ್ ಪೋಷಕರು, ಮೃತ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಆಗ ಮಂಡ್ಯ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದು, ಈ ವೇಳೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪ್ರಕರಣವನ್ನ ಕೋಣನಕುಂಟೆ ಠಾಣೆಗೆ ವರ್ಗಾಯಿಸಿದ್ದು, ಈಗ ಕೋಣನಕುಂಟೆ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.