ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂ
ಮರದ ಕೊಂಬೆ ಬಿದ್ದು ಬೆಂಗಳೂರು ದಕ್ಷಿಣ ಡಿಸಿಪಿ ಕಾರು ಜಖಂಗೊಂಡಿರುವ ಘಟನೆ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಬಳಿ ನಡೆದಿದೆ.
ಬೆಂಗಳೂರು: ಮರದ ಕೊಂಬೆ ಬಿದ್ದು ಬೆಂಗಳೂರು (Bengaluru) ದಕ್ಷಿಣ ಡಿಸಿಪಿ (DCP) ಕಾರು ಜಖಂಗೊಂಡಿರುವ ಘಟನೆ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಬಳಿ ನಡೆದಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಕಾರಿನಲ್ಲಿ ಬಂದು ಕಚೇರಿ ಒಳಗೆ ತೆರಳಿದ್ದರು. ಆದರೆ ಕಾರು ಚಾಲಕ ಕಾರಿನಲ್ಲೇ ಇದ್ದರು.
ಈ ವೇಳೆ ಕಾರು ಚಾಲಕನಿಗೆ ಫೋನ್ ಕರೆ ಬಂದ ಹಿನ್ನೆಲೆ ಕಾರಿನಿಂದ ಹೊರ ಬಂದಿದ್ದರು. ಚಾಲಕ ಹೊರ ಬರುವ ತಡ ಕಚೇರಿ ಮುಂಭಾಗದಲ್ಲೇ ಇರುವ ಬೃಹರ್ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದೆ. ಇದರಿಂದ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಡಿಸಿಪಿ ಕೃಷ್ಣಕಾಂತ್ ಕಚೇರಿ ಒಳಗೆ ತೆರಳಿ 5 ನಿಮಿಷದಲ್ಲೇ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ. ಚಾಲಕನಿಗೆ ಕಾಲ್ ಬರುವುದು ತಡವಾಗಿದ್ದರೆ ಕಾರ್ ಚಾಲಕನ ಮೇಲೆ ಮರಬಿದ್ದು ಸಾವು ನೋವು ಸಂಭವಿಸುತಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Sun, 4 September 22