ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ (Omicron) ವೈರಸ್ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಆತಂಕ ಹೆಚ್ಚಾಗುತ್ತಿದೆ. ಕೊರೊನಾ ಹರಡದಂತೆ ಸರ್ಕಾರ ಕೂಡಾ ಮಾರ್ಗಸೂಚಿ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಬೇಕಾದರೆ ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಸರ್ಟಿಫಿಕೇಟ್ ತೋರಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಅಂತ ಸರ್ಕಾರ ತಿಳಿಸಿದೆ. ಸರ್ಕಾರದ ಈ ಸೂಚನೆಯನ್ನು ರಾಜಾಜಿನಗರದ ಓರಿಯಾನ್ ಮಾಲ್ ಸಿಬ್ಬಂದಿ ಪಾಲಿಸುತ್ತಿದ್ದು, ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗಷ್ಟೇ ಮಾಲ್ ಒಳಗೆ ಅವಕಾಶ ನೀಡುತ್ತಿದೆ.
ಮಾಲ್ಗೆ ಹೋಗಬೇಕಾದರೆ 2 ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು. ಇಲ್ಲದಿದ್ದರೆ ಅವಕಾಶ ನೀಡಬಾರದು ಅಂತ ಸರ್ಕಾರ ಹೇಳಿದೆ. ಎರಡು ಡೋಸ್ ಪಡೆದವರ ಬಗ್ಗೆ ಓರಿಯಾನ್ ಮಾಲ್ನಲ್ಲಿ ಚೆಕಿಂಗ್ ಆರಂಭವಾಗಿದೆ. ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಿಗಷ್ಟೇ ಅವಕಾಶ ನೀಡಲಾಗುತ್ತಿದೆ. ವ್ಯಾಕ್ಸಿನ್ ಪಡೆಯದವರಿಗೆ ಮಾಲ್ ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ಐನಾನ್ಸ್ನಲ್ಲಿ ಸಿನಿಮಾ ನೋಡಬೇಕೆಂದರೂ ಡಬಲ್ ಡೋಸ್ ಕಡ್ಡಾಯವಾಗಿದೆ. ಹೀಗಾಗಿ ಎರಡು ಡೋಸ್ ಲಸಿಕೆ ಪಡೆಯದ ಕೆಲ ಜನರನ್ನು ಮಾಲ್ ಸಿಬ್ಬಂದಿ ವಾಪಸ್ ಕಳಿಸುತ್ತಿದ್ದಾರೆ.
ಲಸಿಕೆ ಪಡೆದಿರುವ ಬಗ್ಗೆ ಮಾಲ್ ಸಿಬ್ಬಂದಿಗೆ ಸರ್ಟಿಫಿಕೇಟ್ ತೋರಿಸಬೇಕು. ಸರ್ಟಿಫಿಕೇಟ್ ಹೊಂದಿರುವವರು ಮಾತ್ರ ಮಾಲ್ ಒಳಗೆ ಹೋಗುತ್ತಿದ್ದಾರೆ. ಇಲ್ಲದಿದ್ದರವರು ಮಾಲ್ನಿಂದ ವಾಪಸ್ ಕಳುಹಿಸಲಾಗುತ್ತಿದೆ. ಸಿಬ್ಬಂದಿ ಲಸಿಕಾ ಸರ್ಟಿಫಿಕೆಟ್ ಪರಿಶೀಲನೆ ಮಾಡುತ್ತಿರುವುದರಿಂದ ಜನ ಮಾಲ್ ಹೊರಗೆ ಕ್ಯೂ ನಿಂತಿದ್ದಾರೆ. ಸಿಬ್ಬಂದಿ 50 ಮಾಲ್ನಲ್ಲಿ 50 ಡೋಸ್ ಲಸಿಕೆ ಇಟ್ಟುಕೊಂಡಿದ್ದು, ಲಸಿಕೆ ಪಡೆಯದ ಜನರಿಗೆ ನೀಡುತ್ತಿದೆ.
ಇದನ್ನೂ ಓದಿ
ವ್ಯಾಯಾಮ ಮಾಡದೆಯೂ ದೇಹದ ತೂಕ ಇಳಿಸಿಕೊಳ್ಳಿ: ಇಲ್ಲಿದೆ ಸರಳ ಉಪಾಯ
Ajaz Patel: 10 ವಿಕೆಟ್ ಉರುಳಿಸಿ ಇತಿಹಾಸ ನಿರ್ಮಿಸಿದ ಎಜಾಝ್ ಪಟೇಲ್: ಇಲ್ಲಿದೆ ಹೈಲೈಟ್ಸ್