ಕೊರೊನಾ ನಂತರ ಬೆಂಗಳೂರಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆಯತ್ತ: 2022ರಲ್ಲಿ 248 ಸಾವು

|

Updated on: Apr 10, 2023 | 8:13 AM

ಕಡಿಮೆಯಾಗಿದ್ದ ಪಾದಚಾರಿಗಳ ಸಾವಿನ ಸಂಖ್ಯೆ, ಕೊರೊನಾ ನಂತರ ಮತ್ತೆ ಏರಿಕೆಯಾಗುತ್ತಿದೆ. 2022ರಲ್ಲಿ 248 ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರೇ 819 ಜನ ಗಾಯಗೊಂಡಿದ್ದಾರೆ.

ಕೊರೊನಾ ನಂತರ ಬೆಂಗಳೂರಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆಯತ್ತ: 2022ರಲ್ಲಿ 248 ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ (Traffic Rules Break) ಮತ್ತು ಅತಿಯಾದ ವೇಗದ ಪ್ರಯಾಣದಿಂದ ಅಪಘಾತಗಳು ಸಂಭವಿಸುತ್ತಿರುತ್ತವೆ. ಅದರಲ್ಲಂತು ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನಗಳು ಪಾದಚಾರಿಗಳಿಗೆ ಡಿಕ್ಕಿ ಹೊಡೆಯುತ್ತವೆ. ಇದರಿಂದ ಅದೆಷ್ಟೊ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಕಡಿಮೆಯಾಗಿದ್ದ ಪಾದಚಾರಿಗಳ ಸಾವಿನ ಸಂಖ್ಯೆ, ಕೊರೊನಾ ನಂತರ ಮತ್ತೆ ಏರಿಕೆಯಾಗುತ್ತಿದೆ.

2022ರಲ್ಲಿ 248 ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರೇ 819 ಜನ ಗಾಯಗೊಂಡಿದ್ದಾರೆ. ಇನ್ನು 2019ರಲ್ಲಿ 272 ಜನ ಸಾವನ್ನಪ್ಪಿದ್ದರೇ 1,197 ಜನ ಗಾಯಗೊಂಡಿದ್ದಾರೆ. 2013 ರಲ್ಲಿ 382 ಜನ ಪಾದಚಾರಿಗಳು ಮರಣ ಹೊಂದಿದ್ದರೇ, 1,403 ಜನ ಗಾಯಗೊಂಡಿದ್ದಾರೆ.

ಅಜಾಗರುಕತೆಯಿಂದ ಚಾಲನೆ, ಫುಟ್‌ಪಾತ್‌ಗಳಲ್ಲಿ ದ್ವಿಚಕ್ರ ವಾಹನಗಳ ಚಾಲನೆ ಮತ್ತು ಪಾರ್ಕಿಂಗ್, ಸಿಗ್ನಲ್‌ ಜಂಪ್​​ ಮತ್ತು ಒಟ್ಟಾರೆ ಕಳಪೆ ಮೂಲಸೌಕರ್ಯಗಳಿಂದ ಈ ಅಪಘಾತಗಳು ಸಂಭವಿಸುತ್ತಿವೆ. ಕಳೆದೆರಡು ವರ್ಷಗಳಲ್ಲಿ ನಡೆಯುತ್ತಿರುವ ಮೆಟ್ರೊ ಕಾಮಗಾರಿ ಮತ್ತು ರಸ್ತೆ ದುರಸ್ತಿ ಕಾಮಗಾರಿಗಳಿಂದಾಗಿ ಫುಟ್‌ಪಾತ್‌​ಗಳಲ್ಲಿ ಪಾದಚಾರಿಗಳು ಓಡಾಡಲು ತೊಂದರೆಯಾಗುತ್ತಿದೆ. ಇದರಿಂದ ಅಪಘಾತ ಸಂಭವಿಸುತ್ತಿವೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ (ಐಐಎಸ್‌ಸಿ) ಟ್ರಾನ್ಸ್‌ಪೋರ್ಟ್ ಸಿಸ್ಟಮ್ಸ್ ಎಂಜಿನಿಯರಿಂಗ್‌ನ ಪ್ರೊಫೆಸರ್ ಆಶಿಶ್ ವರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಇಂದು ಬೆಂಗಳೂರಿನಲ್ಲಿ IPL ಪಂದ್ಯ, ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ

2022 ರಲ್ಲಿ ಫುಟ್‌ಪಾತ್​​ಗಳಲ್ಲಿ ಸವಾರಿ ಮಾಡಿದ್ದಕ್ಕಾಗಿ 18,144 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಹಿಂದಿನ ವರ್ಷ​​ಕ್ಕಿಂತ ಶೇ ಕ್ಕಿಂತ ಶೇ 115.4 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಸಂಖ್ಯೆ 8,422 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನಗರದ ಹಲವೆಡೆ ವಾಹನ ಸವಾರರು ಫುಟ್‌ಪಾತ್ ಮೇಲೆಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಕಳೆದ ವರ್ಷ, ನಗರದಲ್ಲಿ 1,53,983 ಫುಟ್‌ಬಾತ್ ಪಾರ್ಕಿಂಗ್ ಪ್ರಕರಣಗಳು ದಾಖಲಾಗಿದ್ದವು. 2021 ರಲ್ಲಿ 74,851 ಪ್ರಕರಣಗಳು ದಾಖಲಾಗಿದ್ದು, ಶೇ105 ರಷ್ಟು ಹೆಚ್ಚಳವಾಗಿದೆ. ಇದರರ್ಥ ಪಾದಚಾರಿಗಳಿಗೆ ಅವರಿಗೆ ಮೀಸಲಾದ ಪ್ರದೇಶದಲ್ಲಿ ನಡೆಯಲು ಕಡಿಮೆ ಸ್ಥಳಾವಕಾಶವಿದೆ.

ಈ ವರ್ಷ ಈಗಾಗಲೇ ನಗರದಲ್ಲಿ ಸಿಗ್ನಲ್‌ಗಳನ್ನು ಜಂಪ್ ಮಾಡುವ ವಾಹನಗಳ ಸಂಖ್ಯೆಯಲ್ಲಿ ಆತಂಕಕಾರಿ ಹೆಚ್ಚಳ ಕಂಡುಬಂದಿದೆ. ಫೆಬ್ರವರಿ 28 ರವರೆಗೆ, 1,61,352 ಸಿಗ್ನಲ್​ ಜಂಪ್​​ ಪ್ರಕರಣಗಳು ದಾಖಲಾಗಿವೆ. 2022 ಮತ್ತು 2021ರಲ್ಲಿ 4,20,541 ಮತ್ತು 8,22,529 ಪ್ರಕರಣಗಳು ದಾಖಲಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ