ಬೆಂಗಳೂರಿನಲ್ಲಿ ಪೆಟ್ರೋಲ್ ಕಳ್ಳರ ಹಾವಳಿ: ಇವು ಪೊಲೀಸರಿಗೆ ಸಣ್ಣ ಕೇಸ್, ಜನರಿಗೆ ಮಾತ್ರ ದೊಡ್ಡ ತಲೆನೋವು

|

Updated on: Jun 20, 2023 | 12:33 PM

ನಗರದಲ್ಲಿ ದಿನೇ ದಿನೇ ಪೆಟ್ರೋಲ್-ಡೀಸೆಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಗಾಡಿ ಫುಲ್ ಟ್ಯಾಂಕ್ ಮಾಡಿಸಿ ರಾತ್ರಿ ಮನೆ ಮುಂದೆ ಬೈಕ್ ನಿಲ್ಸಿದ್ರೆ ಸಾಕು, ಬೆಳಕಾಗುಷ್ಟರಲ್ಲಿ ಟ್ಯಾಂಕ್ ಖಾಲಿ ಖಾಲಿಯಾಗಿರುತ್ತದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಕಳ್ಳರ ಹಾವಳಿ: ಇವು ಪೊಲೀಸರಿಗೆ ಸಣ್ಣ ಕೇಸ್, ಜನರಿಗೆ ಮಾತ್ರ ದೊಡ್ಡ ತಲೆನೋವು
ಪೆಟ್ರೋಲ್ ಕಳ್ಳತನ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 101 ರೂ ಇದ್ದು ಪ್ರತಿ ದಿನ ವಾಹನಕ್ಕೆ ಇಂಧನ ತುಂಬಿಸಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಇದರ ನಡುವೆ ಕೆಲ ದುಷ್ಕರ್ಮಿಗಳು ಮನೆಗಳ ಹೊರಗೆ ನಿಲ್ಲಿಸಿರುವ ವಾಹನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಕದಿಯುವ ಘಟನೆಗಳು ಹೆಚ್ಚಾಗಿವೆ(Petrol Diesel Theft). ಇಂಧನ ಕಳ್ಳರು ವಾಹನಗಳಿಂದ ಇಂಧನವನ್ನು ಕಳ್ಳತನ ಮಾಡುವ ಹಲವು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಪೊಲೀಸರಿಗೆ ಇದು ಸಣ್ಣ ಕೇಸ್, ಆದ್ರೆ ಜನ್ರಿಗೆ ಮಾತ್ರ ದೊಡ್ಡ ತಲೆ ನೋವಾಗಿದೆ. ನಗರದಲ್ಲಿ ದಿನೇ ದಿನೇ ಪೆಟ್ರೋಲ್-ಡೀಸೆಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಗಾಡಿ ಫುಲ್ ಟ್ಯಾಂಕ್ ಮಾಡಿಸಿ ರಾತ್ರಿ ಮನೆ ಮುಂದೆ ಬೈಕ್ ನಿಲ್ಸಿದ್ರೆ ಸಾಕು, ಬೆಳಕಾಗುಷ್ಟರಲ್ಲಿ ಟ್ಯಾಂಕ್ ಖಾಲಿ ಖಾಲಿಯಾಗಿರುತ್ತದೆ. ಒಂದೊಂದು ಏರಿಯಾದಲ್ಲೂ ಐದರಿಂದ ಆರು ಘಟನೆಗಳು ಬೆಳಕಿಗೆ ಬಂದಿವೆ. ಪೆಟ್ರೋಲ್ ಕಳ್ಳತನ ಎಂದು ಪೊಲೀಸ್ ಸ್ಟೇಷನ್​ಗೆ ಹೋದ್ರೆ ಪೊಲೀಸರು ಇದೊಂದು ಕಾಮಾನ್ ಕೇಸ್ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಎಲ್ಲೂ ಕೇಸ್ ದಾಖಲಾಗುತ್ತಿಲ್ಲ. ಪೊಲೀಸರು ಈ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ಹೀಗಾಗಿ ಇಂಧನ ಖದೀಮರು ಆಡಿದ್ದೇ ಆಟವಾಗಿ ಹೋಗಿದೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮಳೆ, ಹಲವಡೆ ಟ್ರಾಫಿಕ್ ಜಾಮ್ ಅಂಡರ್​ ಪಾಸ್​ ಬಂದ್

ಇನ್ನು ಖದೀಮರು ವಾಹನಗಳಿಂದ ಪೆಟ್ರೋಲ್ ಕಳ್ಳತನ‌ ಮಾಡಿ ಬ್ಲಾಕ್ ನಲ್ಲಿ ಮಾರುತ್ತಿರುವ ಶಂಕೆ ವ್ಯಕ್ತವಾಗಿದೆ. ಇದು ಒಂದು ರೀತಿ ದಂಧೆಯಾಗಿ ಪರಿವರ್ತನೆಯಾಗ್ತಿದ್ಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಇತ್ತ ಪೆಟ್ರೋಲ್ ಕಳ್ಳತನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಂಪ್ಲೆಂಟ್ಸ್ ಹೆಚ್ಚಾಗುತ್ತಿದೆ. ದಿನೇ ದಿನೇ ಸೋಷಿಯಲ್‌ ಮೀಡಿಯಾದಲ್ಲಿ ಪೆಟ್ರೋಲ್ ಕಳ್ಳತನದ ಬಗ್ಗೆ ಪೊಲೀಸ್ ಕಮಿಷನರ್​ಗೆ ಟ್ಯಾಗ್ ಮಾಡಿ ಜನರು ದೂರು ನೀಡುತ್ತಿದ್ದಾರೆ. ಸಾಲು ಸಾಲು ದೂರು ನೋಡಿ ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಗರಂ ಆಗಿದ್ದು ಕೂಡಲೇ ಈ ಬಗ್ಗೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:24 pm, Tue, 20 June 23