AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರನ್‌ವೇಯಲ್ಲಿ ವಿಮಾನ ಕೆಟ್ಟು ನಿಂತ್ರೆ ತೆರವು ಮಾಡೋದು ಹೇಗೆ? ತೋರಿಸಲು ಬೆಂಗಳೂರಿಗೆ ಬಂದ ದೈತ್ಯ ‘ಫೀನಿಕ್ಸ್’

ಅನಾಹುತ ತಪ್ಪಿತ್ತು. ಅಲ್ಲದೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಲ್ಲೂ ಸಹ ಇಂಡಿಗೋ ವಿಮಾನ ಟೇಕಫ್ ಆಗುವಾಗ ತಾಂತ್ರಿಕ ದೋಷ ಕಂಡುಬಂದಿತ್ತು. ರನ್‌ವೇಯಲ್ಲಿ ವಿಮಾನ ಕೆಟ್ಟು ನಿಂತರೆ ತೆರವು ಮಾಡೋದು ಹೇಗೆ? ಎನ್ನುವುದನ್ನು ಪ್ರಾಯೋಗಿಕ ತರಬೇತಿಗಾಗಿ ದೈತ್ಯ ‘ಫೀನಿಕ್ಸ್’ ಬೆಂಗಳೂರಿಗೆ ಬಂದಿದೆ.

ರನ್‌ವೇಯಲ್ಲಿ ವಿಮಾನ ಕೆಟ್ಟು ನಿಂತ್ರೆ ತೆರವು ಮಾಡೋದು ಹೇಗೆ? ತೋರಿಸಲು ಬೆಂಗಳೂರಿಗೆ ಬಂದ ದೈತ್ಯ ‘ಫೀನಿಕ್ಸ್’
ಫೀನಿಕ್ಸ್
ರಮೇಶ್ ಬಿ. ಜವಳಗೇರಾ
|

Updated on: Nov 18, 2026 | 7:01 PM

Share

ಬೆಂಗಳೂರು, (ನವೆಂಬರ್ 18): ರನ್‌ವೇ ಅಥವಾ ವಿಮಾನ ನಿಲ್ದಾಣದ ಆವರಣದಲ್ಲಿ ಕೆಟ್ಟು ನಿಂತ ವಿಮಾನಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ತರಬೇತಿಗಾಗಿ ದೈತ್ಯ ಬೋಯಿಂಗ್ 737-200 ವಿಮಾನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಇತ್ತೀಚೆಗೆ ಇದನ್ನು ಅನಾವರಣಗೊಳಿಸಲಾಯಿತು. ಇನ್ನು ಇದಕ್ಕೆ ಫೀನಿಕ್ಸ್‌ ಎಂದು ಮರುನಾಮಕರಣ ಮಾಡಲಾಗಿದೆ.

ವಿಮಾನ ನಿಲ್ದಾಣದ ‘ಏರ್‌ಕ್ರಾಫ್ಟ್ ರಿಕವರಿ ಟ್ರೈನಿಂಗ್ ಸ್ಕೂಲ್’ (ಎಆರ್‌ಟಿಎಸ್‌)ಗಾಗಿ ಈ ನಿಜವಾದ ವಿಮಾನವನ್ನು ತರಲಾಗಿದ್ದು, ತರಬೇತಿಗಾಗಿ ಸಿದ್ಧಪಡಿಸಲಾಗಿದೆ. ಮೊದಲು ತಮ್ಮದೇ ಸಿಬ್ಬಂದಿಗೆ ಪರಿಣತಿ ನೀಡಲೆಂದು ಈ ತರಬೇತಿ ಕೇಂದ್ರವನ್ನು ಶುರು ಮಾಡಲಾಗಿತ್ತು. ಈಗ ಜಗತ್ತಿನ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಾಯುಯಾನ ವೃತ್ತಿಪರರಿಗೂ ಇದನ್ನು ಮುಕ್ತಗೊಳಿಸಲಾಗಿದೆ. ಅಂದರೆ, ಯಾರು ಬೇಕಿದ್ದರೂ ಬಂದು ಇಲ್ಲಿ ತರಬೇತಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಬೆನ್ನಲ್ಲೇ ಮಂಗಳೂರಿನಲ್ಲೂ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಟೇಕಾಫ್ ವೇಳೆ ತಪ್ಪಿತು ಭಾರೀ ಅನಾಹುತ

ಈ ಹಿಂದೆ ‘ಬೇಬಿ ಬೋಯಿಂಗ್’ ಎಂದು ಕರೆಯಲ್ಪಡುತ್ತಿದ್ದ ಈ ತರಬೇತಿ ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಹಾರಾಟ ನಿಲ್ಲಿಸಿ ನಿಂತಿತ್ತು. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ. (ಬಿಐಎಎಲ್‌) ಇದನ್ನು ಖರೀದಿಸಿ ತಂದು ಅದಕ್ಕೆ ‘ಫೀನಿಕ್ಸ್’ ಎಂದು ಹೆಸರು ಇಟ್ಟಿದೆ.

ಕೊಲ್ಕತ್ತಾದಿಂದ ಬೆಂಗಳೂರಿಗೆ 45 ದಿನಗಳ ಸುದೀರ್ಘ ಪ್ರಯಾಣ

ಕೋಲ್ಕತ್ತಾದಿಂದ ಬೆಂಗಳೂರಿಗೆ ಈ ವಿಮಾನವನ್ನು ತರುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ರಸ್ತೆ ಮಾರ್ಗವನ್ನು ಇದನ್ನು ಕೊಂಡೊಯ್ಯಬಹುದು ಎಂಬ ತೀರ್ಮಾನಕ್ಕೆ ಬಂದ ನಂತರ ವಿಮಾನದ ಭಾಗಗಳನ್ನು ಬಿಚ್ಚಿ ನಾಲ್ಕು ವಿಶೇಷ ಟ್ರೇಲರ್‌ಗಳ ಮೂಲಕ ಬೆಂಗಳೂರಿಗೆ ತರಲಾಯಿತು. ಇದಕ್ಕೆ ಬರೋಬ್ಬರಿ 45 ದಿನ ಹಿಡಿಯಿತು. ಬಳಿಕ ವಿಮಾನದ ಮೂಲ ತಯಾರಕರ ನಿಯಮದಂತೆಯೇ ಅದರ ಎಂಜಿನ್, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಕಾಕ್‌ಪಿಟ್ ಅನ್ನು ಹಾಗೆಯೇ ಉಳಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಂತ ನಿಖರವಾಗಿ ಮತ್ತೆ ಜೋಡಿಸಲಾಗಿದೆ.

‘ಎಆರ್‌ಟಿಎಸ್‌’ ದಕ್ಷಿಣ ಏಷ್ಯಾದಲ್ಲೇ ಕೆಟ್ಟು ನಿಂತ ವಿಮಾನಗಳ ತೆರವು ತರಬೇತಿಗಾಗಿ ಮೀಸಲಾದ ಏಕೈಕ ಶಾಲೆಯಾಗಿದೆ. ಇದು ಈ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಜರ್ಮನಿಯ ‘ಕುಂಜ್’ ಸಂಸ್ಥೆ ಮತ್ತು ಬಿಐಎಎಲ್‌ನ ಪ್ರಮಾಣೀಕೃತ ತರಬೇತುದಾರರ ಸಹಯೋಗದಲ್ಲಿ ವಿಶೇಷ ಕೋರ್ಸ್‌ಗಳನ್ನು ನಡೆಸುತ್ತಿದೆ.

ಇಲ್ಲಿ 5 ದಿನಗಳ ಅಡ್ವಾನ್ಸ್‌ಡ್ ಪ್ರಾಯೋಗಿಕ ಕೋರ್ಸ್, 3 ದಿನಗಳ ಬೇಸಿಕ್ ಕೋರ್ಸ್ ಹಾಗೂ 1 ದಿನದ ಉಪಕರಣಗಳ ಪರಿಚಯ ಕಾರ್ಯಕ್ರಮ (ಓಪನ್ ಹೌಸ್) ಇರುತ್ತದೆ. ತರಗತಿ ಪಾಠದ ಜೊತೆಗೆ ವಿಮಾನದ ಮುಂಭಾಗದ ಚಕ್ರ (ನೋಸ್ ವೀಲ್) ಅಥವಾ ಲ್ಯಾಂಡಿಂಗ್ ಗೇರ್ ಕುಸಿದಾಗ ಪರಿಸ್ಥಿತಿ ನಿಭಾಯಿಸುವುದು, ವಿಮಾನವನ್ನು ಮೇಲಕ್ಕೆತ್ತುವುದು, ಎಳೆದೊಯ್ಯುವುದು ಹಾಗೂ ಇದಕ್ಕಾಗಿ ನೆಲವನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೈಜ ಸನ್ನಿವೇಶಗಳ ಮೂಲಕ ಕಲಿಸಲಾಗುತ್ತದೆ. ಪ್ರತಿ ಬ್ಯಾಚ್‌ನಲ್ಲಿ ಸುಮಾರು 16 ಮಂದಿಗೆ ತರಬೇತಿ ನೀಡಿ, ‘ಕುಂಜ್’ ಮತ್ತು ಬಿಐಎಎಲ್ ಪ್ರಮಾಣಪತ್ರ ನೀಡಲಾಗುತ್ತದೆ.

ವಿಮಾನಗಳು ಓಡಾಡುವ ಜಾಗದಲ್ಲಿ ಚಲಿಸಲಾಗದೆ ನಿಂತ ವಿಮಾನಕ್ಕೆ ಮತ್ತಷ್ಟು ಹಾನಿಯಾಗದಂತೆ ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸುವುದೇ ‘ಡಿಸೇಬಲ್ಡ್ ಏರ್‌ಕ್ರಾಫ್ಟ್ ರಿಕವರಿ’ಯ ಮುಖ್ಯ ಉದ್ದೇಶ. ಇದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣವು ಕೋಡ್-ಎಫ್ ಶ್ರೇಣಿಯ ಅತಿ ದೊಡ್ಡ ವಿಮಾನಗಳನ್ನೂ ಎತ್ತಬಲ್ಲ ಕಡಿಮೆ ಒತ್ತಡದ ಗಾಳಿ ತುಂಬುವ ಲಿಫ್ಟಿಂಗ್ ಬ್ಯಾಗ್‌ಗಳು ಸೇರಿದಂತೆ ಅತ್ಯಾಧುನಿಕ ‘ಡೇರ್’ ಉಪಕರಣಗಳನ್ನು ಹೊಂದಿದೆ.

ಈ ಕುರಿತು ಹೆಚ್ಚಿನ ವಿವರ ನೀಡಿರುವ ಬಿಐಎಎಲ್ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಗಿರೀಶ್ ನಾಯರ್, “ಭಾರತದ ವಿಮಾನಯಾನ ಕ್ಷೇತ್ರ ಮುಂದಿನ ಹಂತದ ಬೆಳವಣಿಗೆಗೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ತೊಂದರೆ ಎದುರಾದಾಗ ಮಾತ್ರ ಸ್ಪಂದಿಸುವುದಲ್ಲ, ಮೊದಲೇ ಸಿದ್ಧವಾಗಿರುವುದು ನಮ್ಮ ಗುರಿ. ವಿಮಾನ ನಿಲ್ದಾಣಗಳು, ಏರ್‌ಲೈನ್‌ಗಳು ಹಾಗೂ ನಿಯಂತ್ರಕರು ಪರಸ್ಪರ ಜ್ಞಾನ ಹಂಚಿಕೊಳ್ಳುವುದರಿಂದ ಭಾರತ ಮತ್ತು ಆಗ್ನೇಯ ಏಷ್ಯಾದ ವಾಯುಯಾನ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಲಿದೆ,” ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?