
ಬೆಂಗಳೂರು, ನವೆಂಬರ್ 12: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 13, ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡುತ್ತಿರುವುದರಿಂದ, ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಬೆಂಗಳೂರು ಸಂಚಾರ ಪೊಲೀಸರು ನಗರದ ಹಲವೆಡೆ ತಾತ್ಕಾಲಿಕ ಸಂಚಾರ ಮಾರ್ಪಾಡು ಮಾಡಿದ್ದಾರೆ. ಅತಿಗಣ್ಯರು ಸಂಚರಿಸುವ ಮತ್ತು ಕಾರ್ಯಕ್ರಮ ನಡೆಯುವ ಸ್ಥಳಗಳ ಬಳಿ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಮತ್ತು ಕಚೇರಿಗಳಿಗೆ ತೆರಳುವವರು ದಟ್ಟಣೆ ತಪ್ಪಿಸಲು ಸೂಚಿಸಿದ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ‘ಮ್ಮ ಮೆಟ್ರೋ’ ಪಿಂಕ್ ಲೈನ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ತಾವರೆಕೆರೆಯಿಂದ ಐಐಎಂ ಬೆಂಗಳೂರು ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ. ಬೆಂಗಳೂರಿನಲ್ಲಿ ₹15,600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರ ಪ್ರಕಟಣೆಯ ಪ್ರಕಾರ, ಠಾಣಾ ವ್ಯಾಪ್ತಿಯ ಪ್ರಕಾರ ನಿರ್ಬಂಧ ಮತ್ತು ಪರ್ಯಾಯ ಮಾರ್ಗಗಳು ಹೀಗಿವೆ;
ಬನ್ನೇರುಘಟ್ಟ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ಎಲ್ಲ ವಾಹನಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್ ಮತ್ತು ಡೈರಿ ಸರ್ಕಲ್ ಅಂಡರ್‌ಪಾಸ್ ಬಳಿ, ಕಾರ್ಯಕ್ರಮ ನಡೆಯುವ ವೇಳೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ: ಆನೇಪಾಳ್ಯ ಕಡೆಯಿಂದ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ವಾಹನಗಳು ಮೈಕೋಬಂಡೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ನ್ಯೂ ಮೈಕೋ ರಸ್ತೆ ಮೂಲಕ ಆಡುಗೋಡಿ ಜಂಕ್ಷನ್‌ಗೆ ಬಂದು, ಅಲ್ಲಿಂದ ಬಲತಿರುವು ಪಡೆದು ಹೊಸೂರು ಲಸ್ಕರ್ ಮುಖ್ಯರಸ್ತೆಯಲ್ಲಿ ಸಾಗಬೇಕು. ಇನ್ನು ಕೆಲವು ವಾಹನಗಳು ಬಿ.ಜಿ. ರಸ್ತೆಯ ಮುಖಾಂತರ ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ, ಡೈರಿ ಸರ್ಕಲ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಡಾ. ಮರಿಗೌಡ ರಸ್ತೆ ಮೂಲಕ ಮಡಿವಾಳ ಚೆಕ್‌ಪೋಸ್ಟ್ ಹಾಗೂ ಹೊಸೂರು ರಸ್ತೆಗೆ ತಲುಪಿ ಮುಂದೆ ಸಾಗಬಹುದು.
ಪರ್ಯಾಯ ಮಾರ್ಗ: ಬನಶಂಕರಿ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ಸವಾರರು ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆ ಮೂಲಕ ಸಾಗಬೇಕು (ವಿವಿಐಪಿ ಸಂಚಾರದ ಸಮಯ ಹೊರತುಪಡಿಸಿ). ಈಸ್ಟ್ ಎಂಡ್ ಜಂಕ್ಷನ್ ಕಡೆಯಿಂದ ಸ್ವಾಗತ್ ಜಂಕ್ಷನ್ ಕಡೆಗೆ ಹೋಗುವವರು 28ನೇ ಮುಖ್ಯ ರಸ್ತೆ ಹಾಗೂ ಈಸ್ಟ್ ಎಂಡ್ ರಸ್ತೆ ಮೂಲಕ ಬಲ ಮತ್ತು ಎಡ ತಿರುವು ಪಡೆದು ಸ್ವಾಗತ್ ರಸ್ತೆ ಹಾಗೂ ಜೆ.ಪಿ. ನಗರ ಡಾಲ್ಮಿಯಾ ಜಂಕ್ಷನ್ ಕಡೆಗೆ ಹೋಗಬಹುದು.
ಹೊರವರ್ತುಲ ರಸ್ತೆಯ 15ನೇ ಕ್ರಾಸ್ ಮತ್ತು 24ನೇ ಮುಖ್ಯರಸ್ತೆ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ಜೆ.ಡಿ. ಮರ ಜಂಕ್ಷನ್ ವರೆಗೆ, ಆರ್.ವಿ. ಡೆಂಟಲ್ ಜಂಕ್ಷನ್‌ನಿಂದ ಬನ್ನೇರುಘಟ್ಟ ಮುಖ್ಯರಸ್ತೆಯವರೆಗೆ (9ನೇ ಅಡ್ಡ ರಸ್ತೆ) ಹಾಗೂ ಬಿ.ಪಿ.ಎಲ್ ಅರಕೆರೆ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆಯವರೆಗೆ ನಿರ್ಬಂಧ ಇರಲಿದೆ.
ಪರ್ಯಾಯ ಮಾರ್ಗ: ಹೊಸೂರು ರಸ್ತೆ ಕಡೆಗೆ ಹೋಗುವ ವಾಹನ ಸವಾರರು ಕನಕಪುರ ಮುಖ್ಯರಸ್ತೆ, ಬನಶಂಕರಿ ಬಸ್ ನಿಲ್ದಾಣದ ಮೂಲಕ 46ನೇ ಅಡ್ಡ ರಸ್ತೆಯಲ್ಲಿ ಸಂಚರಿಸಬೇಕು. ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವವರು ಕನಕಪುರ ಮುಖ್ಯರಸ್ತೆಯಲ್ಲಿ ಮುಂದುವರಿದು ಕೋಣನಕುಂಟೆ ಕ್ರಾಸ್ ಅಥವಾ ಎ2ಬಿ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಬಿ.ಪಿ.ಎಲ್ ಅರಕೆರೆ ಮುಖ್ಯರಸ್ತೆಯಲ್ಲಿ ಸಂಚರಿಸುವವರು ಕೊತ್ತನೂರು ದಿಣ್ಣೆ ರಸ್ತೆ ಮೂಲಕ ಸಾಗಬೇಕು.
ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅರಕೆರೆ, ಬಿಳೇಕಹಳ್ಳಿ, ಮೈಕೋ ಲೇಔಟ್, ಡೈರಿ ಸರ್ಕಲ್ ಹಾಗೂ ನಗರದ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಬನ್ನೇರುಘಟ್ಟ ರಸ್ತೆಯಲ್ಲಿ ಡೈರಿ ಸರ್ಕಲ್ ಜಂಕ್ಷನ್‌ನಿಂದ ಅರಕೆರೆ ಜಂಕ್ಷನ್‌ವರೆಗೆ ಗಣ್ಯ ವ್ಯಕ್ತಿಗಳು ಸಂಚರಿಸುವ ಸಂದರ್ಭದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ;
ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಸಹಕರಿಸುವಂತೆ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ