ಬೆಂಗಳೂರಲ್ಲಿ ನಾಳೆ ಮೋದಿ ರೋಡ್​ ಶೋ; 23 ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ, ಇಲ್ಲಿದೆ ವಿವರ

ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ರೋಡ್​ ಶೋ ನಾಳೆ (ಮೇ 7) ಬೆಂಗಳೂರಿನಲ್ಲಿ ನಡೆಯಲಿದೆ. ನಗರದ 23 ರಸ್ತೆಗಳಲ್ಲಿ ಮೋದಿ ಸಂಚರಿಸಲಿದ್ದು, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಬೆಂಗಳೂರಲ್ಲಿ ನಾಳೆ ಮೋದಿ ರೋಡ್​ ಶೋ; 23 ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ, ಇಲ್ಲಿದೆ ವಿವರ
ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ

Updated on: May 06, 2023 | 6:55 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಎರಡನೇ ರೋಡ್​ ಶೋ ನಾಳೆ (ಮೇ 7) ಬೆಂಗಳೂರಿನಲ್ಲಿ ನಡೆಯಲಿದೆ. ನಗರದ 23 ರಸ್ತೆಗಳಲ್ಲಿ ಮೋದಿ ಸಂಚರಿಸಲಿದ್ದು, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ 11.30ರ ಅವಧಿಯಲ್ಲಿ ರೋಡ್ ಶೋ ನಡೆಯಲಿದೆ. ಬೆಳಗ್ಗೆ 8ರಿಂದ 12 ಗಂಟೆಯ ವರೆಗೆ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೋದಿ ಅವರ ಮೊದಲ ರೋಡ್ ಶೋ ಇಂದು (ಶನಿವಾರ) ಭರ್ಜರಿಯಾಗಿ ನಡೆದಿತ್ತು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವಿಚಾರವಾಗಿ ಮೋದಿ ಹರ್ಷ ವ್ಯಕ್ತಪಡಿಸಿದ್ದರು.

ಭಾನುವಾರ ಸಂಚಾರಕ್ಕೆ ನಿರ್ಬಂಧ ಹೇರಿರುವ ರಸ್ತೆಗಳ ವಿವರ ಇಲ್ಲಿದೆ.

  • ರಾಜಭವನ ರಸ್ತೆ
  • ಮೇಖ್ರಿ ಸರ್ಕಲ್
  • ರೇಸ್​​ಕೋರ್ಸ್ ರಸ್ತೆ
  • ಟಿ ಚೌಡಯ್ಯ ರಸ್ತೆ
  • ರಮಣಮಹರ್ಷಿ ರಸ್ತೆ
  • ಹಳೆ ವಿಮಾನನಿಲ್ದಾಣ ರಸ್ತೆ
  • ಸುರಂಜನ್​ದಾಸ್ ರಸ್ತೆ
  • ಎಂಜಿ ರಸ್ತೆ
  • ಬ್ರಿಗೇಡ್ ರಸ್ತೆ
  • ರೇಸ್​​ಕೋರ್ಸ್ ರಸ್ತೆ
  • ಟಿ ಚೌಡಯ್ಯ ರಸ್ತೆ
  • ರಮಣಮಹರ್ಷಿ ರಸ್ತೆ
  • ಜಗದೀಶ ನಗರ ಕ್ರಾಸ್ ರಸ್ತೆ
  • ಜೆಬಿ ನಗರ ಮುಖ್ಯ ರಸ್ತೆ
  • ಬಿಇಎಂಎಲ್ ಜಂಕ್ಷನ್
  • ನ್ಯೂ ತಿಪ್ಪಸಂದ್ರ ಮಾರ್ಕೆಟ್ ರಸ್ತೆ
  • 80 ಅಡಿ ರಸ್ತೆ ಇಂದಿರಾನಗರ
  • ನ್ಯೂ ತಿಪ್ಪಸಂದ್ರ ರಸ್ತೆ
  • 12ನೇ ಮುಖ್ಯ ರಸ್ತೆ 100 ಅಡಿ ರಸ್ತೆ, ಇಂದಿರಾ ನಗರ, ಕಾವೇರಿ ಸ್ಕೂಲ್
  • ಸಿಎಂಎಚ್ ರಸ್ತೆ
  • 17ನೇ ಕ್ರಾಸ್, ಆದರ್ಶ ಜಂಕ್ಷನ್
  • ಹಲಸೂರು ಮೆಟ್ರೋ ಸ್ಟೇಷನ್
  • ಟ್ರಿನಿಟಿ ಜಂಕ್ಷನ್

ಯಾವೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ?

ಮೋದಿ ಅವರ ರೋಡ್​ ಶೋ ಭಾನುವಾರ ಮಹದೇವಪುರ, ಕೆಆರ್​ ಪುರಂ, ಸಿವಿ ರಾಮನ್ ನಗರ, ಶಿವಾಜಿನಗರ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಗಲಿದೆ.

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತಗಳನ್ನು ಕ್ರೋಢೀಕರಿಸಲು ಬಿಜೆಪಿಯ ಕೊನೆಯ ಪ್ರಯತ್ನದ ಭಾಗವಾಗಿ ಎರಡು ರೋಡ್‌ಶೋಗಳು ನಡೆಯುತ್ತಿವೆ. ಮೋದಿ ಅವರು ಶನಿವಾರ ಬೆಂಗಳೂರಿನಲ್ಲಿ 26 ಕಿಲೋಮೀಟರ್ ವ್ಯಾಪ್ತಿಯ ರೋಡ್ ಶೋ ನಡೆಸಿದ್ದಾರೆ.

ರಾಜ್ಯದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us