ಈ ಬಾರಿಯೂ ರಾಜ್ಯದಲ್ಲಿ ಹೊಸವರ್ಷ ಸಂಭ್ರಮಾಚರಣೆಗೆ ಬ್ರೆಕ್ ಬಿದ್ದಿದೆ. ಇಂದಿನಿಂದ ರಾತ್ರಿ 10ರಿಂದ ಬೆಳಗ್ಗೆ 5ರವರಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಹೊಸ ವರ್ಷ ಸಂಭ್ರಮಾಚರಣೆ ಮೇಲೆ ಖಾಕಿ ಹದ್ದಿನ ಕಣ್ಣು ಇರಿಸಿದ್ದು, ನಗರದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ನಗರದ ಗಲ್ಲಿ ಗಲ್ಲಿಯಲ್ಲಿ ನಾಕಾಬಂದಿ ಹಾಕಿ ಬಂದೋಬಸ್ತ್ ಮಾಡಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಆಗ್ನೇಯ ವಿಭಾಗ ಒಂದರಲ್ಲಿ ಹಿರಿಯ ಅಧಿಕಾರಿಗಳ ಟೀಂ ಜತೆ 1410 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ಆಯ ಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಜೊತೆ ಜೊತೆಗೆ ಡ್ರೋನ್ ಕ್ಯಾಮೆರಾದ ವ್ಯವಸ್ಥೆ ಕೂಡ ಮಾಡಲಾಗಿದೆ. ಬೆಂಗಳೂರಿನ ಹಲವು ನಗರಗಳನ್ನು ಪೊಲೀಸರು ಬಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ಬಾರ್, ರೆಸ್ಟೋರೆಂಟ್ಗಳನ್ನು ಮುಚ್ಚುವಂತೆ ಬೆಂಗಳೂರು ಕಮಿಷನರ್ ಖಡಕ್ ಆದೇಶ ನೀಡಿದ್ದಾರೆ.
ಇನ್ನು ಬೆಂಗಳೂರಿನ ಪೂರ್ವದ ಪ್ರಮುಖ ಬೀದಿಗಳಾದ ಶಿವಾಜಿ ನಗರ, ರಿಂಗ್ ರೋಡ್, ಕಬ್ಬನ್ ರೋಡ್, ಬಿಆರ್ ವಿ ಜಂಕ್ಷನ್, ಕಿತ್ತುರು ರಾಣಿ ಚೆನ್ನಮ್ಮ ಕ್ರೀಡಾಂಗಣ, ಕಾಸ್ಮೋಟಿಕ್ ಕ್ಲಬ್, ಗರುಡ ಸ್ವಾಗತ್ ಮಾಲ್, ಆಟೋ ಸ್ಟಾಂಡ್, ಸೀಮಾ ಟವರ್ ಜಂಕ್ಷನ್ ಸೇರಿದಂತೆ ಎಲ್ಲೆಡೆ ನಾಕಾಬಂದಿ ಹಾಕಿ ಪೊಲೀಸರು ಜನ ಅನಗತ್ಯವಾಗಿ ಓಡಾಡದಂತೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅದೇ ರೀತಿ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕಾಳಿದಾಸ ರೋಡ್, ಮಾರ್ಕೇಟ, ಕಲಾಸಿಪಾಳ್ಯ, ಚಾಮರಾಜಪೇಟೆ ಸೇರಿ ಹಲವು ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ. ಸುಖಾಸುಮ್ಮನೆ ಓಡಾಡಿದರೆ ಬಿಗಿ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಕೊರೋನಾ , ಒಮಿಕ್ರಾನ್ ಆತಂಕದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ವರ್ಷ ಆಚರಣೆಗೆ ನಿಷೇಧ ಹೇರಿದ್ದು ಇಂದಿನಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ವಿಧಿಸಿದೆ.
ಇದನ್ನು ಓದಿ:
Bengaluru: ಮಂಗಳವಾರ ಫ್ಲೈಓವರ್ಗಳನ್ನು ಮುಚ್ಚುವುದಿಲ್ಲ; ಬುಧವಾರದಿಂದ ಫ್ಲೈಓವರ್ ಕ್ಲೋಸ್ ಆಗಿರಲಿದೆ- ಕಮಲ್ ಪಂತ್
Published On - 5:32 pm, Tue, 28 December 21