Bengaluru: ಮಂಗಳವಾರ ಫ್ಲೈಓವರ್​ಗಳನ್ನು ಮುಚ್ಚುವುದಿಲ್ಲ; ಬುಧವಾರದಿಂದ ಫ್ಲೈಓವರ್ ಕ್ಲೋಸ್ ಆಗಿರಲಿದೆ- ಕಮಲ್ ಪಂತ್

ಡಿಸೆಂಬರ್ 31ರಂದೂ ನೈಟ್ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿಸೆಂಬರ್ 31ರ ರಾತ್ರಿ ರಸ್ತೆಗಳಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ ಇರಲ್ಲ. ಬ್ರಿಗೇಡ್ ರೋಡ್, ಎಂ.ಜಿ. ರೋಡ್, ಕೋರಮಂಗಲ ಹಾಗೂ ಇಂದಿರಾನಗರದ ಕಡೆ ಯಾರೂ ಅನಗತ್ಯವಾಗಿ ಬರುವಂತಿಲ್ಲ.

Bengaluru: ಮಂಗಳವಾರ ಫ್ಲೈಓವರ್​ಗಳನ್ನು ಮುಚ್ಚುವುದಿಲ್ಲ; ಬುಧವಾರದಿಂದ ಫ್ಲೈಓವರ್ ಕ್ಲೋಸ್ ಆಗಿರಲಿದೆ- ಕಮಲ್ ಪಂತ್
ಕಮಲ್ ಪಂತ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Dec 28, 2021 | 3:40 PM

ಬೆಂಗಳೂರು: ನಗರದಲ್ಲಿ ಮಂಗಳವಾರ (ಡಿಸೆಂಬರ್ 28) ಫ್ಲೈಓವರ್‌ಗಳನ್ನು ಕ್ಲೋಸ್ ಮಾಡುವುದಿಲ್ಲ. ನಾಳೆಯಿಂದ ಫ್ಲೈಓವರ್‌ಗಳನ್ನು ಕ್ಲೋಸ್ ಮಾಡುತ್ತೇವೆ. ರಾತ್ರಿ 10ರ ಬಳಿಕ ವಾಣಿಜ್ಯ ಚಟುವಟಿಕೆ ಬಂದ್ ಮಾಡಬೇಕು. ಬೆಂಗಳೂರಿನಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಪರಿಶೀಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ನೈಟ್ ಕರ್ಫ್ಯೂ ಕುರಿತಾಗಿ ವಿವರಣೆ ನೀಡಿದ್ದಾರೆ.

ರಾತ್ರಿ 10ರ ಬಳಿಕ ಹೋಟೆಲ್‌, ಪಬ್‌, ರೆಸ್ಟೋರೆಂಟ್ ಕ್ಲೋಸ್ ಆಗಲಿದೆ. ಡಿಸೆಂಬರ್ 31ರಂದೂ ನೈಟ್ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿಸೆಂಬರ್ 31ರ ರಾತ್ರಿ ರಸ್ತೆಗಳಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ ಇರಲ್ಲ. ಬ್ರಿಗೇಡ್ ರೋಡ್, ಎಂ.ಜಿ. ರೋಡ್, ಕೋರಮಂಗಲ ಹಾಗೂ ಇಂದಿರಾನಗರದ ಕಡೆ ಯಾರೂ ಅನಗತ್ಯವಾಗಿ ಬರುವಂತಿಲ್ಲ. ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡಿದವರಿಗೆ ಮಾತ್ರ ಅವಕಾಶ ಇರಲಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಾಗು ಅವಶ್ಯಕತೆ ಇದ್ದವರು ತಿರುಗಾಡಬಹುದು. ನಾಕ ಬಂಧಿಯನ್ನು ಹಾಕಲಾಗುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ ಒಮಿಕ್ರಾನ್ ಸೈಲೆಂಟಾಗಿಯೇ ಆರ್ಭಟ ಶುರು ಮಾಡ್ತಿದೆ. ದಿನಕ್ಕೆ ಒಂದೋ, ಎರಡೋ ಬರ್ತಿದ್ದ ಕೇಸ್‌ಗಳು ಈಗ ಹತ್ತು, ಹನ್ನೆರಡಾಗಿದೆ. ನೆರೆ ರಾಜ್ಯದಲ್ಲೂ ಒಮಿಕ್ರಾನ್ ಹಾವಳಿ ಮಿತಿ ಮೀರಿದೆ. ಹೀಗಾಗಿ, ರಾಜ್ಯ ಸರ್ಕಾರ ಹೊಸ ರೂಪಾಂತರಿಗೆ ಆರಂಭದಲ್ಲೇ ಅಂತ್ಯವಾಡಲು ಖಡಕ್ ರೂಲ್ಸ್‌ಗಳನ್ನ ಜಾರಿ ಮಾಡ್ತಿದೆ. ಇಂದಿನಿಂದ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿರಲಿದೆ..

ಹೇಗಿರಲಿದೆ ಕರ್ಫ್ಯೂ? ಇಂದು ರಾತ್ರಿ 10 ಗಂಟೆಯೊಳಗೆ ಎಲ್ಲವೂ ಕ್ಲೋಸ್ ಆಗಲಿದ್ದು, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್‌ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿವೆ. 10 ಗಂಟೆ ಒಳಗೆ ಹೋಟೆಲ್, ಬಾರ್, ರೆಸ್ಟೋರೆಂಟ್, ಮಾಲ್, ಥಿಯೇಟರ್, ಶಾಪ್, ಕಚೇರಿಗಳು ಲಾಕ್‌ ಆಗಬೇಕು. ಬಟ್ಟೆ ಅಂಗಡಿ, ಬೀದಿ ಬದಿ ವ್ಯಾಪಾರ ಕೂಡ ಕ್ಲೋಸ್ ಆಗಲಿದೆ. ಒಲಾ, ಉಬರ್, ಆಟೋ, ಟ್ಯಾಕ್ಸಿಗಳ ಓಡಾಟ ಬಂದ್ ಆಗಲಿದೆ. ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುವಂತಿಲ್ಲ. ಇನ್ನು ರಾತ್ರಿ 10 ರಿಂದ ಮೆಟ್ರೋ ಟ್ರೇನ್ ಸಂಚಾರದಲ್ಲಿ ಕಡಿತಗೊಳಿಸಲಾಗಿದೆ.

ಜನರ ಆರೋಗ್ಯದ ದೃಷ್ಟಿಯಿಂದ ನೈಟ್ಕರ್ಫ್ಯೂ ಎಂದ ಸಿಎಂ ವ್ಯಾಪಾರಕ್ಕೆ ತೊಂದ್ರೆಯಾಗುತ್ತೆ ನೈಟ್‌ ಕರ್ಫ್ಯೂ ಸಡಿಲಿಕೆ ಮಾಡಿ ಅನ್ನೋ ಒತ್ತಾಯಕ್ಕೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬಿಲ್ ಕುಲ್ ಆಗಲ್ಲ ಎಂದಿದ್ದಾರೆ. ವ್ಯಾಪಾರ, ವಹಿವಾಟು ನಡೀಬೇಕು. ಜನರಿಗೆ ತೊಂದ್ರೆಯಾಗುತ್ತೆ ಅನ್ನೋ ಕಾಳಜಿ ಇದೆ. ಆದ್ರೆ, ಜನರ ಆರೋಗ್ಯದ ದೃಷ್ಟಿಯಿಂದಲೇ ನೈಟ್‌ ಕರ್ಫ್ಯೂ ಜಾರಿ ಮಾಡಿದ್ದೇವೆ ಅಂತಾ ಸಿಎಂ ಖಡಕ್ ಸಂದೇಶ ನೀಡಿದ್ರು.

ಇದನ್ನೂ ಓದಿ: ನೈಟ್ ಕರ್ಫ್ಯೂ ಎಫೆಕ್ಟ್: ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನ, 7 ಗಂಟೆ ಶೋ ಲಾಸ್ಟ್

ಇದನ್ನೂ ಓದಿ: ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ; 10 ಗಂಟೆಯೊಳಗೆ ಎಲ್ಲವೂ ಬಂದ್, ಮನೆ ಸೇರಿದ್ರೆ ಸೇಫ್ ಇಲ್ಲ ಅಂದ್ರೆ ಬೀಳುತ್ತೆ ಫೈನ್

Published On - 3:35 pm, Tue, 28 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್