ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ; 10 ಗಂಟೆಯೊಳಗೆ ಎಲ್ಲವೂ ಬಂದ್, ಮನೆ ಸೇರಿದ್ರೆ ಸೇಫ್ ಇಲ್ಲ ಅಂದ್ರೆ ಬೀಳುತ್ತೆ ಫೈನ್

ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ; 10 ಗಂಟೆಯೊಳಗೆ ಎಲ್ಲವೂ ಬಂದ್, ಮನೆ ಸೇರಿದ್ರೆ ಸೇಫ್ ಇಲ್ಲ ಅಂದ್ರೆ ಬೀಳುತ್ತೆ ಫೈನ್
ಪ್ರಾತಿನಿಧಿಕ ಚಿತ್ರ

Night Curfew: ಇಂದು ರಾತ್ರಿ 10 ಗಂಟೆಯೊಳಗೆ ಎಲ್ಲವೂ ಕ್ಲೋಸ್ ಆಗಲಿದ್ದು, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್‌ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿವೆ.

TV9kannada Web Team

| Edited By: Ayesha Banu

Dec 28, 2021 | 7:44 AM


ಬೆಂಗಳೂರು: ಇಂದು(ಡಿಸೆಂಬರ್ 28) ರಾತ್ರಿ 10 ಗಂಟೆಯಿಂದ ಕರುನಾಡಿನ ಚಿತ್ರಣವೇ ಬದಲಾಗಲಿದೆ. ಕೊರೊನಾ, ಒಮಿಕ್ರಾನ್ ಕಟ್ಟಿ ಹಾಕಲು ನೈಟ್ ಕರ್ಫ್ಯೂ ಜಾರಿಯಾಗಲಿದೆ. ಇಷ್ಟು ದಿನ ತಡರಾತ್ರಿವರೆಗೂ ಓಡಾಡ್ತಿದ್ದವರೆಲ್ಲ ನಾಳೆ ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕಿದೆ. ತಡರಾತ್ರಿ ಕ್ಲಬ್, ಪಬ್ ಸುತ್ತಾಡುತ್ತಿದ್ದವರು ನಾಳೆಯಿಂದ ಮನೆಯಲ್ಲೇ ಲಾಕ್. ವ್ಯಾಪಾರ-ವಹಿವಾಟು ಎಲ್ಲವೂ ರಾತ್ರಿ 10 ಗಂಟೆಯೊಳಗೆ ಬಂದ್ ಆಗಲಿದೆ.

ಒಮಿಕ್ರಾನ್ ಸೋಂಕಿನ ಸದ್ದಡಗಿಸಲು ರಾಜ್ಯ ಸರ್ಕಾರ ನೈಟ್‌ ಕರ್ಪ್ಯೂ ಮೊರೆ ಹೋಗಿದೆ. ಇಂದು ರಾತ್ರಿ 10 ಗಂಟೆಯಿಂದಲೇ ರಾಜ್ಯದಲ್ಲಿ ಟೈಟ್ ರೂಲ್ಸ್ ಜಾರಿಯಾಗ್ತಿದೆ. ರಾಜ್ಯದ ರಸ್ತೆ ರಸ್ತೆ.. ಗಲ್ಲಿ ಗಲ್ಲಿಗೂ ಬ್ಯಾರಿಕೇಡ್ ಬೀಳುತ್ತೆ. ಫ್ಲೈಓವರ್‌ಗಳು ಬಂದ್ ಆಗುತ್ವೆ.. ಬಾರ್, ಪಬ್, ಹೋಟೆಲ್, ಸಿನಿಮಾ, ಮಾಲ್ ಸೇರಿದಂತೆ ಇಡೀ ಕರುನಾಡಿಗೆ ಕರುನಾಡೇ ಕಂಪ್ಲೀಟ್ ಸ್ತಬ್ಧವಾಗುತ್ತೆ.

ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ
ಒಮಿಕ್ರಾನ್ ಸೈಲೆಂಟಾಗಿಯೇ ಆರ್ಭಟ ಶುರು ಮಾಡ್ತಿದೆ. ದಿನಕ್ಕೆ ಒಂದೋ, ಎರಡೋ ಬರ್ತಿದ್ದ ಕೇಸ್‌ಗಳು ಈಗ ಹತ್ತು, ಹನ್ನೆರಡಾಗಿದೆ. ನೆರೆ ರಾಜ್ಯದಲ್ಲೂ ಒಮಿಕ್ರಾನ್ ಹಾವಳಿ ಮಿತಿ ಮೀರಿದೆ. ಹೀಗಾಗಿ, ರಾಜ್ಯ ಸರ್ಕಾರ ಹೊಸ ರೂಪಾಂತರಿಗೆ ಆರಂಭದಲ್ಲೇ ಅಂತ್ಯವಾಡಲು ಖಡಕ್ ರೂಲ್ಸ್‌ಗಳನ್ನ ಜಾರಿ ಮಾಡ್ತಿದೆ. ಇಂದಿನಿಂದ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿರಲಿದೆ..

ಹೇಗಿರಲಿದೆ ಕರ್ಫ್ಯೂ?
ಇಂದು ರಾತ್ರಿ 10 ಗಂಟೆಯೊಳಗೆ ಎಲ್ಲವೂ ಕ್ಲೋಸ್ ಆಗಲಿದ್ದು, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್‌ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿವೆ. 10 ಗಂಟೆ ಒಳಗೆ ಹೋಟೆಲ್, ಬಾರ್, ರೆಸ್ಟೋರೆಂಟ್, ಮಾಲ್, ಥಿಯೇಟರ್, ಶಾಪ್, ಕಚೇರಿಗಳು ಲಾಕ್‌ ಆಗಬೇಕು. ಬಟ್ಟೆ ಅಂಗಡಿ, ಬೀದಿ ಬದಿ ವ್ಯಾಪಾರ ಕೂಡ ಕ್ಲೋಸ್ ಆಗಲಿದೆ. ಒಲಾ, ಉಬರ್, ಆಟೋ, ಟ್ಯಾಕ್ಸಿಗಳ ಓಡಾಟ ಬಂದ್ ಆಗಲಿದೆ. ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುವಂತಿಲ್ಲ. ಇನ್ನು ರಾತ್ರಿ 10 ರಿಂದ ಮೆಟ್ರೋ ಟ್ರೇನ್ ಸಂಚಾರದಲ್ಲಿ ಕಡಿತಗೊಳಿಸಲಾಗಿದೆ.

ಜನರ ಆರೋಗ್ಯದ ದೃಷ್ಟಿಯಿಂದ ನೈಟ್ಕರ್ಫ್ಯೂ ಎಂದ ಸಿಎಂ
ವ್ಯಾಪಾರಕ್ಕೆ ತೊಂದ್ರೆಯಾಗುತ್ತೆ ನೈಟ್‌ ಕರ್ಫ್ಯೂ ಸಡಿಲಿಕೆ ಮಾಡಿ ಅನ್ನೋ ಒತ್ತಾಯಕ್ಕೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬಿಲ್ ಕುಲ್ ಆಗಲ್ಲ ಎಂದಿದ್ದಾರೆ. ವ್ಯಾಪಾರ, ವಹಿವಾಟು ನಡೀಬೇಕು. ಜನರಿಗೆ ತೊಂದ್ರೆಯಾಗುತ್ತೆ ಅನ್ನೋ ಕಾಳಜಿ ಇದೆ. ಆದ್ರೆ, ಜನರ ಆರೋಗ್ಯದ ದೃಷ್ಟಿಯಿಂದಲೇ ನೈಟ್‌ ಕರ್ಫ್ಯೂ ಜಾರಿ ಮಾಡಿದ್ದೇವೆ ಅಂತಾ ಸಿಎಂ ಖಡಕ್ ಸಂದೇಶ ನೀಡಿದ್ರು.

ಸುಖಾ ಸುಮ್ಮನೇ ಓಡಾಡಿದ್ರೆ ಖಾಕಿ ಗುನ್ನಾ
ಇಂದು ರಾತ್ರಿ 10 ಗಂಟೆಗೆ ಖಾಕಿ ಫೀಲ್ಡ್‌ಗಿಳಿಯಲಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಕಾಬಂದಿ ಹಾಕಿ, ಪ್ರಮುಖ ರಸ್ತೆಗಳಲ್ಲಿ ಹದ್ದಿನ ಕಣ್ಣಿಡಲಿದೆ. ಸುಖಾ ಸುಮ್ಮನೇ ಓಡಾಡಿದ್ರೆ, ಬೈಕ್ ಎತ್ಕೊಂಡು ಸುತ್ತಾಡಿದ್ರೆ ಕೇಸ್ ಬೀಳಲಿದೆ. ಆಸ್ಪತ್ರೆಗೆ ಹೋಗೋರು, ನೈಟ್‌ ಶಿಫ್ಟ್‌ ಕೆಲಸಕ್ಕೆ ಹೋಗೋರು ಸೂಕ್ತ ದಾಖಲೆ ತೋರಿಸ್ಬೇಕು. ಇಲ್ಲ ಸುಳ್ಳು ಹೇಳಿ ರೋಡಿಗಿಳಿದ್ರೆ ರಾತ್ರಿ ಬೇಲಿಯಲ್ಲಿ ಸಿಕ್ಕಿಬೀಳ್ತೀರಾ.

ಜನರ ಆರೋಗ್ಯ ದೃಷ್ಟಿಯಿಂದಲೇ ಕ್ರಮ ತೆಗೆದುಕೊಂಡಿದ್ದೇವೆ ಅಂತಾ ಸರ್ಕಾರ ಹೇಳ್ತಿದೆ. ಹೀಗಾಗಿ, ಅನಿವಾರ್ಯವಾಗಿ ಇಂದಿನಿಂದ ಜಾರಿಯಾಗ್ತಿರೋ 10 ದಿನಗಳ ಖಡಕ್ ರೂಲ್ಸ್‌ಗಳನ್ನ ಫಾಲೋ ಮಾಡ್ಲೇಬೇಕಾಗಿದೆ. ಒಂದ್ವೇಳೆ ಮೈ ಮರೆತ್ರೂ, ಎಚ್ಚರ ತಪ್ಪಿದ್ರೂ ಮತ್ತಷ್ಟು ಕಠಿಣಾತಿ ಕಠಿಣ ರೂಲ್ಸ್‌ಗಳು ಜಾರಿಯಾಗೋದನ್ನ ತಳ್ಳಿ ಹಾಕುವಂತಿಲ್ಲ.

ವರದಿ: ವಿನಯ್ ಕಾಶಪ್ಪನವರ್, ಟಿವಿ9 ಬೆಂಗಳೂರು

ಇದನ್ನೂ ಓದಿ: ಕರ್ನಾಟಕ ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಬಿಜೆಪಿ ನಾಯಕ ಸಿಟಿ ರವಿ ಅಸಮಾಧಾನ


Follow us on

Related Stories

Most Read Stories

Click on your DTH Provider to Add TV9 Kannada