15-18 ವರ್ಷದ ಮಕ್ಕಳಿಗೆ ಲಸಿಕೆ; ಜನವರಿ 1ರಿಂದ ನೋಂದಣಿ ಆರಂಭ
ಜನವರಿ 3ರಿಂದ ಲಸಿಕೆ ನೀಡುತ್ತಿರುವ ಹಿನ್ನೆಲೆ ಲಸಿಕೆ ಪಡೆಯುವುದಕ್ಕೆ ಜನವರಿ 1ರಿಂದ ನೋಂದಣಿ ಆರಂಭವಾಗುತ್ತಿದೆ. ಮಕ್ಕಳ ಆಧಾರ್, ಶಾಲೆ ಐ ಡಿ ಬಳಸಿ ಕೋವಿನ್ ಆ್ಯಪ್ನಲ್ಲಿ ಹೆಸರು ನೊಂದಾಯಿಸಬಹುದು.
ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ (Omicron) ವೈರಸ್ ಹೆಚ್ಚಾಗುತ್ತಿರುವ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಜನವರಿ 3ರಿಂದ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಜನವರಿ 3ರಿಂದ ಲಸಿಕೆ ನೀಡುತ್ತಿರುವ ಹಿನ್ನೆಲೆ ಲಸಿಕೆ ಪಡೆಯುವುದಕ್ಕೆ ಜನವರಿ 1ರಿಂದ ನೋಂದಣಿ ಆರಂಭವಾಗುತ್ತಿದೆ. ಮಕ್ಕಳ ಆಧಾರ್, ಶಾಲೆ ಐ ಡಿ ಬಳಸಿ ಕೋವಿನ್ ಆ್ಯಪ್ನಲ್ಲಿ ಹೆಸರು ನೊಂದಾಯಿಸಬಹುದು. ಕೋವಿನ್ ಆ್ಯಪ್ನಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ಕೂಡಾ ಸಿದ್ಧಪಡಿಸಲಾಗಿದೆ.
ಮಕ್ಕಳು ನೋಂದಣಿ ಮಾಡಿಕೊಳ್ಳುವುದು ಹೇಗೆ? * 15 ವರ್ಷ ಮೇಲ್ಪಟ್ಟವರು ತಮ್ಮ ಆಧಾರ್ ಸಂಖ್ಯೆ ಬಳಸಬಹುದು. * ಆಧಾರ್ ಇಲ್ಲದೇ ಇರುವವರು ಶಾಲಾ ಗುರುತಿನ ಚೀಟಿ ತೋರಿಸಿ ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. * ಕುಟುಂಬಸ್ಥರು ಲಸಿಕೆ ಪಡೆಯುತ್ತಿದ್ದರೆ ಅವರೊಂದಿಗೂ ಹೆಸರು ನೊಂದಾಯಿಸಿಕೊಳ್ಳಬಹುದು. * ತಮ್ಮದೇ ಮೊಬೈಲ್ ನಂಬರ್ ನೀಡಬಹುದು. ಇಲ್ಲದಿದ್ದರೆ ಕುಟುಂಬ ಸದಸ್ಯರು ಒಟ್ಟಾಗಿ ಲಸಿಕೆ ಪಡೆಯುತ್ತಿದ್ದರೆ ಒಂದೇ ನಂಬರ್ ನೀಡಬಹುದು.
ಮನವೋಲಿಸಲು ಬಿಬಿಎಂಪಿ ಸೂಚನೆ ಜನವರಿ 3ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೊವಿಡ್ ಲಸಿಕೆ ಹಾಕಲು ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಲಸಿಕೆ ಪಡೆಯಲು 8 ಲಕ್ಷ ಮಕ್ಕಳು ಅರ್ಹರಾಗಿದ್ದಾರೆ. 100 ಮಕ್ಕಳ ಬ್ಯಾಚ್ ಮಾಡಿ ನಿತ್ಯ ಲಸಿಕೆ ನೀಡಲು ತಯಾರಿ ನಡೆಯುತ್ತಿದೆ. ಕಾಲೇಜುಗಳಲ್ಲಿ ತುರ್ತು ಆ್ಯಂಬುಲೆನ್ಸ್, ವೈದ್ಯರ ನಿಯೋಜನೆ ಮಾಡಲಾಗುತ್ತದೆ. ಸದ್ಯ ಕೆಲ ಕಡೆ ಮಕ್ಕಳಿಗೆ ಲಸಿಕೆ ನೀಡಲು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು, ಪೋಷಕರ ಮನವೊಲಿಸುವಂತೆ ಕಾಲೇಜು ಆಡಳಿತ ಮಂಡಳಿಗಳಿಗೆ ಬಿಬಿಎಂಪಿ ಸೂಚಿಸಿದೆ.
ಮೋದಿ ಹೇಳಿದ್ದೇನು? ಡಿಸೆಂಬರ್ 25ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಶಾಲಾ, ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ವ್ಯಾಕ್ಸಿನ್ ನೀಡುತ್ತೇವೆ. ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಪ್ರಿಕಾಶನ್ ಡೋಸ್ (ಮುಂಜಾಗರೂಕತೆ ಲಸಿಕೆ) ನೀಡುತ್ತೇವೆ. ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆ ಆರಂಭವಾಗಿ 11 ತಿಂಗಳಾಗಿದೆ. ಸಾಮೂಹಿಕ ಇಚ್ಛಾಶಕ್ತಿಯಿಂದ ಕೊರೊನಾ ವಿರುದ್ಧ ನಾವು ಹೋರಾಟ ಮುಂದುವರಿಸಬೇಕಿದೆ. ಕೊವಿಡ್, ಒಮಿಕ್ರಾನ್ ಬಗ್ಗೆ ಆತಂಕಬೇಡ, ಎಚ್ಚರಿಕೆ ಇರಲಿ. ದೇಶದಲ್ಲಿ ಈವರೆಗೆ 141 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ 61ರಷ್ಟು ಯುವಕರಿಗೆ ಲಸಿಕೆ ನೀಡಲಾಗಿದೆ. ಜನರನ್ನು ಆರೋಗ್ಯವಾಗಿ ಇರಿಸಲು ನಿರಂತರ ಶ್ರಮಿಸುತ್ತಿದ್ದೇವೆ. ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಅಂತ ತಿಳಿಸಿದ್ದರು
ಇದನ್ನೂ ಓದಿ
‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?
ಲಾಕ್ಡೌನ್ ಟೈಮಲ್ಲಿ ಶ್ವಾನಗಳನ್ನು ಬೀದಿಗೆ ತಳ್ಳಿದ ಮಾಲೀಕರು; ಬೆಂಗಳೂರಲ್ಲಿ ಶೇಕಡಾ 49ರಷ್ಟು ಸಾಕುನಾಯಿಗಳು ಬೀದಿಪಾಲು
Published On - 8:45 am, Tue, 28 December 21