ಬೆಂಗಳೂರು: ಹೊಸವರ್ಷ ಆಚರಣೆಗೆ ಬ್ರೇಕ್​: ಗಲ್ಲಿಗಲ್ಲಿಗಳಲ್ಲಿ ನಾಕಾಬಂದಿ ಹಾಕಿ ಪೊಲೀಸರ ಬಿಗಿ ಬಂದೊಬಸ್ತ್​​

ಇಂದಿನಿಂದ ರಾತ್ರಿ 10ರಿಂದ ಬೆಳಗ್ಗೆ 5ರವರಗೆ ನೈಟ್​ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಹೊಸ ವರ್ಷ ಸಂಭ್ರಮಾಚರಣೆ ಮೇಲೆ ಖಾಕಿ ಹದ್ದಿನ ಕಣ್ಣು ಇರಿಸಿದ್ದು, ನಗರದಲ್ಲಿ ಕಾರ್ಯಾಚರಣೆ ಆರಂಭಿಸಿದೆ.  ನಗರದ ಗಲ್ಲಿ ಗಲ್ಲಿಯಲ್ಲಿ ನಾಕಾಬಂದಿಹಾಕಿ ಬಂದೋಬಸ್ತ್ ಮಾಡಲು‌ ಪೊಲೀಸರ ತಯಾರಿ ನಡೆಸುತ್ತಿದ್ದಾರೆ.

ಬೆಂಗಳೂರು: ಹೊಸವರ್ಷ ಆಚರಣೆಗೆ ಬ್ರೇಕ್​: ಗಲ್ಲಿಗಲ್ಲಿಗಳಲ್ಲಿ ನಾಕಾಬಂದಿ ಹಾಕಿ ಪೊಲೀಸರ ಬಿಗಿ ಬಂದೊಬಸ್ತ್​​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Dec 28, 2021 | 5:53 PM

ಈ ಬಾರಿಯೂ ರಾಜ್ಯದಲ್ಲಿ ಹೊಸವರ್ಷ ಸಂಭ್ರಮಾಚರಣೆಗೆ ಬ್ರೆಕ್​ ಬಿದ್ದಿದೆ. ಇಂದಿನಿಂದ ರಾತ್ರಿ 10ರಿಂದ ಬೆಳಗ್ಗೆ 5ರವರಗೆ ನೈಟ್​ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಹೊಸ ವರ್ಷ ಸಂಭ್ರಮಾಚರಣೆ ಮೇಲೆ ಖಾಕಿ ಹದ್ದಿನ ಕಣ್ಣು ಇರಿಸಿದ್ದು, ನಗರದಲ್ಲಿ ಕಾರ್ಯಾಚರಣೆ ಆರಂಭಿಸಿದೆ.  ನಗರದ ಗಲ್ಲಿ ಗಲ್ಲಿಯಲ್ಲಿ ನಾಕಾಬಂದಿ ಹಾಕಿ ಬಂದೋಬಸ್ತ್ ಮಾಡಲು‌ ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಆಗ್ನೇಯ ವಿಭಾಗ ಒಂದರಲ್ಲಿ ಹಿರಿಯ ಅಧಿಕಾರಿಗಳ ಟೀಂ ಜತೆ 1410 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ಆಯ ಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಜೊತೆ ಜೊತೆಗೆ ಡ್ರೋನ್ ಕ್ಯಾಮೆರಾದ ವ್ಯವಸ್ಥೆ ಕೂಡ ಮಾಡಲಾಗಿದೆ. ಬೆಂಗಳೂರಿನ ಹಲವು ನಗರಗಳನ್ನು ಪೊಲೀಸರು ಬಿಗಿ ಬಂದೋಬಸ್ತ್​ ಮಾಡುತ್ತಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ಬಾರ್​, ರೆಸ್ಟೋರೆಂಟ್​ಗಳನ್ನು ಮುಚ್ಚುವಂತೆ ಬೆಂಗಳೂರು ಕಮಿಷನರ್​ ಖಡಕ್​ ಆದೇಶ ನೀಡಿದ್ದಾರೆ. 

ಇನ್ನು ಬೆಂಗಳೂರಿನ ಪೂರ್ವದ ಪ್ರಮುಖ ಬೀದಿಗಳಾದ ಶಿವಾಜಿ ನಗರ, ರಿಂಗ್ ರೋಡ್, ಕಬ್ಬನ್ ರೋಡ್, ಬಿಆರ್ ವಿ ಜಂಕ್ಷನ್, ಕಿತ್ತುರು ರಾಣಿ ಚೆನ್ನಮ್ಮ‌ ಕ್ರೀಡಾಂಗಣ,  ಕಾಸ್ಮೋಟಿಕ್ ಕ್ಲಬ್, ಗರುಡ ಸ್ವಾಗತ್ ಮಾಲ್, ಆಟೋ ಸ್ಟಾಂಡ್, ಸೀಮಾ ಟವರ್ ಜಂಕ್ಷನ್ ಸೇರಿದಂತೆ ಎಲ್ಲೆಡೆ ನಾಕಾಬಂದಿ ಹಾಕಿ ಪೊಲೀಸರು ಜನ ಅನಗತ್ಯವಾಗಿ ಓಡಾಡದಂತೆ ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಅದೇ ರೀತಿ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕಾಳಿದಾಸ ರೋಡ್, ಮಾರ್ಕೇಟ, ಕಲಾಸಿಪಾಳ್ಯ, ಚಾಮರಾಜಪೇಟೆ ಸೇರಿ ಹಲವು ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ.  ಸುಖಾಸುಮ್ಮನೆ ಓಡಾಡಿದರೆ ಬಿಗಿ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಕೊರೋನಾ , ಒಮಿಕ್ರಾನ್ ಆತಂಕದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ವರ್ಷ ಆಚರಣೆಗೆ ನಿಷೇಧ ಹೇರಿದ್ದು ಇಂದಿನಿಂದ 10 ದಿನಗಳ ಕಾಲ ನೈಟ್​ ಕರ್ಫ್ಯೂ ವಿಧಿಸಿದೆ.

ಇದನ್ನು ಓದಿ:

Bengaluru: ಮಂಗಳವಾರ ಫ್ಲೈಓವರ್​ಗಳನ್ನು ಮುಚ್ಚುವುದಿಲ್ಲ; ಬುಧವಾರದಿಂದ ಫ್ಲೈಓವರ್ ಕ್ಲೋಸ್ ಆಗಿರಲಿದೆ- ಕಮಲ್ ಪಂತ್

Published On - 5:32 pm, Tue, 28 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್