ಆರೋಗ್ಯದ ದೃಷ್ಟಿಯಿಂದ ಸಿಎಂ ಬೊಮ್ಮಾಯಿ ಮನೆಯಲ್ಲೇ ಇರಲಿ; ಕನಿಷ್ಠ 20 ದಿನ ರೆಸ್ಟ್ ಪಡೆಯಲಿ: ಎಂಪಿ ಕುಮಾರಸ್ವಾಮಿ

ಆರೋಗ್ಯದ ದೃಷ್ಟಿಯಿಂದ ಸಿಎಂ ಬೊಮ್ಮಾಯಿ ಮನೆಯಲ್ಲೇ ಇರಲಿ; ಕನಿಷ್ಠ 20 ದಿನ ರೆಸ್ಟ್ ಪಡೆಯಲಿ: ಎಂಪಿ ಕುಮಾರಸ್ವಾಮಿ
ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ಇಪ್ಪತ್ತು ದಿನ ಸಿಎಂ ರೆಸ್ಟ್ ತೆಗೆದುಕೊಂಡರೆ ಬಹಳ ಒಳ್ಳೆಯದು. ಬಸವರಾಜ ಬೊಮ್ಮಾಯಿಯವರು ನಮ್ಮ ನೆಚ್ಚಿನ ಸಿಎಂ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

TV9kannada Web Team

| Edited By: ganapathi bhat

Dec 28, 2021 | 4:27 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಂಡಿ ನೋವು ವಿಚಾರವಾಗಿ ವಿಧಾನಸೌಧದಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕನಿಷ್ಠ 20 ದಿನಗಳ ಕಾಲ ಸಿಎಂ ಮನೆಯಲ್ಲಿ ರೆಸ್ಟ್ ಪಡೆಯಲಿ. ಆರೋಗ್ಯದ ದೃಷ್ಟಿಯಿಂದ ಬೊಮ್ಮಾಯಿ ಮನೆಯಲ್ಲೇ ಇರಲಿ. ಸ್ವಲ್ಪ ದಿನ ಮನೆಯಿಂದಲೇ ಆಡಳಿತ ಕಾರ್ಯ ನಿರ್ವಹಿಸಲಿ. ಸಿಎಂ ಬೊಮ್ಮಾಯಿಗೆ ಅಧಿಕಾರಿಗಳು, ಜನ ಸಹಕಾರ ಕೊಡಲಿ ಎಂದು ಹೇಳಿದ್ದಾರೆ.

ಯಾವುದೇ ಸಭೆಗೆ ಬೊಮ್ಮಾಯಿ ಅವರನ್ನ ಸ್ವಲ್ಪ ದಿನ ಕರೆಯದಿರಲಿ. ಬೊಮ್ಮಾಯಿ ಅವರನ್ನ ಅಧಿಕಾರಿಗಳು, ಜನರು ಸಭೆಗೆ ಕರೆಯದಿರಲಿ. ಸಂಪೂರ್ಣವಾಗಿ ಗುಣಮುಖರಾಗಲಿ ಎನ್ನುವುದೇ ನಮ್ಮ ಆಶಯ. ಇಪ್ಪತ್ತು ದಿನ ಸಿಎಂ ರೆಸ್ಟ್ ತೆಗೆದುಕೊಂಡರೆ ಬಹಳ ಒಳ್ಳೆಯದು. ಬಸವರಾಜ ಬೊಮ್ಮಾಯಿಯವರು ನಮ್ಮ ನೆಚ್ಚಿನ ಸಿಎಂ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ವರ್ಷಪೂತಿ ದಿನಾಲು 15 ಗಂಟೆ ಕೆಲಸ ಮಾಡೊ ಸಂಕಲ್ಪ ಮಾಡಿದ್ದೀನಿ: ಬಸವರಾಜ ಬೊಮ್ಮಾಯಿ ಪಕ್ಷದ ಸಂಘಟನೆ, ಮುಂಬರುವ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗುತ್ತೆ. ಕಾರ್ಯಕಾರಣಿಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತೆ. ಸಂಪುಟ ವಿಸ್ತರಣೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಕಾರ್ಯಕಾರಣಿ ಅಜೆಂಡಾ ಬಗ್ಗೆ ಪಕ್ಷ ಹೇಳುತ್ತೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸಿಎಂ ವಿಶ್ರಾಂತಿ ಪಡೆದು ಕೆಲಸ‌ ಮಾಡಲಿ ಎನ್ನೋ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಎಂ.ಪಿ ಕುಮಾರಸ್ವಾಮಿಗೆ ನನ್ಮೇಲೆ ಬಹಳ ಪ್ರೀತಿ ಇದೆ. ವರ್ಷಪೂತಿ ದಿನಾಲು 15 ಗಂಟೆ ಕೆಲಸ ಮಾಡೊ ಸಂಕಲ್ಪ ಮಾಡಿದ್ದೀನಿ. 2023 ಕ್ಕೆ ಬಿಜೆಪಿ ಅಧಿಕಾರಕ್ಕೆ ತರೋದೆ ನನ್ನ ಗುರಿ. ಈಗಿನಿಂದಲೇ ಅದನ್ನ ಸ್ಟಾಟ್೯ ಮಾಡ್ತಿನಿ. ಅರುಣ್ ಸಿಂಗ್ ಸೇರಿದಂತೆ ಕೇಂದ್ರ ವರಿಷ್ಟರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ‌. ಅವರಿಗೆ ಅದಕ್ಕಾಗಿ ಧನ್ಯವಾದ ಹೇಳ್ತೆನೆ. ನಾವೆಲ್ಲಾ ಸೇರಿ ಸಾಮೂಹಿಕವಾಗಿ ಚುನಾವಣೆ ಎದುರಿಸುತ್ತೆವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಬಸರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾರ್ಯಕಾರಿಣಿಯಲ್ಲಿ ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. 365 ದಿನವೂ ದಣಿವರಿಯದೆ ಕೆಲಸ ಮಾಡುವ ಶಕ್ತಿ ಇದೆ. ಪ್ರತಿ ದಿನ 15 ಗಂಟೆಗಳ ಕಾಲ ಕೆಲಸ ಮಾಡುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಗೈರಾಗಿ ದೆಹಲಿಗೆ ಹಾರಿದ ರಮೇಶ್ ಜಾರಕಿಹೊಳಿ; ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡದ ಬೊಮ್ಮಾಯಿ

ಇದನ್ನೂ ಓದಿ: CM Basavaraj Bommai: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada