ಅಧಿಕಾರಿಗಳು ಸೂಚನೆ ಕೊಡಬೇಕೆಂದು ಕಾಯಬಾರದು, ಜನರೇ ಜಾಗೃತಿ ಪಡೆಯಬೇಕು; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿಕೆ

ಅಧಿಕಾರಿಗಳು ಸೂಚನೆ ಕೊಡಬೇಕೆಂದು ಕಾಯಬಾರದು, ಜನರೇ ಜಾಗೃತಿ ಪಡೆಯಬೇಕು; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿಕೆ
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ನಿತ್ಯ 300 ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್​ಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ ಆಯುಕ್ತರು, 7 ಜನವರಿ ನಂತರದ ನೈಟ್ ಕಪ್ಯೂ ನಿರ್ಧಾರ ನಾವು ಮಾಡುವುದಿಲ್ಲ. ಮುಂದಿನ ಕ್ರಮಗಳ ಬಗ್ಗೆ ಸಿಎಂ, ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಲಿದೆ ಎಂದಿದ್ದಾರೆ.

TV9kannada Web Team

| Edited By: sandhya thejappa

Dec 28, 2021 | 11:35 AM

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಇರಲಿದ್ದು, ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಸಿಎಂ ಹೆಚ್ಚಿನ ನಿರ್ಬಂಧನೆ ಘೋಷಣೆ ಮಾಡಿದ್ದಾರೆ. ನೈಟ್ ಕರ್ಫ್ಯೂ ಎಲ್ಲರ ಗಮನಕ್ಕೆ ಬಂದಿರುವ ವಿಚಾರ. ಪೊಲೀಸ್ ಇಲಾಖೆ ನೈಟ್ ಕರ್ಫ್ಯೂ ಬಗ್ಗೆ ಗಮನ ಇಡಲಿದೆ. ಈಗಾಗಲೇ ನಿನ್ನೆ (ಡಿ.27) ಪೊಲೀಸ್ ಕಮೀಷನರ್ ಜೊತೆಯೂ ಚರ್ಚೆ ನಡೆದಿದೆ ಅಂತ ತಿಳಿಸಿದ್ದಾರೆ.

ಹೋಂ ಗಾರ್ಡ್ಸ್, ಮಾರ್ಷಲ್ಗಳ ಬಳಕೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ನಿರ್ದೇಶನದಂತೆ ಎಲ್ಲಾ ಸಿಬ್ಬಂದಿಗಳು ಸಹಕಾರ ನೀಡಲಿದ್ದಾರೆ. ಜನರೇ ಜಾಗೃತಿ ಪಡೆಯಬೇಕಾಗಿದೆ. ಪೊಲೀಸರು, ಅಧಿಕಾರಿಗಳು ಸೂಚನೆ ಕೊಡಬೇಕೆಂದು ಜನರು ಕಾಯಬೇಕಾಗಿಲ್ಲ ಅಂತ ಗೌರವ್ ಗುಪ್ತ ಹೇಳಿದರು.

ನಿತ್ಯ 300 ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್​ಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ ಆಯುಕ್ತರು, 7 ಜನವರಿ ನಂತರದ ನೈಟ್ ಕಪ್ಯೂ ನಿರ್ಧಾರ ನಾವು ಮಾಡುವುದಿಲ್ಲ. ಮುಂದಿನ ಕ್ರಮಗಳ ಬಗ್ಗೆ ಸಿಎಂ, ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಲಿದೆ ಎಂದಿದ್ದಾರೆ. ಇದೇ ವೇಳೆ ಮಕ್ಕಳಿಗೆ ಲಸಿಕೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲಸಿಕೆ ಎಂಬುದು ಸ್ವಯಂ ಪ್ರೇರಿತವಾಗಿ ಪಡೆಯಬೇಕಾಗಿದೆ. ಜನರಿಗೆ ಒತ್ತಾಯ ಪೂರಕವಾಗಿ ನೀಡಬೇಕಾಗಿದೆ. ಹಲವು ಪೋಷಕರು ಮಕ್ಕಳ ಲಸಿಕೆಗೆ ಬೇಡಿಕೆ ಇಟ್ಟಿದ್ದರು. ಮಕ್ಕಳಿಗೆ ಇರುವ ಲಸಿಕೆ ಲಭ್ಯತೆ ಬಳಸಿಕೊಳ್ಳಿ. 15-18 ನಡುವಿನ ಮಕ್ಕಳ ಅಂಕಿ ಅಂಶ ಕಲೆ ಹಾಕಲಾಗುತ್ತಿದೆ ಅಂತ ಅಭಿಪ್ರಾಯಪಟ್ಟರು.

ಪ್ರತಿ ದಿನ 30-40 ಸಾವಿರದಿಂದ 60 ಸಾವಿರ ಟೆಸ್ಟಿಂಗ್ ಏರಿಕೆ ಮಾಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ರೂಲ್ಸ್ ತೆಗೆದುಕೊಳ್ಳಲಾಗುತ್ತದೆ. ಒಮಿಕ್ರಾನ್ ಅಮೆರಿಕಾ, ಬ್ರಿಟನ್ ದೇಶದಲ್ಲಿ ಹೆಚ್ಚಾಗಿದೆ. ಎರಡನೇ ಅಲೆಯಲ್ಲೂ ಇದೇ ರೀತಿ ಏಕಾಏಕಿ ಜಾಸ್ತಿ ಆಗಿತ್ತು. ಈ ಪರಿಣಾಮ ಆಧರಿಸಿ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಮಾರುಕಟ್ಟೆ ಅಷ್ಟೇ ಅಲ್ಲ ಎಲ್ಲಿ ಅಗತ್ಯ ಇದ್ದೆಯೊ, ಅಲ್ಲೆಲ್ಲ ಅಗತ್ಯ ಕ್ರಮ ವಹಿಸಲು ಪಾಲಿಕೆ ಸಿದ್ಧ ಅಂತ ತಿಳಿಸಿದರು.

ಇದನ್ನೂ ಓದಿ

Shiva Rajkumar: ಶಿವಣ್ಣ ಹೃದಯವಂತಿಕೆಗಿಲ್ಲ ಸರಿಸಾಟಿ; ಮಕ್ಕಳೊಂದಿಗೆ ಖೋ ಖೋ ಆಡುತ್ತಿರುವ ಅಪರೂಪದ ವಿಡಿಯೋ ಇಲ್ಲಿದೆ

Rohit Sharma: ರೋಹಿತ್ ಔಟ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ಸಂಭಾವ್ಯ ಭಾರತ ತಂಡ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada