ಆಸ್ಪತ್ರೆಯಲ್ಲಿ ಬೆಡ್ ಬೇಕೆಂದು ಕೇಳಿದ ಕೂಡಲೇ ಸಿಗಲ್ಲ; ಆರೋಗ್ಯ ಇಲಾಖೆ, ಬಿಬಿಎಂಪಿಯ ಸಿದ್ಧತೆಗಳೇನು?

ಬೇಕೆಂದು ಕೇಳಿದ ಕೂಡಲೇ ಆಸ್ಪತ್ರೆಯಲ್ಲಿ ಬೆಡ್ ಸಿಗುವುದಿಲ್ಲ. ಬೆಡ್ ಅಗತ್ಯವಿದ್ದರೆ ವೈದ್ಯರೇ ತೀರ್ಮಾನಿಸುತ್ತಾರೆ. ವೈದ್ಯರು ಸೋಂಕಿತನಿಗೆ ಬೆಡ್ ಬೇಕಾ? ಅಥವಾ ಬೇಡ ಎಂದು ತಿಳಿಸಿದ ಬಳಿಕ ಬೆಡ್ ನೀಡಲು ನಿರ್ಧಾರ ಮಾಡಲಾಗುತ್ತದೆ.

ಆಸ್ಪತ್ರೆಯಲ್ಲಿ ಬೆಡ್ ಬೇಕೆಂದು ಕೇಳಿದ ಕೂಡಲೇ ಸಿಗಲ್ಲ; ಆರೋಗ್ಯ ಇಲಾಖೆ, ಬಿಬಿಎಂಪಿಯ ಸಿದ್ಧತೆಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on:Dec 28, 2021 | 11:01 AM

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ರಾಜ್ಯದ ಜನ ಭಯಭೀತರಾಗಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ಅದೆಷ್ಟೋ ಸೋಂಕಿತರು ಉಸಿರು ಚೆಲ್ಲಿದ್ದಾರೆ. ಅಲ್ಲದೇ ಬೆಡ್ ಮತ್ತು ವೆಂಟಿಲೇಟರ್ ಕೊರತೆಯಿಂದ ರಸ್ತೆಯಲ್ಲೆ ಪ್ರಾಣ ಬಿಟ್ಟಿದ್ದಾರೆ. ಪ್ರತಿದಿನ ಚಿತಾಗಾರ ಮುಂದೆ ಆ್ಯಂಬುಲೆನ್ಸ್ಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಈ ಎಲ್ಲಾ ದೃಶ್ಯಗಳನ್ನ ನೆನೆದರೆ ಮೈ ನಡುಗುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಕೊರೊನಾ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬೇಕೆಂದು ಕೇಳಿದ ಕೂಡಲೇ ಆಸ್ಪತ್ರೆಯಲ್ಲಿ ಬೆಡ್ ಸಿಗುವುದಿಲ್ಲ. ಬೆಡ್ ಅಗತ್ಯವಿದ್ದರೆ ವೈದ್ಯರೇ ತೀರ್ಮಾನಿಸುತ್ತಾರೆ. ವೈದ್ಯರು ಸೋಂಕಿತನಿಗೆ ಬೆಡ್ ಬೇಕಾ? ಅಥವಾ ಬೇಡ ಎಂದು ತಿಳಿಸಿದ ಬಳಿಕ ಬೆಡ್ ನೀಡಲು ನಿರ್ಧಾರ ಮಾಡಲಾಗುತ್ತದೆ. ಕಳೆದ ಬಾರಿ ಕೆಲ ಪ್ರಭಾವದಿಂದ ಆಕ್ಸಿಜನ್ ಬೆಡ್, ಐಸಿಯು ಬೆಡ್​ಗಳನ್ನ ಬ್ಲಾಕ್ ಮಾಡಲಾಗುತ್ತಿತ್ತು. ಈ ಬಾರಿ ಇಂತಹ ಕಳ್ಳಾಟಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ತಯಾರಿ ನಡೆಸುತ್ತಿವೆ.

ವೈದ್ಯರೇ ಮನೆಗೆ ಬಂದು ಪರೀಕ್ಷೆ ಮಾಡಿ ಆಸ್ಪತ್ರೆ ಅಗತ್ಯ ಇದೆಯಾ? ಅಥಾವ ಇಲ್ಲವಾ ಅಂತ ಹೇಳಲಿದ್ದಾರೆ. ಈ ವ್ಯವಸ್ಥೆ ಜಾರಿಗಾಗಿ 300 ವೈದ್ಯರು ರೆಡಿ ಇದ್ದಾರೆ. ವೈದ್ಯರೇ ಮನೆಗೆ ಬಂದು ರೋಗಿಯ ಪರಿಸ್ಥಿತಿ ನೋಡಿ ತೀರ್ಮಾನಿಸುತ್ತಾರೆ. ಇದರ ಜೊತೆಗೆ ಟ್ರಯಾಜ್ ಸೆಂಟರ್​ಗೆ ಹೋಗುವ ಸೋಂಕಿತರಿಗೂ ಇದೇ ನಿಯಮ ಜಾರಿಯಾಗಲಿದೆ. ಕೇಸ್​ಗಳ ಸಂಖ್ಯೆ ಹೆಚ್ಚಾದರೆ ಟೆಲಿ ಟ್ರಯಾಜಿಂಗ್ ಮಾಡಲು ಪ್ಲಾನ್ ಮಾಡಲಾಗಿದೆ.

ಟೆಲಿ ಟ್ರಯಾಜಿಂಗ್ನಲ್ಲೂ ವೈದ್ಯರು ಸೋಂಕಿತರ ಜೊತೆ ಮಾತನಾಡಲಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಾತಿ, ಅಕ್ಸಿಜನ್ ಬೆಡ್, ಐಸಿಯು ಬೆಡ್ ಬೇಕಾ ಎಂದು ತೀರ್ಮಾನಿಸಲಾಗತ್ತದೆ. ಬೆಂಗಳೂರು ಮಾತ್ರವಲ್ಲದೇ ಜಿಲ್ಲಾ ಕೇ‌ಂದ್ರಗಳಲ್ಲೂ ಇದೇ ವಿಧಾನ ಅನುಸರಿಸಲು ಚಿಂತನೆ ನಡೆಸಲಾಗುತ್ತಿದೆ.

ರಾಜ್ಯಾದ್ಯಂತ ಆಕ್ಸಿಜನ್ ಪ್ಲಾಂಟ್​ಗಳ ಅಣಕು ಪ್ರದರ್ಶನ ಆಕ್ಸಿಜನ್ ಕೊರತೆ ಆಗದಂತೆ ಆರೋಗ್ಯ ಇಲಾಖೆ ಮುಂಜಾಗ್ರತೆ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲೂ ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆ ಆಗಿದೆ. ರಾಜ್ಯಕ್ಕೆ ಒಟ್ಟು 264 ಆಕ್ಸಿಜನ್ ಉತ್ಪಾದನೆ ಘಟಕಗಳ ಹಂಚಿಕೆ ಆಗಿದೆ. ಈ ಪೈಕಿ 226 ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ವೀಕೃತ ಆಗಿದೆ. ಪಿಎಂ ಕೇರ್ಸ್​ನಿಂದ 50, ಪೆಟ್ರೋಲಿಯಂ ಸಚಿವಾಲಯದಿಂದ 31 ಉತ್ಪಾದನೆ ಘಟಕ ಲಭ್ಯವಾಗಿದೆ. ರಾಜ್ಯ ಸರ್ಕಾರದಿಂದ 40 ಪ್ಲಾಂಟ್ ಹಾಕಲಾಗಿದೆ. ಸಿಎಸ್​ಆರ್​ ಫಂಡ್ ನಿಂದ 136, ರೈಲ್ವೇ ಬೋರ್ಡ್ ಇಂದ 3, ಕಲ್ಲಿದ್ದಲು ಸಚಿವಾಲಯದಿಂದ 6, ಎನ್ಆರ್​ಐ ಫಂಡ್​ನಿಂದ 2 ಉತ್ಪಾದನಾ ಘಟಕಗಳು ಲಭ್ಯವಾಗಿದೆ. 226 ರಲ್ಲಿ 192 ಆಕ್ಸಿಜನ್ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿವೆ.

192 ಆಕ್ಸಿಜನ್ ಪ್ಲಾಂಟ್​ನಿಂದ 199 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯವಿದೆ. ಇಂದು ರಾಜ್ಯಾದ್ಯಂತ ಆಕ್ಸಿಜನ್ ಪ್ಲಾಂಟ್​ಗಳ ಅಣಕು ಪ್ರದರ್ಶನ ನಡೆಯಲಿದೆ. ಎಲ್ಲಾ ಆಕ್ಸಿಜನ್ ಪ್ಲಾಂಟ್​ಗಳಲ್ಲಿ ಅಣಕು ಪ್ರದರ್ಶನ ಮಾಡಬೇಕು. ಬಯೋ ಮೆಡಿಕಲ್ ಇಂಜಿನಿಯರ್ ನೇತೃತ್ವದಲ್ಲಿ ನಡೆಯಲಿರುವ ಅಣಕು ಪ್ರದರ್ಶನ ನಡೆಯಲಿದೆ. ಬೆಂಗಳೂರಿ ಸಿವಿ ರಾಮನ್ ನಗರ ಆಸ್ಪತ್ರೆಯಲ್ಲಿ ಅಣಕು ಪ್ರದರ್ಶನ ನಡೆಯಲಿದೆ

ಇದನ್ನೂ ಓದಿ

ಥಿಯೇಟರ್ಗಳಿಗೆ ತಟ್ಟಿದ ನೈಟ್ ಕರ್ಫ್ಯೂ ಎಫೆಕ್ಟ್: ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನ, 7 ಗಂಟೆ ಶೋ ಲಾಸ್ಟ್

ಪ್ರಧಾನಿ ಮೋದಿ ಕಾರು ಬದಲಾವಣೆ; ಈಗ ಬಳಸುತ್ತಿರುವ ಶಸ್ತ್ರಸಜ್ಜಿತ ಮರ್ಸಿಡಸ್​ ಮೇಬ್ಯಾಕ್​​ S650 ಬೆಲೆ 12 ಕೋಟಿ ರೂ., ಉಳಿದ ವಿಶೇಷತೆ ಮಾಹತಿ ಇಲ್ಲಿದೆ

Published On - 9:23 am, Tue, 28 December 21

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು