‘ನಾನು ಮೋದಿಗೆ ತುಂಬಾ ಆಪ್ತ’; ಭಾರತದೊಂದಿಗಿನ ಬಿರುಕು ಸರಿಪಡಿಸಲು ಟ್ರಂಪ್ ಪ್ರಯತ್ನ
ಭಾರತದೊಂದಿಗಿನ ವ್ಯಾಪಾರದ ಮಾತುಕತೆಗಳ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮತ್ತೊಮ್ಮೆ ತಮ್ಮ ಮತ್ತು ಭಾರತದ ಸಂಬಂಧದ ಬಗ್ಗೆ ಇಂಗ್ಲೆಂಡ್ನಲ್ಲಿ ದೃಢೀಕರಣ ನೀಡಿದ್ದಾರೆ. 'ನಾನು ಭಾರತಕ್ಕೆ ತುಂಬಾ ಹತ್ತಿರವಾಗಿದ್ದೇನೆ, ಪ್ರಧಾನಿ ಮೋದಿಯ ಜೊತೆ ಉತ್ತಮ ಒಡನಾಟ ಹೊಂದಿದ್ದೇನೆ' ಎಂದು ಅವರು ಹೇಳಿದ್ದಾರೆ. ಸುಂಕದ ಬಿಕ್ಕಟ್ಟಿನ ನಂತರ ಭಾರತ ಮತ್ತು ಯುಎಸ್ ನಡುವಿನ ಸಂಬಂಧಗಳು ಮತ್ತೆ ಹಳೆಯ ಟ್ರಾಕ್ಗೆ ಬರುತ್ತಿದೆ. ಈ ವೇಳೆ ಟ್ರಂಪ್ ಮತ್ತೊಮ್ಮೆ ಮೋದಿಯನ್ನು ಹೊಗಳಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 18: ರಷ್ಯಾದ ಜೊತೆಗಿನ ತೈಲ ವ್ಯಾಪಾರದ ಕಾರಣ ನೀಡಿ ಅಮೆರಿಕ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25ರಷ್ಟು ಆಮದು ಸುಂಕ ವಿಧಿಸುವ ಮೂಲಕ ಭಾರತದ ಮೇಲಿನ ಸುಂಕವನ್ನು ಒಟ್ಟು ಶೇ. 50ಕ್ಕೆ ಹೆಚ್ಚಿಸಿತ್ತು. ಇದೀಗ ಭಾರತದ ಜೊತೆಗಿನ ಸಂಬಂಧವನ್ನು ಪುನರ್ ನಿರ್ಮಾಣ ಮಾಡಿಕೊಳ್ಳುವ ಪ್ರಯತ್ನದಲ್ಲಿರುವ ಟ್ರಂಪ್ (Trump Tariff) ಭಾರತದ ಮೇಲಿನ ಆ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಭಾರತದ ಜೊತೆ ಅಮೆರಿಕದ ವ್ಯಾಪಾರದ ಮಾತುಗಳು ನಡೆಯುತ್ತಿರುವ ಬೆನ್ನಲ್ಲೇ ಮತ್ತೊಮ್ಮೆ ಟ್ರಂಪ್ ಭಾರತ ಹಾಗೂ ಪ್ರಧಾನಿ ಮೋದಿಯನ್ನು ಸಾರ್ವಜನಿಕವಾಗಿ ಹೊಗಳಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಸುಧಾರಿಸುತ್ತಿರುವುದರ ನಡುವೆ, ಡೊನಾಲ್ಡ್ ಟ್ರಂಪ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. “ಭಾರತ ಹಾಗೂ ಭಾರತದ ಪ್ರಧಾನಿ ಮೋದಿ ನನಗೆ ಬಹಳ ಆಪ್ತ. ಅವರ ಹುಟ್ಟುಹಬ್ಬಕ್ಕೆ ನಾನು ಕರೆ ಮಾಡಿ ವಿಷ್ ಮಾಡಿದ್ದೆ. ನಿನ್ನೆಯಷ್ಟೇ ಅವರ ಜೊತೆ ಮಾತನಾಡಿದ್ದೆ. ನಾವು ಬಹಳ ಒಳ್ಳೆಯ ಒಡನಾಟ ಹೊಂದಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯ ಮಾಸ್ಕ್ ಧರಿಸಿ ಇಂಗ್ಲೆಂಡ್ನ ಸಂಸದರಿಂದ ಭಾರತದ ಪ್ರಧಾನಿಯ ಹುಟ್ಟುಹಬ್ಬ ಆಚರಣೆ
“ನಾನು ಭಾರತಕ್ಕೆ ತುಂಬಾ ಹತ್ತಿರವಾಗಿದ್ದೇನೆ, ನಾನು ಭಾರತದ ಪ್ರಧಾನಿಗೆ ತುಂಬಾ ಹತ್ತಿರವಾಗಿದ್ದೇನೆ. ನಾನು ನಿನ್ನೆ ಅವರೊಂದಿಗೆ ಮಾತನಾಡಿದೆ. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ನಮಗೆ ಉತ್ತಮ ಸಂಬಂಧವಿದೆ” ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಲಂಡನ್‌ನಲ್ಲಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
I wished PM Modi Happy Birthday, very close to him says Trump
“I am very close to India, I am very close to the PM of India. I spoke to him the other day. I wished him a happy Birthday. We have a very good relationship”, says US President Donald Trump pic.twitter.com/RsScHeH9xX
— Sidhant Sibal (@sidhant) September 18, 2025
ಸುಂಕದ ಬಿಕ್ಕಟ್ಟುಗಳನ್ನು ಪರಿಹರಿಸುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಭಾರತ ಮತ್ತು ಯುಎಸ್ ಪ್ರಸ್ತುತ ಮಾತುಕತೆಯಲ್ಲಿ ತೊಡಗಿವೆ ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕೂ ಮುನ್ನ, ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ನವೆಂಬರ್ 30ರ ನಂತರ ಅಮೆರಿಕ ಭಾರತದ ಮೇಲೆ ಹೇರಿರುವ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ಹಿಂತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 pm, Thu, 18 September 25




