AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಯ ಮಾಸ್ಕ್ ಧರಿಸಿ ಇಂಗ್ಲೆಂಡ್​​ನ ಸಂಸದರಿಂದ ಭಾರತದ ಪ್ರಧಾನಿಯ ಹುಟ್ಟುಹಬ್ಬ ಆಚರಣೆ

ಇಂಗ್ಲೆಂಡ್​​ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಬ್ರಿಟಿಷ್ ಸಂಸದ ಬಾಬ್ ಬ್ಲಾಕ್‌ಮನ್ ಆಯೋಜಿಸಿದ್ದರು. ಈ ವೇಳೆ ಯುಕೆ ಸಂಸದರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಕ್ ಧರಿಸಿ, ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೋದಿಯ ಮಾಸ್ಕ್ ಧರಿಸಿ ಇಂಗ್ಲೆಂಡ್​​ನ ಸಂಸದರಿಂದ ಭಾರತದ ಪ್ರಧಾನಿಯ ಹುಟ್ಟುಹಬ್ಬ ಆಚರಣೆ
uk mps wearing pm modi mask
ಸುಷ್ಮಾ ಚಕ್ರೆ
|

Updated on: Sep 18, 2025 | 9:20 PM

Share

ನವದೆಹಲಿ, ಸೆಪ್ಟೆಂಬರ್ 18: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ 75ನೇ ಹುಟ್ಟುಹಬ್ಬವನ್ನು ಆಚರಿಸಲು ಬ್ರಿಟಿಷ್ ಸಂಸದ ಬಾಬ್ ಬ್ಲಾಕ್‌ಮನ್ ಬುಧವಾರ ಇಂಗ್ಲೆಂಡ್​​ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಸಮುದಾಯದ ಮುಖಂಡರು, ಆಧ್ಯಾತ್ಮಿಕ ವ್ಯಕ್ತಿಗಳು ಮತ್ತು ಸಂಸದರನ್ನು ಒಟ್ಟುಗೂಡಿಸಿದರು. ಈ ವೇಳೆ ಅಲ್ಲಿನ ಸಂಸದರು ಮೋದಿಯ ಮಾಸ್ಕ್ ಧರಿಸಿ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. “ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಆಚರಣೆಯನ್ನು ಸಂಸತ್ತಿನ ಸದನದಲ್ಲಿ ಆಯೋಜಿಸಿದ್ದು ನನಗೆ ಸಂತೋಷವಾಯಿತು” ಎಂದು ಬ್ರಿಟಿಷ್ ಸಂಸದ ಬಾಬ್ ಬ್ಲಾಕ್​ಮನ್ ಎಕ್ಸ್​ನಲ್ಲಿ ಬರೆದಿದ್ದಾರೆ. ಹಾಗೇ, ಆ ಕಾರ್ಯಕ್ರಮದ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಯಕ ಅಂತಾರಾಷ್ಟ್ರೀಯ ಸಿದ್ಧಾಶ್ರಮ ಶಕ್ತಿ ಕೇಂದ್ರ ಯುಕೆ (ಹಿಂದೂ ಆಧ್ಯಾತ್ಮಿಕ ಸಂಸ್ಥೆ), ಗರವಿ ಗುಜರಾತ್ (ಗುಜರಾತಿ-ಇಂಗ್ಲಿಷ್ ವಾರಪತ್ರಿಕೆ) ಮತ್ತು ಈಸ್ಟರ್ನ್ ಐ (ಬ್ರಿಟಿಷ್-ಏಷ್ಯನ್ ಪತ್ರಿಕೆ) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸಿದ್ಧಾಶ್ರಮದ ತಂಡದ ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಿತ್ತು. ಇದರಲ್ಲಿ ಭಾಗವಹಿಸುವವರು ಪ್ರಧಾನಿ ಮೋದಿ ಅವರ ಮುಖವನ್ನು ಮುದ್ರಿಸಿದ ಮಾಸ್ಕ್ ಧರಿಸಿದ್ದರು. ಆಯೋಜಕರು ಇದನ್ನು ಯುಕೆ ಸಂಸತ್ತಿನ ಒಳಗೆ ಸಾಂಕೇತಿಕವಾಗಿ “ಪ್ರತಿ ಆಸನದಲ್ಲೂ ಮೋದಿ” ಶೋ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: PM Modi Birthday: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೂ ಪ್ರಧಾನಿ ಮೋದಿ ಫೋಟೋ!

ಕಳೆದ ಜೂನ್‌ನಲ್ಲಿ, ಸಂಸದ ಬ್ಲ್ಯಾಕ್‌ಮನ್ ಪಾಕಿಸ್ತಾನವನ್ನು “ವಿಫಲ ರಾಷ್ಟ್ರ” ಎಂದು ಕರೆದಿದ್ದರು. ಪಾಕಿಸ್ತಾನ ನಿಜವಾಗಿಯೂ ಪ್ರಜಾಪ್ರಭುತ್ವದಿಂದ ಆಳಲ್ಪಡುತ್ತಿದೆಯೇ ಅಥವಾ ಮಿಲಿಟರಿಯಿಂದ ಆಳಲ್ಪಡುತ್ತಿದೆಯೇ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ನೇತೃತ್ವದ ಭಾರತೀಯ ಸಂಸದೀಯ ನಿಯೋಗದೊಂದಿಗೆ ಲಂಡನ್‌ನಲ್ಲಿ ಉನ್ನತ ಮಟ್ಟದ ಸಭೆಯ ನಂತರ ಅವರ ಹೇಳಿಕೆಗಳು ಬಂದಿದ್ದವು. ಹಾಗೇ, ಪಾಕಿಸ್ತಾನಕ್ಕೆ ಕಳುಹಿಸಲಾದ ಅಂತಾರಾಷ್ಟ್ರೀಯ ನೆರವನ್ನು ಹೇಗೆ ಬಳಸಲಾಗುತ್ತಿದೆ? ಎಂಬುದರ ಕುರಿತು ಬ್ಲ್ಯಾಕ್‌ಮನ್ ಪ್ರಶ್ನೆಗಳನ್ನು ಎತ್ತಿದ್ದರು. ಅಭಿವೃದ್ಧಿಗಾಗಿ ಉದ್ದೇಶಿಸಿ ನೀಡಲಾದ ಹಣವನ್ನು ಭಾರತವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಬಳಸುವ ಚೀನೀ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಪಾಕ್ ಬಳಸಬಹುದು ಎಂದು ಅವರು ಆರೋಪಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ