ವಿವಾದದ ನಡುವೆ ಪಾಕ್ ವೇಗಿಯನ್ನು ಹೊಗಳಿದ ಕುಲ್ದೀಪ್ ಯಾದವ್; ಏನು ಹೇಳಿದ್ರು ನೋಡಿ
Kuldeep Yadav: ಏಷ್ಯಾಕಪ್‌ನಲ್ಲಿ ಕುಲ್ದೀಪ್ ಯಾದವ್ ಅವರ ಅದ್ಭುತ ಫಾರ್ಮ್ ಮುಂದುವರಿದಿದೆ. ಎರಡು ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಅವರ ಬ್ಯಾಟಿಂಗ್‌ಗೆ ಪ್ರಶಂಸೆ ಸೂಚಿಸಿದ್ದಾರೆ. ಅವರ ಪ್ರದರ್ಶನ ಮತ್ತು ಶಾಹೀನ್ ಅವರ ಬ್ಯಾಟಿಂಗ್ ಕುರಿತಾದ ಅವರ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಓಮನ್ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕಾಗಿ ತಂಡ ಸಿದ್ಧವಾಗಿದೆ.
ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ 2025 ರ ಏಷ್ಯಾಕಪ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದುವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಟೀಂ ಇಂಡಿಯಾ ಸೆಪ್ಟೆಂಬರ್ 19 ರಂದು ಓಮನ್ ವಿರುದ್ಧದ ಟೂರ್ನಮೆಂಟ್‌ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಅದಕ್ಕೂ ಮೊದಲು, ಕುಲ್ದೀಪ್ ಯಾದವ್ ಪಾಕಿಸ್ತಾನಿ ಆಟಗಾರನನ್ನು ಹೊಗಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಓಮನ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕುಲ್ದೀಪ್ ಯಾದವ್ ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರಿದಿ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಲ್ದೀಪ್ ಬಳಿ ‘ನೀವು ಯಾವ ಚೆಂಡನ್ನು ಚೆನ್ನಾಗಿ ಬೌಲ್ ಮಾಡಿದ್ದೀರಿ ಎಂದು ನೀವು ಭಾವಿಸುತ್ತೀರಿ?” ಎಂದು ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಅವರು, ‘ನಾನು ಹೇಗೆ ಭಾವಿಸುತ್ತೇನೆ ಎಂದು ನಾನು ನಿಮಗೆ ಏಕೆ ಹೇಳಬೇಕು?. ನೀವು ಬೌಲಿಂಗ್ ಮಾಡುವಾಗ ಎದುರಾಳಿ ಬ್ಯಾಟ್ಸ್‌ಮನ್ ಅನ್ನು ಅರ್ಥಮಾಡಿಕೊಂಡು ಬೌಲ್ ಮಾಡುತ್ತೀರಿ. ಒಳ್ಳೇಯ ಬ್ಯಾಟ್ಸ್‌ಮನ್ ಚೆನ್ನಾಗಿ ಆಡುತ್ತಾರೆ. ಶಾಹೀನ್ ಅಫ್ರಿದಿ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ; ಅವರು ಕಳೆದ ಎರಡು ಪಂದ್ಯಗಳಲ್ಲಿ ಬೌಲರ್‌ಗಳನ್ನು ದಂಡಿಸಿದ್ದಾರೆ’ ಎಂದು ಕುಲ್ದೀಪ್ ಯಾದವ್ ಉತ್ತರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

