Asia Cup 2025: ಪಾಕ್ ಆಟಗಾರ ಮಾಡಿದ ಎಡವಟ್ಟಿನಿಂದ ಅರ್ಧದಲ್ಲೇ ಮೈದಾನ ತೊರೆದ ಅಂಪೈರ್; ವಿಡಿಯೋ
Asia Cup 2025: 2025ರ ಏಷ್ಯಾಕಪ್‌ನ ಪಾಕಿಸ್ತಾನ-ಯುಎಇ ಪಂದ್ಯದಲ್ಲಿ, ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ ಅವರು ಎಸೆದ ಚೆಂಡು ಶ್ರೀಲಂಕಾದ ಅಂಪೈರ್ ರುಚಿರಾ ಅವರ ತಲೆಗೆ ಬಡಿದು ಗಾಯಗೊಳಿಸಿತು. ಈ ಘಟನೆಯಿಂದ ಪಂದ್ಯ ಕೊಂಚ ಸಮಯ ಸ್ಥಗಿತಗೊಂಡಿತು. ಹ್ಯಾರಿಸ್ ತನ್ನ ತಪ್ಪಿಗೆ ಕ್ಷಮೆಯಾಚಿಸಿದರು ಮತ್ತು ರುಚಿರಾ ಅವರನ್ನು ನಾಲ್ಕನೇ ಅಂಪೈರ್ ಬದಲಾಯಿಸಿದರು. ಪಂದ್ಯ ಮುಂದುವರೆಯಿತು.
2025 ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಹಾಗೂ ಯುಎಇ ನಡುವೆ ನಡೆದ ಪಂದ್ಯದ ಸಮಯದಲ್ಲಿ ಪಾಕಿಸ್ತಾನ ತಂಡದ ವಿಕೆಟ್‌ಕೀಪರ್ ಎಸೆದ ಚೆಂಡು ನಾನ್ ಸ್ಟ್ರೈಕ್ ಅಂಪೈರ್ ತಲೆಗೆ ಬಡಿದು, ಸ್ವಲ್ಪ ಸಮಯ ಮೈದಾನದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಚೆಂಡು ರಬಸವಾಗಿ ಬಿದ್ದ ಕಾರಣ ಶ್ರೀಲಂಕಾದ ಅಂಪೈರ್ ರುಚಿರಾ ಪಲ್ಲಿಯಗುರುಗೆ ಪಂದ್ಯದ ಅರ್ಧದಲ್ಲೇ ಮೈದಾನವನ್ನು ತೊರೆದು ಡಗೌಟ್ಗೆ ಮರಳಬೇಕಾಯಿತು.
ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ ಆರನೇ ಓವರ್ ಅನ್ನು ಪಾಕಿಸ್ತಾನದ ಸೈಮ್ ಅಯೂಬ್ ಬೌಲ್ ಮಾಡಿದರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಧ್ರುವ್ ಪರಾಶರ್ ಮಿಡ್‌ವಿಕೆಟ್ ಕಡೆಗೆ ಚೆಂಡನ್ನು ಆಡಿದರು, ಆದರೆ ಅದರಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಫೀಲ್ಡರ್ ಚೆಂಡನ್ನು ವಿಕೆಟ್‌ಕೀಪರ್‌ಗೆ ಎಸೆದರು. ಆದರೆ ಇಲ್ಲಿಯೇ ಕೀಪರ್ ಮೊಹಮ್ಮದ್ ಹ್ಯಾರಿಸ್ ಮಾಡಿದ ಎಡವಟ್ಟು ಅಂಪೈರ್ ತಲೆಗೆ ಗಾಯ ಮಾಡಿತು.
ವಾಸ್ತವವಾಗಿ, ಕೀಪರ್ ಹ್ಯಾರಿಸ್ ಚೆಂಡನ್ನು ಬೌಲರ್ಗೆ ಎಸೆಯುವ ಸಂದರ್ಭದಲ್ಲಿ ಆ ಚೆಂಡು ಶ್ರೀಲಂಕಾದ ಅಂಪೈರ್ ರುಚಿರಾ ಪಲ್ಲಿಯಗುರುಗೆ ಅವರ ತಕೆಗೆ ರಬಸವಾಗಿ ಬಡಿಯಿತು. ಆದರೆ ಇದನ್ನು ಹ್ಯಾರಿಸ್ ಉದ್ದೇಶಪೂರ್ವಕವಾಗಿ ಮಾಡಿದಲ್ಲ. ಬದಲಿಗೆ ಹ್ಯಾರಿಸ್ ನಾನ್ ಸ್ಟ್ರೈಕ್ನಲ್ಲಿ ಯಾರು ಎಲ್ಲಿದ್ದಾರೆ ಎಂಬುದನ್ನು ನೋಡದೆ ಚೆಂಡನ್ನು ಎಸೆದ ತಪ್ಪಿನಿಂದಾಗಿ ಚೆಂಡು ಅಂಪೈರ್ ತಲೆಗೆ ಬಡಿಯಿತು.
ಪಾಕಿಸ್ತಾನ ತಂಡದ ಫಿಸಿಯೋ ತಕ್ಷಣ ಮೈದಾನಕ್ಕೆ ಬಂದು ಅಂಪೈರ್ ಅನ್ನು ಪರೀಕ್ಷಿಸಿದರು. ಆದರೆ ನೋವಿನಿಂದಾಗಿ ಅವರು ಅಂಪೈರಿಂಗ್ ಅನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರನ್ನು ತಕ್ಷಣ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು ಮತ್ತು ನಾಲ್ಕನೇ ಅಂಪೈರ್ ಘಾಜಿ ಸೊಹೈಲ್ ಅವರನ್ನು ಬದಲಾಯಿಸಲಾಯಿತು. ಆದಾಗ್ಯೂ, ಹ್ಯಾರಿಸ್ ತಮ್ಮ ತಪ್ಪನ್ನು ಒಪ್ಪಿಕೊಂಡು ನೇರವಾಗಿ ಅಂಪೈರ್ ರುಚಿರಾ ಅವರ ಬಳಿಗೆ ಹೋಗಿ ಕ್ಷಮೆಯಾಚಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

