Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಕಾರು ಬದಲಾವಣೆ; ಈಗ ಬಳಸುತ್ತಿರುವ ಶಸ್ತ್ರಸಜ್ಜಿತ ಮರ್ಸಿಡಸ್​ ಮೇಬ್ಯಾಕ್​​ S650 ಬೆಲೆ 12 ಕೋಟಿ ರೂ., ಉಳಿದ ವಿಶೇಷತೆ ಮಾಹತಿ ಇಲ್ಲಿದೆ

ನರೇಂದ್ರ ಮೋದಿ ಬಳಕೆ ಮಾಡುತ್ತಿರುವ ಮರ್ಸಿಡಸ್​ ಮೇಬ್ಯಾಕ್​ S650 ಕಾರು 6.0 ಲೀಟರ್​​ ಸಾಮರ್ಥ್ಯದ ಅವಳಿ ಟರ್ಬೋ V12 ಎಂಜಿನ್​​ನಿಂದ ಚಾಲಿತವಾಗುತ್ತದೆ. ಗಂಟೆಗೆ 160 ಕಿಮೀಗಳಷ್ಟು ವೇಗವಾಗಿ ಓಡುತ್ತದೆ.

ಪ್ರಧಾನಿ ಮೋದಿ ಕಾರು ಬದಲಾವಣೆ; ಈಗ ಬಳಸುತ್ತಿರುವ ಶಸ್ತ್ರಸಜ್ಜಿತ ಮರ್ಸಿಡಸ್​ ಮೇಬ್ಯಾಕ್​​ S650 ಬೆಲೆ 12 ಕೋಟಿ ರೂ., ಉಳಿದ ವಿಶೇಷತೆ ಮಾಹತಿ ಇಲ್ಲಿದೆ
ಮರ್ಸಿಡಸ್​ ಮೇಬ್ಯಾಕ್​ S650
Follow us
TV9 Web
| Updated By: Lakshmi Hegde

Updated on: Dec 28, 2021 | 9:06 AM

ಪ್ರಧಾನಿ ಮೋದಿಯವರು ತಮ್ಮ ಕಾರನ್ನು ಬದಲಿಸಿದ್ದಾರೆ. ಈ ಹಿಂದೆ ಅವರು ಬಳಸಿದ್ದ ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್​​ಗಿಂತಲೂ ನವೀಕೃತಗೊಂಡಿರುವ, ಹೆಚ್ಚಿನ ಭದ್ರತಾ ವ್ಯವಸ್ಥೆ ಇರುವ ಮರ್ಸಿಡಸ್​ ಮೇಬ್ಯಾಕ್​​ S650 ಕಾರ(Mercedes-Maybach S650)ನ್ನು ಅವರೀಗ ಬಳಸುತ್ತಿದ್ದಾರೆ.  ಇದು ಶಸ್ತ್ರಸಜ್ಜಿತ ಕಾರ್ ಆಗಿದ್ದು, ಇತ್ತೀಚೆಗಷ್ಟೇ  ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಭಾರತಕ್ಕೆ ಆಗಮಿಸಿದ್ದಾಗ, ಅವರನ್ನು ಹೈದರಾಬಾದ್​ ಹೌಸ್​ನಲ್ಲಿ ಭೇಟಿಯಾಗಲು ಇದೇ ಕಾರಿನಲ್ಲಿ ಪ್ರಧಾನಿ ಮೋದಿ ಆಗಮಿಸಿದ್ದರು. ಆಗಲೇ ಮೊದಲು ಈ ಕಾರು ಗಮನಸೆಳೆದಿದ್ದು. ಅದಾದ ಬಳಿಕ ಇತ್ತೀಚೆಗೆ ಮತ್ತೊಮ್ಮೆ ಪ್ರಧಾನಿ ಮೋದಿಯವರ ಬೆಂಗಾವಲಿನಲ್ಲಿ ಕಾಣಿಸಿಕೊಂಡಿತ್ತು. 

ಇದೀಗ ಪ್ರಧಾನಿ ಮೋದಿ ಬಳಸುತ್ತಿರುವ ಮರ್ಸಿಡಸ್​ ಮೇಬ್ಯಾಕ್​ S650 ಕಾರು VR 10 ಮಟ್ಟದ ರಕ್ಷಣಾ ಕವಚ ಹೊಂದಿದೆ. ಅಂದರೆ ಇದು ಅತ್ಯಂತ ಉನ್ನತ ಮಟ್ಟದ ರಕ್ಷಣಾ ವ್ಯವಸ್ಥೆಯಾಗಿದ್ದು, ಗುಂಡುಗಳ ದಾಳಿ, ಸ್ಫೋಟಗಳಂಥ ಘಟನೆ ನಡೆದಾಗ ಹೆಚ್ಚಿನ ಪ್ರತಿರೋಧಕ ಒಡ್ಡುತ್ತದೆ. ಒಳಗೆ ಇದ್ದವರಿಗೆ ಅಪಾಯ ಆಗುವುದನ್ನು ತಪ್ಪಿಸುತ್ತದೆ. ಮರ್ಸಿಡಸ್​ ಮೇಬ್ಯಾಕ್​ S600 ಗಾರ್ಡ್ ಕಾರು ಕಳೆದ ವರ್ಷವಷ್ಟೇ ಭಾರತದಲ್ಲಿ ಬಿಡುಗಡೆಯಾಗಿದ್ದು, ಆಗ ಅದರ ಬೆಲೆ 10.5 ಕೋಟಿ ರೂಪಾಯಿ ಇತ್ತು. ಆದರೆ ಸದ್ಯ ಅದರ ಮೌಲ್ಯ 12 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಈ ದೇಶದ ಪ್ರಧಾನಿ ರಕ್ಷಣೆ ಹೊಣೆ ವಿಶೇಷ ರಕ್ಷಣಾ ದಳ(SPG)ದ್ದು. ಪ್ರಧಾನಿಗೆ ಯಾವ ಕಾರು ಬೇಕು ಎಂಬುದರ ಬಗ್ಗೆಯೂ ಈ ಎಸ್​ಪಿಜಿಯೇ ಮನವಿ ಕಳಿಸುತ್ತದೆ. ಹಾಗೇ, ತಮ್ಮ ರಕ್ಷಣೆಯಲ್ಲಿರುವ ವ್ಯಕ್ತಿಗೆ ಎಷ್ಟರ ಮಟ್ಟಿಗೆ ರಕ್ಷಣೆ ಬೇಕು, ಅದಕ್ಕೆ ಅಗತ್ಯವಿರುವ ಕಾರು ಯಾವುದು ಎಂಬಿತ್ಯಾದಿ ನಿರ್ಧಾರಗಳನ್ನೂ ಎಸ್​ಪಿಜಿಯೇ ತೆಗೆದುಕೊಳ್ಳುತ್ತದೆ.  ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದ ಕಾರು ಬುಲೆಟ್​ ಪ್ರೂಫ್​ ಆಗಿತ್ತು. 2014ರಲ್ಲಿ ಪ್ರಧಾನಿಯಾದ ನಂತರ ಮೊದಲ ಅವಧಿಗೆ ತಮ್ಮ ಕಾರಿನಲ್ಲಿ ಅಷ್ಟೊಂದು ಬದಲಾವಣೆ ಮಾಡಲಿಲ್ಲ. ಆದರೆ ಎರಡನೇ ಅವಧಿಯಲ್ಲಿ ಆಗಾಗ ಅವರು ಬಳಸುವ ಕಾರು ಬದಲಾಗುತ್ತಿದೆ. ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಮತ್ತು ಬಿಎಂಡಬ್ಲ್ಯೂ ಸರಣಿಯ ಕಾರುಗಳನ್ನು ಈಗಾಗಲೇ ಬಳಸಿದ್ದಾರೆ.

ಏನಿದರ ವಿಶೇಷತೆ? ಇದೀಗ ನರೇಂದ್ರ ಮೋದಿ ಬಳಕೆ ಮಾಡುತ್ತಿರುವ ಮರ್ಸಿಡಸ್​ ಮೇಬ್ಯಾಕ್​ S650 ಕಾರು 6.0 ಲೀಟರ್​​ ಸಾಮರ್ಥ್ಯದ ಅವಳಿ ಟರ್ಬೋ V12 ಎಂಜಿನ್​​ನಿಂದ ಚಾಲಿತವಾಗುತ್ತದೆ. ಗಂಟೆಗೆ 160 ಕಿಮೀಗಳಷ್ಟು ವೇಗವಾಗಿ ಓಡುತ್ತದೆ.  ಕಾರಿನ ಕಿಟಕಿ ಮತ್ತು ಇಡೀ ಮೈ ಸ್ಟೀಲ್​ ಕೋರ್​ ಗುಂಡುಗಳನ್ನು ತಡೆದುಕೊಳ್ಳಬಹುದು. ಇದು 2010ರ ಸರಣಿಯ ಸ್ಫೋಟಕ ಪ್ರೂಫ್​ ರೇಟಿಂಗ್​ ಪಡೆದುಕೊಂಡಿದ್ದು, ಕೇವಲ ಮೀಟರ್ ಅಂತರದಲ್ಲೇ ಟ್ರಿನಿಟ್ರೋಟೊಲ್ಯೂನ್ (TNT) ಸ್ಫೋಟವಾದರೂ ಈ ಕಾರು ತಡೆದುಕೊಳ್ಳಬಹುದು.  ಅನಿಲ ದಾಳಿ ಸಂದರ್ಭದಲ್ಲೂ ಕಾರು ರಕ್ಷಣೆ ಒದಗಿಸಬಲ್ಲದು. ಕಾರಿನ ಒಳಗೆ ಕೂಡ ಐಷಾರಾಮಿ ವ್ಯವಸ್ಥೆಯಿದೆ. ಆರಾಮಾಗಿ, ಕಾಲು ಚಾಚಿ ಕುಳಿತುಕೊಳ್ಳಬಹುದಾದ ವ್ಯವಸ್ಥೆಯಿದೆ.

ಇದನ್ನೂ ಓದಿ: Viral Video: ಸಿಡಿಲು ಬಡಿದು ಸ್ಪೋಟಗೊಂಡ ವ್ಯಕ್ತಿ; ನೆಟ್ಟಿಗರಲ್ಲಿ ಭಯ ಹುಟ್ಟಿಸಿದ ವಿಡಿಯೋ ನೋಡಿ

ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ