ಡಿ.25ರಂದು ಮಥುರಾ ಠಾಕೂರ್​ ಬಂಕೆ ಬಿಹಾರಿ ದೇಗುಲದ ಅನಾದಿ ಕಾಲದ ಸಂಪ್ರದಾಯ ಉಲ್ಲಂಘನೆ; ವಿಡಿಯೋ ವೈರಲ್​ ಆದ ಬೆನ್ನಲ್ಲೇ ಕ್ರಮಕ್ಕೆ ಮುಂದಾದ ಆಡಳಿತ

ಡಿ.25ರಂದು ಮಥುರಾ ಠಾಕೂರ್​ ಬಂಕೆ ಬಿಹಾರಿ ದೇಗುಲದ ಅನಾದಿ ಕಾಲದ ಸಂಪ್ರದಾಯ ಉಲ್ಲಂಘನೆ; ವಿಡಿಯೋ ವೈರಲ್​ ಆದ ಬೆನ್ನಲ್ಲೇ ಕ್ರಮಕ್ಕೆ ಮುಂದಾದ ಆಡಳಿತ
ಬಂಕೆ ಬಿಹಾರಿ ದೇಗುಲ

ಶನಿವಾರ (ಡಿ.25)ದಂದು ಈ ಮಂದಿರದ ಹೊರಗೆ ಅನೇಕ ಭಕ್ತರು ನೆರೆದಿದ್ದರು. ಅವರೆಲ್ಲರೂ ಶ್ರೀಕೃಷ್ಣ ದೇವರ ದರ್ಶನಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದರು. ಅಂದು ಮುಂಜಾನೆಯಿಂದಲೇ ದೇಗುಲದಲ್ಲಿ ಭಕ್ತರು ತುಂಬಿ ಹೋಗಿದ್ದರು.

TV9kannada Web Team

| Edited By: Lakshmi Hegde

Dec 28, 2021 | 7:50 AM

ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಠಾಕೂರ್​ ಬಂಕೆ ಬಿಹಾರಿ ದೇವಸ್ಥಾನ(ಇದು ರಾಧಾ-ವಲ್ಲಭ ದೇಗುಲ) (Thakur Banke Bihari Mandir )ದಲ್ಲಿ ಡಿಸೆಂಬರ್ 25ರ ದಿನ ಅಲ್ಲಿನ ಸೇವಾಯತ್​ಗಳು (ಧಾರ್ಮಿಕ ಕಾರ್ಯಕ್ರಮ ನೆರವೇರಿಸುವವರು) ಮಾಡಿದ ಕೆಲಸವೊಂದು ಈಗ ಸುದ್ದಿಯಾಗಿದೆ. ಡಿಸೆಂಬರ್​ 25ರಂದು ಇಲ್ಲಿನ ಸೇವಾಯತ್​​ಗಳು, ದೇಗುಲದ ಗರ್ಭಗೃಹದ ಬಾಗಿಲು ತೆರೆಯುವುದಕ್ಕೂ ಮೊದಲೇ ಆಯ್ದ ಕೆಲವರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಮಂದಿರದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಹೇಳಲಾಗಿದೆ.

ಶನಿವಾರ (ಡಿ.25)ದಂದು ಈ ಮಂದಿರದ ಹೊರಗೆ ಅನೇಕ ಭಕ್ತರು ನೆರೆದಿದ್ದರು. ಅವರೆಲ್ಲರೂ ಶ್ರೀಕೃಷ್ಣ ದೇವರ ದರ್ಶನಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದರು. ಅಂದು ಮುಂಜಾನೆಯಿಂದಲೇ ದೇಗುಲದಲ್ಲಿ ಭಕ್ತರು ತುಂಬಿ ಹೋಗಿದ್ದರು. ಈ ವೇಳೆ ದೇಗುಲದಲ್ಲಿದ್ದ ಸೇವಾಯತ್​ (ಅರ್ಚಕ) ಅಲ್ಲಿದ್ದವರಿಗೆಲ್ಲ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಔಪಚಾರಿಕವಾಗಿ, ಸಾಂಪ್ರದಾಯಿಕವಾಗಿ ತೆರೆಯುವ ಮುನ್ನು ಹೀಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸರಿಯಲ್ಲ, ಇದು ಮಂದಿರದ ಪ್ರಾಚೀನ ಪರಂಪರೆಯನ್ನು ಉಲ್ಲಂಘ ಮಾಡಿದಂತೆ ಎಂಬ ಆರೋಪ ಕೇಳಿಬಂದಿದೆ.

ಹೀಗೆ ದೇಗುಲದ ಬಾಗಿಲು ತೆಗೆದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ದೇಗುಲ ಆಡಳಿತ ಮಂಡಳಿಯೂ ಅದನ್ನು ಗಮನಿಸಿದೆ.  ದೇಗುಲದ ಸುತ್ತಲಿನ ಸಿಸಿಟಿವಿ ಫೂಟೇಜ್​​ಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಅದನ್ನೆಲ್ಲ ನೋಡಿ, ನಂತರ ಅಂತಿಮ ವರದಿಯನ್ನು ಈ ದೇಗುಲ ಆಡಳಿತದ ಮುಖ್ಯಸ್ಥರಾಗಿರುವ ಸಿವಿಲ್​ ನ್ಯಾಯಾಧೀಶರಿಗೆ ನೀಡಲಾಗುವುದು. ಮುಂದಿನ ಕ್ರಮವನ್ನು ಅವರೇ ತೆಗೆದುಕೊಳ್ಳುತ್ತಾರೆ ಎಂದು  ದೇಗುಲ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಹಾಸಿಗೆಯಿಂದ ಎದ್ದ ತಕ್ಷಣ ಅಂಗೈಯನ್ನು ನೋಡುವುದೇಕೆ? ಇದರ ಹಿಂದೆ ಅಡಗಿದೆ ಶುಭ-ಫಲಗಳ ಸತ್ಯ

Follow us on

Related Stories

Most Read Stories

Click on your DTH Provider to Add TV9 Kannada