ಹಾಸಿಗೆಯಿಂದ ಎದ್ದ ತಕ್ಷಣ ಅಂಗೈಯನ್ನು ನೋಡುವುದೇಕೆ? ಇದರ ಹಿಂದೆ ಅಡಗಿದೆ ಶುಭ-ಫಲಗಳ ಸತ್ಯ

ಹಾಸಿಗೆಯಿಂದ ಎದ್ದ ತಕ್ಷಣ ಅಂಗೈಯನ್ನು ನೋಡುವುದೇಕೆ? ಇದರ ಹಿಂದೆ ಅಡಗಿದೆ ಶುಭ-ಫಲಗಳ ಸತ್ಯ
ಹಸಿಗೆಯಿಂದ ಎದ್ದ ತಕ್ಷಣ ಅಂಗೈಯನ್ನು ನೋಡುವುದೇಕೆ? ಇದರ ಹಿಂದೆ ಅಡಗಿದೆ ರೋಚಕ ಸತ್ಯ

ಈ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಮತ್ತು ಮನಸ್ಸಿನಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬಲು, ನಮ್ಮ ಋಷಿ ಮುನಿಗಳು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ಹಸ್ತದ ದರ್ಶನವನ್ನು ಮಾಡುವಂತೆ ಸಲಹೆ ನೀಡಿದ್ದಾರೆ.

TV9kannada Web Team

| Edited By: Ayesha Banu

Dec 28, 2021 | 7:22 AM

ಬೆಳಗ್ಗೆ ಎದ್ದಾಕ್ಷಣದ ಸಮಯ ಅತ್ಯಂತ ಅಮೂಲ್ಯ. ಇದು ಇಡೀ ದಿನದ ಭವಿಷ್ಯವನ್ನೇ ಹಿಡಿದಿಟ್ಟುಕೊಂಡಿರುತ್ತೆ. ಹಾಸಿಗೆಯಿಂದ ಎದ್ದ ತಕ್ಷಣ ನಮ್ಮ ಮನಸ್ಸು ಯಾವ ಸ್ಥಿತಿಯಲ್ಲಿ ಇರುತ್ತದೆಯೋ ಅದು ಇಡೀ ದಿನವನ್ನು ನಿರ್ಧರಿಸುತ್ತದೆ. ಹೀಗಾಗಿ ದಿನದ ಆರಂಭ ಖುಷಿ, ಸಂತೋಷದಿಂದಾಗಬೇಕು. ಬೆಳಗಿನ ಸಮಯದಲ್ಲಿ, ನೀವು ಧನಾತ್ಮಕ ಶಕ್ತಿಯನ್ನು ಪಡೆಯುವಂತಹ ಕೆಲಸಗಳನ್ನು ಮಾಡಬೇಕು. ನೀವು ಸಕಾರಾತ್ಮಕ ಶಕ್ತಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ, ನಿಮ್ಮ ಇಡೀ ದಿನ ಅರ್ಥಪೂರ್ಣವಾಗುತ್ತದೆ ಎಂದು ನಂಬಲಾಗಿದೆ.

ಈ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಮತ್ತು ಮನಸ್ಸಿನಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬಲು, ನಮ್ಮ ಋಷಿ ಮುನಿಗಳು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ಹಸ್ತದ ದರ್ಶನವನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಜ್ಯೋತಿಷ್ಯದಲ್ಲಿ, ಅಂಗೈಯಲ್ಲಿ ಮಾಡಿದ ರೇಖೆಗಳನ್ನು ಅದೃಷ್ಟದೊಂದಿಗೆ ಸಂಪರ್ಕಿಸುವ ಮೂಲಕ ನೋಡಲಾಗುತ್ತದೆ. ಕಣ್ಣು ತೆರೆದ ತಕ್ಷಣ ಮೊದಲು ನಿಮ್ಮ ಅಂಗೈಗಳನ್ನು ನೋಡಿಕೊಳ್ಳಬೇಕು. ಅಂಗೈಗಳಲ್ಲಿ ಮೂಡಿರುವ ರೇಖೆಗಳು ಅದೃಷ್ಟವನ್ನು ತಂದುಕೊಡುತ್ತವೆ ಎನ್ನಲಾಗುತ್ತೆ.

ಅಂಗೈ ನೋಡುವ ಹಿಂದಿರುವ ಧಾರ್ಮಿಕ ನಂಬಿಕೆ ‘ಕರಾಗ್ರೇ ವಸತೇ ಲಕ್ಷ್ಮಿ, ಕರ್ಮಧೇ ಸರಸ್ವತಿ, ಕರ್ಮೂಲೇ ತು ಗೋವಿಂದಾಃ ಪ್ರಭಾತೇ ಕರದರ್ಶನಂ’ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಎಂದರೆ ನನ್ನ ಕೈಗಳ ಮುಂಭಾಗದಲ್ಲಿ ಸಂಪತ್ತಿನ ದೇವತೆ, ಮಧ್ಯದಲ್ಲಿ ಜ್ಞಾನವನ್ನು ನೀಡುವ ತಾಯಿ ಸರಸ್ವತಿ ನೆಲೆಸಿದ್ದಾಳೆ. ಮತ್ತು ಗೋವಿಂದ ಅಂದರೆ ಭಗವಾನ್ ವಿಷ್ಣುವು ಮೂಲದಲ್ಲಿ ನೆಲೆಸಿದ್ದಾನೆ. ತಾಯಿ ಸರಸ್ವತಿಯನ್ನು ಬುದ್ಧಿವಂತಿಕೆಯ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವತೆ ಸಂಪತ್ತಿನ ದೇವತೆ ಮತ್ತು ಭಗವಾನ್ ವಿಷ್ಣುವು ಜಗತ್ತನ್ನು ಕಾಪಾಡುವವನು, ಆದ್ದರಿಂದ ಬೆಳಿಗ್ಗೆ ಅಂಗೈ ನೋಡುವ ಮೂಲಕ ಈ ಮೂವರು ದೇವತೆಗಳ ದರ್ಶನ ಮಾಡಿ ಅವರ ಅನುಗ್ರಹವನ್ನು ಪಡೆಯಬಹುದು. ಇದರಿಂದ ಜೀವನದಲ್ಲಿ ಸುಖ, ಸಮೃದ್ಧಿ, ಕೌಶಲ್ಯ, ಕೀರ್ತಿ ಇತ್ಯಾದಿ ಯಾವುದಕ್ಕೂ ಕೊರತೆ ಇರುವುದಿಲ್ಲ.

ತೀರ್ಥಯಾತ್ರೆಗಳ ಸ್ಥಳವನ್ನು ಎರಡೂ ಕೈಗಳ ಅಂಗೈಗಳಲ್ಲಿ ಪರಿಗಣಿಸಲಾಗುತ್ತದೆ. ನಮ್ಮ ಕೈಗಳ ನಾಲ್ಕು ಬೆರಳುಗಳ ಮುಂಭಾಗದಲ್ಲಿ ದೇವತೀರ್ಥಗಳಿವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತೋರುಬೆರಳಿನ ಮೂಲ ಭಾಗದಲ್ಲಿ ‘ಪಿತೀರ್ಥ’, ಕಿರುಬೆರಳಿನ ಮೂಲ ಭಾಗದಲ್ಲಿ ‘ಪ್ರಜಾಪತಿತೀರ್ಥ’ ಮತ್ತು ಹೆಬ್ಬೆರಳಿನ ಮೂಲ ಭಾಗದಲ್ಲಿ ‘ಬ್ರಹ್ಮತೀರ್ಥ’ ಎಂದು ಪರಿಗಣಿಸಲಾಗುತ್ತದೆ. ಬಲಗೈಯ ಮಧ್ಯದಲ್ಲಿ ‘ಅಗ್ನಿತೀರ್ಥ’ ಮತ್ತು ಎಡಗೈಯ ಮಧ್ಯದಲ್ಲಿ ‘ಸೋಮತೀರ್ಥ’ ಮತ್ತು ಎಲ್ಲಾ ಬೆರಳುಗಳ ಕೀಲುಗಳಲ್ಲಿ ‘ಋಷಿತೀರ್ಥ’ ಇರುತ್ತದೆ. ಈ ರೀತಿಯಾಗಿ, ನಾವು ಬೆಳಿಗ್ಗೆ ಎದ್ದು ನಮ್ಮ ಅಂಗೈಯನ್ನು ನೋಡಿದಾಗ, ದೇವರೊಂದಿಗೆ ಈ ತೀರ್ಥಯಾತ್ರೆಗಳ ಪುಣ್ಯವೂ ಪ್ರಾಪ್ತಿಯಾಗುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬಾರದು? -ಬೆಳಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಹರಡಿಕೊಂಡ ಹೆಂಡತಿಯನ್ನು ನೋಡಬಾರದು. -ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು. -ಪ್ರಾಣಿಗಳು ಅದರಲ್ಲೂ ಕ್ರೂರ ಪ್ರಾಣಿಗಳ ಫೋಟೋವನ್ನು ನೋಡಲೇಬಾರದು. -ಚಪ್ಪಲಿ, ಪೊರಕೆಯನ್ನು ನೋಡಬಾರದು.

ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು? -ಗೋವಿನಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗೇ ಮುಂಜಾನೆ ನಾವು ಎದ್ದ ಕೂಡಲೇ ಗೋವಿನ ಮುಖ ನೋಡಿದ್ರೆ ಬಹಳ ಉತ್ತಮ. -ಗೋವನ್ನು ನೋಡೋದ್ರಿಂದ ಸಕಲ ದೇವರ ದರ್ಶನ ಮಾಡಿದ ಪುಣ್ಯ ದೊರೆಯುತ್ತೆ ಎನ್ನಲಾಗುತ್ತೆ. -ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸೂರ್ಯ. ಸೂರ್ಯನ ದರ್ಶನದಿಂದ ದಿನವಿಡೀ ನವಚೈತನ್ಯವಿರುತ್ತೆ. -ದೇವರುಗಳ ಫೋಟೋ, ನರಿ, ಕುದುರೆ, ತೆಂಗಿನಮರ, ಬಾಳೆಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ನೀರು, ಮರಗಳನ್ನು ನೋಡಬಹುದು.

ಇದನ್ನೂ ಓದಿ: ಬೆಳಗೆದ್ದು ಯಾರ ಮುಖವಾ ನಾನೂ ನೋಡಲಿ… ಬೆಳಗ್ ಬೆಳಗ್ಗೆ ಏನನ್ನು ನೋಡಬೇಕು? ಏನನ್ನು ನೋಡಬಾರದು?

Follow us on

Related Stories

Most Read Stories

Click on your DTH Provider to Add TV9 Kannada