Bengaluru Potholes: ಬೆಂಗಳೂರು ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಮತ್ತಷ್ಟು ಅವ್ಯವಸ್ಥೆ
ಬೆಂಗಳೂರಿನ ರಸ್ತೆ ಗುಂಡಿಗಳು ದೇಶದಾದ್ಯಂತ ಚರ್ಚೆಯಾಗುತ್ತಿವೆ. ಇದರ ಕುರಿತು ಹಲವು ಐಟಿ ದಿಗ್ಗಜರು ಧ್ವನಿ ಎತ್ತಿದ್ದಾರೆ. ಬ್ಲ್ಯಾಕ್ ಬಕ್ ಕಂಪನಿಯ ಸಿಇಓ ರಾಜೇಶ್ ಯಾಬಾಜಿ ಇಲ್ಲಿನ ರಸ್ತೆ ಗುಂಡಿಗಳ ದುಸ್ಥಿತಿ ನೋಡಿ ತಮ್ಮ ಕಂಪನಿಯನ್ನೇ ಸ್ಥಳಾಂತರಗೊಳಿಸಲು ಹೊರಟಿದ್ದಾರೆ. ಈ ಬಗ್ಗೆ Tv9ನ 'ಏನ್ ರೋಡ್ ಗುರು' ಅಭಿಯಾನದ ವೀಡಿಯೋ ಇಲ್ಲಿದೆ ನೋಡಿ
ಬೆಂಗಳೂರು, ಸೆಪ್ಟೆಂಬರ್ 18 : ಬೆಂಗಳೂರಿನ ರಸ್ತೆ ಗುಂಡಿಗಳು ದೇಶವ್ಯಾಪಿಯಾಗಿ ಚರ್ಚೆಗೆ ಗ್ರಾಸವಾಗಿದ್ದು, ಮೋಹನ್ ದಾಸ್ ಪೈ, ರಾಜೇಶ್ ಯಾಬಾಜಿ ಸೇರಿದಂತೆ ಹಲವು ಐಟಿ ದಿಗ್ಗಜರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಕಳೆದ 9 ವರ್ಷಗಳಿಂದ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಬ್ಲ್ಯಾಕ್ ಬಕ್ ಕಂಪನಿ ನಡೆಸುತ್ತಿರುವ ರಾಜೇಶ್ ಯಾಬಾಜಿ ಇಲ್ಲಿನ ರಸ್ತೆ ಗುಂಡಿಗಳ ದುಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷಗಳಿಂದ ರಸ್ತೆಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗದ ಕಾರಣ ಕಂಪನಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ Tv9 ‘ಏನ್ ರೋಡ್ ಗುರು’ ಎಂಬ ಅಭಿಯಾನದ ಮೂಲಕ ಪಣತ್ತೂರು ಮುಖ್ಯ ರಸ್ತೆಯಲ್ಲಿರುವ ಗುಂಡಿಗಳ ದೃಶ್ಯಾವಳಿಗಳು ಇಲ್ಲಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 18, 2025 02:41 PM

