ಧರ್ಮಸ್ಥಳ ಕೇಸ್: ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಅಯ್ಯಪ್ಪನ ಪುತ್ರ
ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಪಡೆಗೆ 7 ಕಳೇಬರಗಳು ದೊರಕಿವೆ. ಸೌಜನ್ಯ ಮಾವ ವಿಠ್ಠಲಗೌಡರ ಮಾಹಿತಿಯಡಿ ಎಸ್ಐಟಿ ಪಡೆ ತನಿಖೆ ನಡೆಸ್ತಿದ್ದು, ಎರಡು ದಿನದಲ್ಲಿ ಏಳು ಅಸ್ಥಿ ಪಂಜರವನ್ನ ಸಂಗ್ರಹಿಸಿದ್ದಾರೆ. ಹಾಗೇ ದೊರಕಿರುವ ವಾಕಿಂಗ್ ಸ್ಟಿಕ್ ಹಾಗೂ ಐಡಿ ಕಾರ್ಡ್, 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಡಗಿನ ಪೊನ್ನಂಪೇಟೆ ಬಳಿಯ ಶೆಟ್ಟಿಗೇರಿಯ ಯು.ಬಿ.ಅಯ್ಯಪ್ಪನ್ನದ್ದು ಅನ್ನೋದು ಗೊತ್ತಾಗಿದೆ. ಇನ್ನು ಅಯ್ಯಪ್ಪ ಮಗ ಜೀವನ್ ಟಿವಿ9 ಜೊತೆ ಮಾತನಾಡಿದ್ದು, ಬಂಗ್ಲೆಗುಡ್ಡದಲ್ಲಿ ಸಿಕ್ಕ ವಾಕಿಂಗ್ ಸ್ಟಿಕ್ ನಮ್ಮ ತಂದೆಯವರದ್ದೇ ಎಂದು ಒಪ್ಪಿಕೊಂಡಿದ್ದಾರೆ.
ಕೊಡಗು/ಮಂಗಳೂರು, (ಸೆಪ್ಟೆಂಬರ್ 18): ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಪಡೆಗೆ 7 ಕಳೇಬರಗಳು ದೊರಕಿವೆ. ಸೌಜನ್ಯ ಮಾವ ವಿಠ್ಠಲಗೌಡರ ಮಾಹಿತಿಯಡಿ ಎಸ್ಐಟಿ ಪಡೆ ತನಿಖೆ ನಡೆಸ್ತಿದ್ದು, ಎರಡು ದಿನದಲ್ಲಿ ಏಳು ಅಸ್ಥಿ ಪಂಜರವನ್ನ ಸಂಗ್ರಹಿಸಿದ್ದಾರೆ. ಹಾಗೇ ದೊರಕಿರುವ ವಾಕಿಂಗ್ ಸ್ಟಿಕ್ ಹಾಗೂ ಐಡಿ ಕಾರ್ಡ್, 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಡಗಿನ ಪೊನ್ನಂಪೇಟೆ ಬಳಿಯ ಶೆಟ್ಟಿಗೇರಿಯ ಯು.ಬಿ.ಅಯ್ಯಪ್ಪನ್ನದ್ದು ಅನ್ನೋದು ಗೊತ್ತಾಗಿದೆ. ಇನ್ನು ಅಯ್ಯಪ್ಪ ಮಗ ಜೀವನ್ ಟಿವಿ9 ಜೊತೆ ಮಾತನಾಡಿದ್ದು, ಬಂಗ್ಲೆಗುಡ್ಡದಲ್ಲಿ ಸಿಕ್ಕ ವಾಕಿಂಗ್ ಸ್ಟಿಕ್ ನಮ್ಮ ತಂದೆಯವರದ್ದೇ ಎಂದು ಒಪ್ಪಿಕೊಂಡಿದ್ದಾರೆ.
2017 ರ ಮೇ 18ರಿಂದ ನಾಪತ್ತೆಯಾಗಿದ್ದರು. ಸುಮಾರು ಆರು ತಿಂಗಳಕಾಲ ಹುಡುಕಾಡಿದ್ದೆವು. ಆದರೆ ತಂದೆ ಪತ್ತೆಯಾಗಿರಲಿಲ್ಲ.ಇದೀಗ ಬಂಗ್ಲೆ ಗುಡ್ಡೆಯಲ್ಲಿ ಐಡಿ ಕಾರ್ಡ್ ಪತ್ತೆಯಾಗಿರುವುದು ಆಶ್ಚರ್ಯ ವಾಗಿದೆ. ಅವರಿಗೆ ಆರೋಗ್ಯ ಸಮಸ್ಯೆ ಬಿಟ್ಟರೆ ಬೇರಾವುದೇ ಸಮಸ್ಯೆ ಇರಲಿಲ್ಲ. ಯಾವುದೇ ಬೇಜಾರು ಮನಸ್ಥಾಪ, ವೈಮನಸ್ಯ ಇರಲಿಲ್ಲ. ಅವರು ಮಂಜುನಾಥನ ಭಕ್ತರಾಗಿದ್ದರು. ಆದರೆ ಹೇಳದೇ ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗಿರಲಿಲ್ಲ. ಅವರ ನಾಪತ್ತೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿ ಪೊಲೀಸರು ವಿಚಾರ ತಿಳಿಸಬೇಕು ಎಂದಿದ್ದಾರೆ.
