Crime News: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಬರ್ಬರ ಹತ್ಯೆ; ಕೊಲೆಯ ದೃಶ್ಯ ಮೊಬೈಲ್ನಲ್ಲಿ ಸೆರೆ
Bengaluru Crime: ಕೊಲೆಯ ದೃಶ್ಯ ಮೊಬೈಲ್ನಲ್ಲಿ ಸೆರೆ ಆಗಿದೆ. ಕೊಲೆಗಾರರು ಮಹಿಳೆಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮೂವರು ಕೊಚ್ಚಿ ಕೊಲೆ ಮಾಡುವುದು ಮೊಬೈಲ್ನಲ್ಲಿ ಸೆರೆ ಆಗಿದೆ.
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಒಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯ ದೃಶ್ಯ ಮೊಬೈಲ್ನಲ್ಲಿ ಸೆರೆ ಆಗಿದೆ. ಕೊಲೆಗಾರರು ಮಹಿಳೆಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮೂವರು ಕೊಚ್ಚಿ ಕೊಲೆ ಮಾಡುವುದು ಮೊಬೈಲ್ನಲ್ಲಿ ಸೆರೆ ಆಗಿದೆ.
ಹಾಸನ: ಶಿರಾಢಿಘಾಟ್ ನಲ್ಲಿ ಅಪರಿಚಿತ ಮಹಿಳೆಯ ಪತ್ತೆ ಶಿರಾಢಿಘಾಟ್ ನಲ್ಲಿ ಅಪರಿಚಿತ ಮಹಿಳೆಯ ಪತ್ತೆ ಆಗಿದೆ. ಕೊಲೆಮಾಡಿ ಮೃತದೇಹವನ್ನು ಶಿರಾಡಿಘಾಟ್ ನಲ್ಲಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು 30 ವರ್ಷ ಪ್ರಾಯದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ. ಮಹಿಳೆಯ ಕೈ ಮೇಲೆ ಮೂರ್ತಿ ಎಂಬ ಹಚ್ಚೆ ಗುರುತು ಕಂಡುಬಂದಿದೆ. ಕೈ ಮೇಲಿನ ಹಚ್ಚೆ ಆಧರಿಸಿ ಮಹಿಳೆಯ ಗುರತು ಪತ್ತೆಗೆ ಪೊಲೀಸರು ಯತ್ನಿಸಿದ್ದಾರೆ. ಹಾಸನ ಬೆಂಗಳೂರು ರಸ್ತೆಯ ಮಾರನಹಳ್ಳಿ ಸಮೀಪದ ಶಿರಾಢಿಘಾಟ್ನಲ್ಲಿ ಶವ ಪತ್ತೆ ಆಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡಾಬಾ ಮೇಲೆ ಅಪರಿಚಿತರ ದಾಳಿ ಪ್ರಕರಣ: ಗಂಭೀರ ಗಾಯಗೊಂಡಿದ್ದ ಮನೋಜ್ ಸಾವ ದೊಡ್ಡಬ್ಯಾಲಕೆರೆಯ ಡಾಬಾ ಮೇಲೆ ಅಪರಿಚಿತರ ದಾಳಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್(29) ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸನದ ಮನೋಜ್ ಸಾವನ್ನಪ್ಪಿದ್ದಾರೆ. ಡಿಸೆಂಬರ್ 24 ರಂದು ಡಾಬಾ ಮೇಲೆ ಅಪರಿಚಿತರು ದಾಳಿ ನಡೆಸಿದ್ದರು. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯಲ್ಲಿನ ಡಾಬಾದಲ್ಲಿ ಘಟನೆ ನಡೆದಿತ್ತು. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ರಾಮನಗರ: ಮಾರಕಾಸ್ತ್ರಗಳಿಂದ ಹೊಡೆದು ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಕೊಲೆ ಮಾರಕಾಸ್ತ್ರಗಳಿಂದ ಹೊಡೆದು ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಕೊಲೆ ಮಾಡಿದ ದುರ್ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಪರಂಗಿಚಿಕ್ಕನಪಾಳ್ಯ ಗ್ರಾಮದಲ್ಲಿ ನಡೆದಿದೆ. ಶಿವಣ್ಣ(45) ಎಂಬವರು ಕೊಲೆಯಾಗಿದ್ದಾರೆ. ರಾಜೇಶ್ ಹಾಗೂ ಹೇಮಂತ್ ಎಂಬುವರಿಂದ ಕೊಲೆ ಆರೋಪ ಕೇಳಿಬಂದಿದೆ. ತಡರಾತ್ರಿ ಮನೆಯಲ್ಲಿ ಮಲಗಿದ್ದ ಶಿವಣ್ಣ. ಈ ವೇಳೆ, ಮನೆಯ ಹೆಂಚುಗಳನ್ನ ತೆಗೆದು ಒಳನುಗ್ಗಿ ಶಿವಣ್ಣ ಕೊಲೆ ಮಾಡಲಾಗಿದೆ. ಮದ್ಯಪಾನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ನಂತರ ಆರೋಪಿಗಳು ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ. ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹಣದ ವಿಚಾರಕ್ಕೆ ಗಲಾಟೆ; ಮಹಿಳೆ ಕೊಲೆ ಮಾಡಿ ನಾಲೆಗೆ ಎಸೆದಿದ್ದ ಆರೋಪಿ ವಶಕ್ಕೆ, ಮಹಿಳೆ ಶವ ಹುಡುಕುವಾಗ ಸಿಕ್ತು ವೃದ್ಧನ ಶವ
ಇದನ್ನೂ ಓದಿ: ಆನೇಕಲ್ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಕೊಲೆ!