ಲಸಿಕೆ ಸುರಕ್ಷೆಗೆ ಅಗತ್ಯ ಕ್ರಮವಹಿಸಲು ಖಾಸಗಿ ಆಸ್ಪತ್ರೆಗಳಿಗೆ ಕರ್ನಾಟಕ ಸರ್ಕಾರ ಸೂಚನೆ

ಲಸಿಕೆ ಸುರಕ್ಷೆಗೆ ಅಗತ್ಯ ಕ್ರಮವಹಿಸಲು ಖಾಸಗಿ ಆಸ್ಪತ್ರೆಗಳಿಗೆ ಕರ್ನಾಟಕ ಸರ್ಕಾರ ಸೂಚನೆ
ಕೊವಿಡ್​ 19 ಲಸಿಕೆ (ಪ್ರಾತಿನಿಧಿಕ ಚಿತ್ರ)

ಲಸಿಕೆಯ ಸೀಸೆಯು ನಿಗಾವಣೆ ಇರದಿದ್ದರೆ ಗುಣಮಟ್ಟದ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ರಾಜ್ಯ ಸರ್ಕಾರವು ಸುತ್ತೋಲೆಯಲ್ಲಿ ಸೂಚಿಸಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 28, 2021 | 6:38 PM


ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ತೆರೆದ ವೈಯಲ್ ಬಳಸುವುದರಿಂದ ಲಸಿಕೆಗಳ ಪರಿಣಾಮ ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಒಮ್ಮೆ ತೆರೆದ ಲಸಿಕೆಯ ವಯಲ್​ (ಬಾಟಲಿ) ಮರುಬಳಕೆ ಮಾಡಬಾರದು. ಬಾಟಲಿ ತೆರೆದ 4 ಗಂಟೆಯೊಳಗೆ ಬಳಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳಲ್ಲಿ ಹೊರಡಿಸಿದೆ. ಒಮ್ಮೆ ತೆರೆದ ಬಾಟಲಿಯನ್ನು 4 ಗಂಟೆ ಬಳಿಕ ಬಳಸದಂತೆ ನಿರ್ದೇಶನ ನೀಡಲಾಗಿದೆ. ತೆರೆದ ಲಸಿಕಾ ಬಾಟಲಿಗಳನ್ನು ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಒಮ್ಮೆ ತೆರೆದ ಲಸಿಕೆಯ ವಯಲ್​ಗಳನ್ನು ಮತ್ತೆ ಬಳಸಬಾರದು ಲಸಿಕೆಯ ಬಾಟಲಿ ತೆರೆದಿದ್ದರೆ ಅದರ ಗುಣಮಟ್ಟ ಖಚಿತಪಡಿಸಿಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಈ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಕೋವಾಕ್ಸಿನ್ ಲಸಿಕೆಗೆ ಓಪನ್-ವೈಯಲ್ ನೀತಿಯನ್ನು ಅನುಮತಿಸಲು ಆಗುವುದಿಲ್ಲ ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡಿತ್ತು. ಅದರಂತೆ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ನಿರ್ಬಂಧ ವಿಧಿಸಲಾಗಿದೆ.

ಈ ಹಿಂದೆ ಕೋವಾಕ್ಸಿನ್ ತಯಾರಕ ಭಾರತ್ ಬಯೋಟೆಕ್ ಒಪನ್ ಬಾಟಲ್ ಸ್ಥಿರತೆ ಹಾಗು ಬಳಕೆ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತ್ತು. ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಒಮ್ಮೆ ತೆರೆದ ಕೋವಾಕ್ಸಿನ್ ಬಾಟಲಿಗಳನ್ನು 2ರಿಂದ 8 ಡಿಗ್ರಿ ಉಷ್ಣಾಂಶದಲ್ಲಿ ಸಂಗ್ರಹಿಸಿದರೆ 28 ದಿನಗಳವರೆಗೆ ಬಳಸಬಹುದು ಎಂಬ ಮಾಹಿತಿ ಇತ್ತು. ಒಂದು ವೇಳೆ ಬಾಟಲಿಯಲ್ಲಿ ಲಸಿಕೆಯು ಉಳಿದರೆ ತಕ್ಷಣ ಅಥವಾ ಪ್ರತಿರಕ್ಷಣೆ ಅವಧಿಯ ಕೊನೆಯಲ್ಲಿ ತಿರಸ್ಕರಿಸಬೇಕಾಗಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿತ್ತು.

ಭಾರತ್ ಬಯೊಟೆಕ್ ನೀಡಿದ್ದ ಮಾರ್ಗದರ್ಶಿ ಸೂತ್ರದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಆರೋಗ್ಯ ಇಲಾಖೆಗೆ ಸ್ಪಷ್ಟನೆ ಕೇಳಿತ್ತು. ಲಸಿಕೆಯ ಸೀಸೆಯು ನಿಗಾವಣೆ ಇರದಿದ್ದರೆ ಗುಣಮಟ್ಟದ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ರಾಜ್ಯ ಸರ್ಕಾರವು ಸುತ್ತೋಲೆಯಲ್ಲಿ ಸೂಚಿಸಿದೆ.

ಇದನ್ನೂ ಓದಿ: 60 ವರ್ಷ ಮೇಲ್ಪಟ್ಟು, ಇನ್ನಿತರ ಕಾಯಿಲೆಗಳಿರುವವರು ಲಸಿಕೆ 3ನೇ ಡೋಸ್ ಪಡೆಯಲು ಮೆಡಿಕಲ್​ ಸರ್ಟಿಫಿಕೇಟ್​ ಬೇಕಾಗಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಇದನ್ನೂ ಓದಿ: Good News: ಭಾರತದಲ್ಲಿ ಕೊವಾವ್ಯಾಕ್ಸ್​, ಕಾರ್ಬೆವ್ಯಾಕ್ಸ್ ಲಸಿಕೆ, ​ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ

Follow us on

Related Stories

Most Read Stories

Click on your DTH Provider to Add TV9 Kannada