AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೇಕಲ್ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಕೊಲೆ!

ಜಿಗಣಿ ನಿವಾಸಿ ಅರ್ಚನಾರೆಡ್ಡಿಯನ್ನು ಹತ್ಯೆಗೈದಿದ್ದಾರೆ. ನವೀನ್, ಸಂತೋಷ್ ಎಂಬುವವರು ಅರ್ಚನಾರೆಡ್ಡಿಯನ್ನು ಹತ್ಯೆ ಮಾಡಿದ್ದಾರೆ. ಅನೈತಿಕ ಸಂಬಂದ ಹಿನ್ನಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಆನೇಕಲ್ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಕೊಲೆ!
ಕೊಲೆಯಾದ ಮಹಿಳೆ ಅರ್ಚನಾರೆಡ್ಡಿ
TV9 Web
| Edited By: |

Updated on:Dec 30, 2021 | 6:13 PM

Share

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಿಣಿ ಬಳಿ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಹಿಳೆಯನ್ನು ಬರ್ಬರ ಕೊಲೆ ಮಾಡಿದ್ದಾರೆ. ಜಿಗಣಿ ನಿವಾಸಿ ಅರ್ಚನಾರೆಡ್ಡಿಯನ್ನು ಹತ್ಯೆಗೈದಿದ್ದಾರೆ. ನವೀನ್, ಸಂತೋಷ್ ಎಂಬುವವರು ಅರ್ಚನಾರೆಡ್ಡಿಯನ್ನು ಹತ್ಯೆ ಮಾಡಿದ್ದಾರೆ. ಅನೈತಿಕ ಸಂಬಂದ ಹಿನ್ನಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪತಿಯೇ ತನ್ನ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ನಿನ್ನೆ ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ. ಎರಡನೇ ಪತಿ ನವೀನ್ ಕುಮಾರ್ ಹಾಗು ಆತನ ಸಹಚರರು ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಅರ್ಚನಾ ಮೊದಲನೆಯ ಪತಿಯಿಂದ ದೂರವಾದ ಬಳಿಕ ನವೀನ್ ಕುಮಾರ್ ಜೊತೆ ಬದುಕುತ್ತಿದ್ದಳು.

ಕಳೆದ ಐದಾರು ವರ್ಷಗಳಿಂದ ನವೀನ್ ಕುಮಾರ್ ಹಾಗೂ ಅರ್ಚನಾರೆಡ್ಡಿ ಜೊತೆಯಾಗಿದ್ದರು. ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಗಲಾಟೆ ನಡೆದಿರುವ ಶಂಕೆ ಮೂಡಿದೆ. ಈ ಹಿಂದೆ ಗಲಾಟೆಯಾಗಿ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪದೇ ಪದೇ ಜಗಳ ಮಾಡುತ್ತಿದ್ದ ನವೀನ್​ನಿಂದ‌ ಅರ್ಚನಾ ಅಂತರ ಕಾಯ್ದುಕೊಂಡಿದ್ದರು.

ಜಿಗಣಿ ಬಿಟ್ಟು ಅರ್ಚನಾರೆಡ್ಡಿ ಬೆಳ್ಳಂದೂರಿನಲ್ಲಿ ವಾಸವಿದ್ದರು. ಅರ್ಚನಾ ಮತದಾನಕ್ಕೆ ಬರುವುದನ್ನು ತಿಳಿದಿದ್ದ ನವೀನ್, ಮತದಾನ ಮುಗಿಸಿ ಮಗ, ಚಾಲಕ ಹಾಗೂ ಇಬ್ಬರು ಯುವಕರ ಜೊತೆ ಬೆಳ್ಳಂಡೂರು ಕಡೆ ಹೊರಟಿದ್ದ ಅರ್ಚನಾರೆಡ್ಡಿ ಹೊಸ ರೋಡ್ ಸಿಗ್ನಲ್ ಬಳಿ ಸಿಗ್ನಲ್ ಬೀಳುತ್ತಿದ್ದಂತೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ಮಗ ಹಾಗೂ ಚಾಲಕ ತಪ್ಪಿಸಿಕೊಂಡಿದ್ದಾರೆ.

ಭೀಕರವಾಗಿ ಗಾಯಗೊಂಡಿದ್ದ ಅರ್ಚನಾ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹಣದ ವಿಚಾರಕ್ಕೆ ಮಹಿಳೆಯ ಕೊಲೆ ತುಮಕೂರು: ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ವದಲೂರು ಗ್ರಾಮದಲ್ಲಿ ನಡೆದಿದೆ. ಕಲಾವತಿ (40) ಕೊಲೆಯಾದ ಮಹಿಳೆ. ಹೆಗ್ಗೆರೆ ಗ್ರಾಮದ ಗಜೇಂದ್ರ ಮಹಿಳೆಯನ್ನು ಕೊಲೆ ಮಾಡಿ ನಂತರ ಹೇಮಾವತಿ ನಾಲೆಗೆ ಎಸೆದಿದ್ದ. ಕಲಾವತಿ ತುಮಕೂರಿನ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಗಾರ್ಮೆಂಟ್ಸ್​ನಲ್ಲಿ ಗಜೇಂದ್ರನ ಪರಿಚಯವಾಗಿತ್ತು. ಗಜೇಂದ್ರನಿಗೆ ಹಣ ನೀಡಿದ್ದರು. ಹಣ ವಾಪಸ್ ಕೇಳಿದಾಗ ಕಲಾವತಿಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

16ನೇ ತಾರೀಕು ಮಹಿಳೆ ನಾಪತ್ತೆಯಾಗಿದ್ದಾರೆ ಅಂತ ದೂರು ದಾಖಲಾಗಿತ್ತು. ಸಂಬಂಧಿಕರು ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತುಮಕೂರು ಗ್ರಾಮಾಂತರದ ದೊಡ್ಡಸಾರಂಗಿ ಬಳಿ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಕೊಲೆ ಆರೋಪಿ ಗುಬ್ಬಿ ಪೊಲೀಸರ ವಶದಲ್ಲಿದ್ದಾನೆ.

ಇದನ್ನೂ ಓದಿ

ಆರ್ಡರ್​ ಮಾಡಿದ್ದು 1 ಲಕ್ಷ ರೂ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್​

ಪ್ರಧಾನಿ ಮೋದಿ ಕಾರು ಬದಲಾವಣೆ; ಈಗ ಬಳಸುತ್ತಿರುವ ಶಸ್ತ್ರಸಜ್ಜಿತ ಮರ್ಸಿಡಸ್​ ಮೇಬ್ಯಾಕ್​​ S650 ಬೆಲೆ 12 ಕೋಟಿ ರೂ., ಉಳಿದ ವಿಶೇಷತೆ ಮಾಹತಿ ಇಲ್ಲಿದೆ

Published On - 10:23 am, Tue, 28 December 21

ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ರಸ್ತೆ ಗುಂಡಿ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡ ಯವಕ
ರಸ್ತೆ ಗುಂಡಿ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡ ಯವಕ
ಇಡೀ ರಾತ್ರಿ ಕೋಲಾರ ತಾಲೂಕು ಕಚೇರಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!
ಇಡೀ ರಾತ್ರಿ ಕೋಲಾರ ತಾಲೂಕು ಕಚೇರಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!