Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: 21 ವರ್ಷದ ಮಗಳ ಮುಂದೆಯೇ ಮಹಿಳೆಯ ಹತ್ಯೆ ಪ್ರಕರಣ: 3ನೇ ಪತಿ ಸೇರಿ ಇಬ್ಬರ ಬಂಧನ

ಮೂವರು ಮಚ್ಚಿನೇಟಿಗೆ ಬಲಿಯಾಗಿದ್ದ ಮಹಿಳೆ ಅರ್ಚನಾ ರೆಡ್ಡಿ(38) ಸಾವಿನ ಹಿಂದೆ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಚನಾ ರೆಡ್ಡಿ ಅವರ ಮೂರನೇ ಪತಿ ನವೀನ್, ಸೇರಿ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

Crime News: 21 ವರ್ಷದ ಮಗಳ ಮುಂದೆಯೇ ಮಹಿಳೆಯ ಹತ್ಯೆ ಪ್ರಕರಣ: 3ನೇ ಪತಿ ಸೇರಿ ಇಬ್ಬರ ಬಂಧನ
ಅರ್ಚಾನಾ ರೆಡ್ಡಿ
Follow us
TV9 Web
| Updated By: preethi shettigar

Updated on:Dec 29, 2021 | 10:09 AM

ಬೆಂಗಳೂರು: ಮೂವರು ಮಚ್ಚಿನಿಂದ ಹೊಡೆದು ಮಹಿಳೆಯನ್ನು ಬರ್ಬರವಾಗಿ ಕೊಲೆ (Murder) ಮಾಡಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿತ್ತು. ಮೂವರ ಮಚ್ಚಿನೇಟಿಗೆ ಬಲಿಯಾಗಿದ್ದ ಮಹಿಳೆ ಅರ್ಚನಾ ರೆಡ್ಡಿ(38) ಸಾವಿನ ಹಿಂದೆ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಚನಾ ರೆಡ್ಡಿ ಅವರ ಮೂರನೇ ಪತಿ ನವೀನ್, ಸೇರಿ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಸಂತೋಷ್​ ಹಾಗೂ ಅನೂಪ್​ ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಕೊಲೆ ಹಿಂದಿನ ರಹಸ್ಯ ಬಯಲು ಹೊಸರೋಡ್ ಸಿಗ್ನಲ್ ಬಳಿ ಅರ್ಚನಾ ರೆಡ್ಡಿಯನ್ನು ಹತ್ಯೆ ಮಾಡಲಾಗಿತ್ತು. ಆಸ್ತಿ ವಿವಾದ ಹಿನ್ನೆಲೆ ಪತ್ನಿಯನ್ನು ಕೊಚ್ಚಿ ಪತಿ ಕೊಲೆ ಮಾಡಿದ್ದಾನೆ ಎಂಬ ಅನುಮಾನ ಸೃಷ್ಟಿಯಾಗಿದೆ. ಹಲವು ವರ್ಷಗಳ ಹಿಂದೆ ಅರವಿಂದ್ ಎಂಬಾತನನ್ನು ಅರ್ಚನಾ ಮದುವೆಯಾಗಿದ್ದರು. ಅರವಿಂದ್ ಜೊತೆ ಇದ್ದಾಗ ಒರ್ವ ಮಗ ಮತ್ತು ಒರ್ವ ಮಗಳು ಜನಿಸಿದ್ದಾರೆ. ನಂತರ ಕಾರಣಾಂತರಗಳಿಂದ ಅರವಿಂದ್​ನಿಂದ ಅರ್ಚನಾ ಬೇರೆ ಅಗಿದ್ದರು. ಬಳಿಕ ಸಿದ್ದಿಕ್ ಎಂಬಾತನ ಜೊತೆಗಿದ್ದ ಅರ್ಚನಾ, ಎರಡು ವರ್ಷಗಳ ಬಳಿಕ ದೂರವಾಗಿದ್ದರು. ನಂತರ ಕಳೆದ ಐದಾರು ವರ್ಷಗಳಿಂದ ನವೀನ್ ಜೊತೆಗೆ ಸಂಪರ್ಕ ಹೊಂದಿದ್ದರು. ನಂತರ ನವೀನ್ ಜೊತೆಗೆ ಅರ್ಚನಾ ಮದುವೆ ಮಾಡಿಕೊಂಡಿದ್ದರು. ಅರ್ಚನಾ ಹೆಸರಲ್ಲಿ ಸ್ವಂತ ಮನೆ ಆಸ್ತಿ ಜಮೀನು ಇತ್ತು. ಇನ್ನು ಹಣಕಾಸಿಗೆ ನವೀನ್ ಹಣಕಾಸಿಗೆ ಅರ್ಚನಾ ಮೇಲೆ ಅವಲಂಬಿಸಿದ್ದ.

ಅರ್ಚಾನಾ ರೆಡ್ಡಿ ಕೊಲೆಗೆ ಇದುವರೆಗೆ ಮೂರು ಕಾರಣ ಪತ್ತೆ

ಕಾರಣ ಒಂದು  ಅರ್ಚನಾಗೆ ಸರಿದ್ದ ಜಮೀನು ವಿವಾದ ಒಂದು ಇದ್ದು, ಈ ವಿಚಾರವನ್ನು ತಾನು ಬಗೆಹರಿಸುತ್ತೆನೆ ತನಗೆ ಷೇರು ನೀಡುವಂತೆ ನವೀನ್​ ಕೇಳಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅರ್ಚನಾಳನ್ನು ಕೊಲೆ ಮಾಡಲಾಗಿದೆ.

ಕಾರಣ ಎರಡು ಅರ್ಚಾನ ರೆಡ್ಡಿಗೆ ಬೇರೆ ಯುವಕರೊಂದಿಗೆ ಸಂಬಂಧ ಇತ್ತು ಎಂದು ನವೀನ್ ಗಲಾಟೆ ಮಾಡಿದ್ದ ಇದೇ ಕಾರಣಕ್ಕೆ ನವೀನ್ ವಿರುದ್ಧ 498A ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಅರ್ಚನಾ ನೀಡಿದ್ದ ದೂರಿನ ಅನ್ವಯ ಕೇಸ್ ದಾಖಲಾಗದ್ದು, ಇದರಿಂದ ಕೋಪಗೊಂಡು ಕೊಲೆ ಮಾಡಿದ್ದಾನೆ.

ಕಾರಣ ಮೂರು ಅರ್ಚನಾ ಮಗಳ ಮೇಲೆ ನವೀನ್ ಕಣ್ಣುಹಾಕಿದ್ದ. ಅರ್ಚನಾಗೆ 21 ವರ್ಷದ ಮಗಳಿದ್ದಾಳೆ. ಆ ಮಗಳ ಮೇಲೆ ನವೀನ್ ಕಣ್ಣುಹಾಕಿದ್ದ. ಈ ವಿಚಾರ ತಿಳಿದು ನವೀನ್​ನನ್ನು ಸಂಪೂರ್ಣವಾಗಿ ಅರ್ಚನಾ ದೂರ ಮಾಡಿದ್ದಳು.  ಹೀಗಾಗಿ ಕೋಪಗೊಂಡು ಸಹಚರರ ಸಹಿತ ಅಗಿಮಿಸಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಹಣದ ವಿಚಾರಕ್ಕೆ ಗಲಾಟೆ; ಮಹಿಳೆ ಕೊಲೆ ಮಾಡಿ ನಾಲೆಗೆ ಎಸೆದಿದ್ದ ಆರೋಪಿ ವಶಕ್ಕೆ, ಮಹಿಳೆ ಶವ ಹುಡುಕುವಾಗ ಸಿಕ್ತು ವೃದ್ಧನ ಶವ

ಅಕ್ಕನ ಮಗಳ ಮದುವೆಗೆ ಬಂದಿದ್ದ ಯೋಧನ ಕೊಲೆ, ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿಯಾಗಿ ಇಬ್ಬರ ಸಾವು

Published On - 9:17 am, Wed, 29 December 21

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು