ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಪ್ರಯಾಣ ಸ್ಥಗಿತ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸದ್ಯಕ್ಕೆ ಅವರ ಪ್ರಯಾಣ ಸ್ಥಗಿತಗಂಡಿದೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸದ್ಯಕ್ಕೆ ಅವರ ಪ್ರಯಾಣ ಸ್ಥಗಿತಗಂಡಿದೆ. ವಿಮಾನದ ಬ್ಯಾಟರಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಪ್ರಯಾಣ ವಿಳಂಬವಾಗಿದೆ. ಸಿಎಂ ಬೊಮ್ಮಾಯಿ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ. ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಿಗದಿಯಾಗಿದ್ದು, ಅದರಲ್ಲಿ ಪಾಲ್ಗೊಳ್ಳಲು ಸಿಎಂ ಬೊಮ್ಮಾಯಿ ಹುಬ್ಬಳ್ಳಿಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು. ಕಂದಾಯ ಸಚಿವ ಆರ್ ಅಶೋಕ್ ಸಿಎಂ ಬೊಮ್ಮಾಯಿ ಜೊತೆಯಲ್ಲಿದ್ದರು.
ಬೆಳಗ್ಗೆ 8.45ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನಕ್ಕೆ ಸದ್ಯಕ್ಕೆ ಟೇಕ್ ಆಫ್ ಕ್ಲಿಯರನ್ಸ್ ಸಿಕ್ಕಿಲ್ಲ. ಬೆಳಿಗ್ಗೆ 9.45ಕ್ಕೆ ಹುಬ್ಬಳ್ಳಿಗೆ ಆಗಮಿಸಬೇಕಿತ್ತು.ಆದ್ರೆ ತಾಂತ್ರಿಕ ದೋಷದಿಂದಾಗಿ ವಿಮಾನ ಪ್ರಯಾಣ ಇನ್ನೂ ಎರಡು ಗಂಟೆ ತಡವಾಗುವ ಸಾಧ್ಯತೆಯಿದೆ.
ಎರಡು ವಾರಗಳ ಹಿಂದೆ ಹುಬ್ಬಳ್ಳಿಯಲ್ಲಿ ದಟ್ಟ ಮೋಡಗಳ ಕಾರಣ, ಸಿ ಎಂ ಬೊಮ್ಮಾಯಿ ಸೇರಿದಂತೆ ಕೇಂದ್ರ ಸಚಿವರು ಇದ್ದ ವಿಮಾನ ಅರ್ಧ ಗಂಟೆ ಕಾಲ ಆಗಸದಲ್ಲಿಯೇ ರೌಂಡ್ಸ್ ಹೊಡೆದಿತ್ತು. ಹುಬ್ಬಳ್ಳಿಯಲ್ಲಿ ದಟ್ಟ ಮಂಜು: ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ, ಸಿಎಂ ಬೊಮ್ಮಾಯಿ ಹೇಳಿದ್ದೇನು?
ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ, ಸಿಎಂ ಬೊಮ್ಮಾಯಿ ಹೇಳಿದ್ದೇನು?
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆ ಡಿಸೆಂಬರ್ 10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇರುವ ವಿಮಾನ ಲ್ಯಾಂಡಿಂಗ್‌ಗೆ ಸಮಸ್ಯೆಯಾಗಿತ್ತು. ಸಿಎಂ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅರ್ಧ ಗಂಟೆ ಆದ್ರೂ ಲ್ಯಾಂಡಿಂಗ್‌ಗೆ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ಸಿ ಎಂ ಬೊಮ್ಮಾಯಿ, ಕೇಂದ್ರ ಸಚಿವರು ಇರುವ ಇಂಡಿಗೋ ವಿಮಾನ ಆಕಾಶದಲ್ಲೇ 3 ಸುತ್ತು ಸುತ್ತು ಹಾಕಿದ್ದರು. ಇದರಿಂದ ಮೇಲೆಯೇ ಹಾರಾಟ ನಡೆಸಿದರೆ ಇಂಧನ ಖಾಲಿಯಾಗುವ ಆತಂಕ ಎದುರಾಗಿ, ಇಂಡಿಗೋ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ವಿಮಾನ ಮಂಗಳೂರಿನತ್ತ ತೆರಳಿಲ್ಲ.ಆದರೆ ಕೊನೆಗೂ ಅರ್ಧ ಘಂಟೆಯ ಬಳಿಕ ವಿಮಾನ ಲ್ಯಾಂಡ್ ಆಗಿತ್ತು. ದಟ್ಟ ಮಂಜು ಒಂದಷ್ಟು ಕರಗಿದ ಬಳಿಕ ಕ್ಲಿಯರೆನ್ಸ್ ಸಿಕ್ಕಿತ್ತು.
ಇದನ್ನೂ ಓದಿ: BJP Meeting in Hubballi: 12 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ, ಇಡೀ ನಗರ ಕೇಸರಿಮಯ
Published On - 10:20 am, Tue, 28 December 21