ಬೆಂಗಳೂರು: ಮಾಜಿ ಪ್ರೇಯಸಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾದ ಯುವಕ

|

Updated on: Oct 13, 2023 | 9:38 AM

ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಮಾಜಿ ಪ್ರೇಯಸಿ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು: ಮಾಜಿ ಪ್ರೇಯಸಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾದ ಯುವಕ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅ.13: 26 ವರ್ಷದ ಮಾಜಿ ಪ್ರೇಯಸಿಯ ಮೇಲೆ 30 ವರ್ಷದ ಯುವಕನೊಬ್ಬ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ (Sexually Harassment) ಎಸಗಿ ಪರಾರಿಯಾದ ಘಟನೆ ಬೆಂಗಳೂರಿನ (Bengaluru) ಪೂರ್ವ ವಲಯದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಫ್ಟ್​ವೇರ್ ಎಂಜಿನಿಯರ್ ಆಗಿರುವ ದೊಡ್ಡಕನ್ನೆಲ್ಲಿಯ ಅಪಾರ್ಟ್ಮೆಂಟ್ ನಿವಾಸಿ ಸಾರಾ (ಹೆಸರು ಬದಲಾಯಿಸಲಾಗಿದೆ) 2021 ರ ಜನವರಿಯಿಂದ ಆರೋಪಿ ಸಾಗರ್ (ಹೆಸರು ಬದಲಾಯಿಸಲಾಗಿದೆ) ಎಂಬಾತನನ್ನು ಪ್ರೀತಿಸುತ್ತಿದ್ದಳು.

ಆದರೆ ಕೆಲವೇ ದಿನಗಳಲ್ಲಿ, ಅವನು ಅವಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದನು. ನೋವನ್ನು ಸಹಿಸಲಾಗದೆ ಸಾರಾ 2022ರ ಡಿಸೆಂಬರ್ ತಿಂಗಳಲ್ಲಿ ಬ್ರೇಕಪ್​ ಮಾಡಿಕೊಂಡಿದ್ದಳು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ಚಲಿಸುತ್ತಿದ್ದ ರೈಲಿನೆದುರು ಬಾಲಕಿಯನ್ನು ಎಸೆದ ಯುವಕ, ಕೈ-ಕಾಲುಗಳು ಕಟ್

ಆದಾಗ್ಯೂ, ಸಾಗರ್ ಪ್ರತಿದಿನ ತನಗೆ ಕರೆ ಮಾಡುವುದು, ಮೆಸೇಜ್ ಕಳುಹಿಸುವುದನ್ನು ಮುಂದುವರಿಸಿದ್ದಾನೆ ಮತ್ತು ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಅಕ್ಟೋಬರ್ 8 ರಂದು ಸಂಜೆ 4 ಗಂಟೆ ಸುಮಾರಿಗೆ ಸಾಗರ್ ಆಕೆಯ ಮನೆಗೆ ಹೋಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

ಮನೆಗೆ ಬಂದಿದ್ದ ಸಾಗರ್, ಸಾರಾಳನ್ನು ಹಾಸಿಗೆಯ ಮೇಲೆ ತಳ್ಳಿ, ಬಾಯಿ ಮುಚ್ಚಿ, ಕಟ್ಟಿಹಾಕಿ ನಿಂದಿಸಲು ಪ್ರಯತ್ನಿಸಿದನು ಎಂದು ಸಾರಾ ಪೊಲೀಸರಿಗೆ ತಿಳಿಸಿದ್ದಾಳೆ. ಅಷ್ಟೇ ಅಲ್ಲದೆ, ಮನೆಯಿಂದ ಹೊರಡುವಂತೆ ಹೇಳಿದಾಗ ಆತ ಮನೆಯೊಳಗಿಂದ ಹೊರಕ್ಕೆ ಹೋಗಿ ಸಂಜೆ 6.40 ರವರೆಗೆ ಮನೆ ಹೊರಗೆ ನಿಂತು, ಬಾಗಿಲು ತಟ್ಟುತ್ತಾ ಫೋನ್ ಕರೆಗಳನ್ನು ಮಾಡುತ್ತಿದ್ದನು. ಬಾಗಿಲು ತೆರೆಯುವಂತೆ ಒತ್ತಾಯಿಸಿದನು.

ಸಾರಾ ಅವನ ಕರೆಗಳನ್ನು ತೆಗೆದುಕೊಳ್ಳಲು ಮತ್ತು ಅವನೊಂದಿಗೆ ಮಾತನಾಡಲು ಒಪ್ಪಿಕೊಂಡ ನಂತರವೇ ಮನೆಯಿಂದ ಹೊರಟು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸಾಗರ್​ ಬಂಧನಕ್ಕಾಗಿ ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ