ಅ.30 ರಿಂದ ಬೆಂಗಳೂರಿನಿಂದ ಮಾಲ್ಡೀವ್ಸ್‌ನ ಮಾಲೆಗೆ ನೇರ ವಿಮಾನ
ಹಿಂದೂ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಾಲೆಗೆ ನೇರ ವಿಮಾನ ಸೇವೆ ಅಕ್ಟೋಬರ್ 30 ರಿಂದ ಆರಂಭವಾಗಲಿದೆ. ಬೆಂಗಳೂರಿಗೆ ಮೊದಲ ಮಾಲ್ಡೀವ್ಸ್ ವಿಮಾನ ಬೆಳಿಗ್ಗೆ 9.35 ಕ್ಕೆ ಮಾಲೆಯ ವೇಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಅದೇ ದಿನ ಮಧ್ಯಾಹ್ನ 12.15 ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ ನಿರೀಕ್ಷೆಯಿದೆ.
ಬೆಂಗಳೂರು, ಅ.13: ಹಿಂದೂ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌ನ (Maldives) ರಾಜಧಾನಿ ಮಾಲೆಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಬೆಂಗಳೂರಿನಿಂದ (Bengaluru) ಮಾಲೆಗೆ ನೇರ ವಿಮಾನ ಸೇವೆ ಅಕ್ಟೋಬರ್ 30 ರಿಂದ ಆರಂಭವಾಗಲಿದೆ. ಪ್ರತಿ ಸೋಮವಾರ ಮತ್ತು ಗುರುವಾರದಂದು ವಿಮಾನ ಸೇವೆ ಇರಲಿದೆ.
ಬೆಂಗಳೂರಿಗೆ ಮೊದಲ ಮಾಲ್ಡೀವ್ಸ್ ವಿಮಾನ ಸೋಮವಾರ (ಅಕ್ಟೋಬರ್ 30) ಬೆಳಿಗ್ಗೆ 9.35 ಕ್ಕೆ ಮಾಲೆಯ ವೇಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಅದೇ ದಿನ ಮಧ್ಯಾಹ್ನ 12.15 ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನಿಂದ ಮೊದಲ ವಿಮಾನ ಅದೇ ದಿನ ಮಧ್ಯಾಹ್ನ 1.15 ಕ್ಕೆ ಹೊರಟು ಮಧ್ಯಾಹ್ನ 2.50ರ ಸುಮಾರಿಗೆ ಮಾಲೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಅ.19 ರಿಂದ ಮಂಗಳೂರಿನಿಂದ ಹೈದರಾಬಾದ್ಗೆ ಹೊಸ ಇಂಡಿಗೋ ವಿಮಾನ ಹಾರಾಟ
ಏರ್ಬಸ್ ಎ 320 ವಿಮಾನವು 138 ಸೀಟುಗಳು (ಎಕಾನಮಿ) ಮತ್ತು 14 ಸೀಟುಗಳೊಂದಿಗೆ (ಪ್ರೀಮಿಯಂ ಎಕಾನಮಿ ಕ್ಲಾಸ್) ಕಾರ್ಯನಿರ್ವಹಿಸಲಿದೆ. ಮಾಲ್ಡೀವ್ಸ್ ವಿಮಾನದ ಬುಕಿಂಗ್ ಅಧಿಕೃತ ವೆಬ್ಸೈಟ್ ಮತ್ತು ಇತರ ಬುಕಿಂಗ್ ಪಾಲುದಾರರ ಮೂಲಕ ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ