ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ಚಲಿಸುತ್ತಿದ್ದ ರೈಲಿನೆದುರು ಬಾಲಕಿಯನ್ನು ಎಸೆದ ಯುವಕ, ಕೈ-ಕಾಲುಗಳು ಕಟ್
ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದಕ್ಕಾಗಿ ಯುವಕನೊಬ್ಬ 17 ವರ್ಷದ ಬಾಲಕಿಯನ್ನು ಚಲಿಸುತ್ತಿದ್ದ ರೈಲಿನ ಎದುರು ಎಸೆದಿದ್ದಾನೆ ಪರಿಣಾಮ ಆಕೆಯ ಕೈ ಕಾಲುಗಳು ಕತ್ತರಿಸಿ ಹೋಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಮಂಗಳವಾರ ಬರೇಲಿ ನಗರದ ಸಿಬಿ ಗಂಜ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಬಾಲಕಿಗೆ ಮೂಳೆಗಳು ಮುರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ನಿರ್ಲಕ್ಷ್ಯಕ್ಕಾಗಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದಕ್ಕಾಗಿ ಯುವಕನೊಬ್ಬ 17 ವರ್ಷದ ಬಾಲಕಿಯನ್ನು ಚಲಿಸುತ್ತಿದ್ದ ರೈಲಿನ ಎದುರು ಎಸೆದಿದ್ದಾನೆ ಪರಿಣಾಮ ಆಕೆಯ ಕೈ ಕಾಲುಗಳು ಕತ್ತರಿಸಿ ಹೋಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಬರೇಲಿ ನಗರದ ಸಿಬಿ ಗಂಜ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಬಾಲಕಿಗೆ ಮೂಳೆಗಳು ಮುರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ನಿರ್ಲಕ್ಷ್ಯಕ್ಕಾಗಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಬಾಲಕಿಯ ತಂದೆಯ ಪ್ರಕಾರ, ಮಂಗಳವಾರ ಸಂಜೆ 4.30 ರ ಸುಮಾರಿಗೆ ತನ್ನ ಮಗಳು ತನ್ನ ಕೋಚಿಂಗ್ ಸೆಂಟರ್‌ನಿಂದ ಹಿಂತಿರುಗುತ್ತಿದ್ದಾಗ, ಅವರ ಗ್ರಾಮದ ವಿಜಯ್ ಮೌರ್ಯ ಎಂಬಾತ ಅವಳನ್ನು ತಡೆದು ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಿದ್ದಾನೆ. ಮೌರ್ಯ ತನ್ನ ಮಗಳನ್ನು ಹಿಂಬಾಲಿಸುತ್ತಿರುವುದನ್ನು ಮತ್ತೊಬ್ಬ ಯುವಕ ನೋಡಿದ್ದಾನೆ ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಜಯ್ ಮೌರ್ಯ ಮತ್ತು ಅವರ ತಂದೆ ಕೃಷ್ಣ ಪಾಲ್ ಅವರನ್ನು ಬಂಧಿಸಲಾಗಿದೆ ಎಂದು ಸಿಬಿ ಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಧೇಶ್ಯಾಮ್ ಹೇಳಿದ್ದಾರೆ. ಬಾಲಕಿ ತಪ್ಪಿಸಿಕೊಳ್ಳಲು ಖಾದೌ ಕಡೆಗೆ ಓಡಿದ್ದಾಳೆ ಮೌರ್ಯ ಆಕೆಯನ್ನು ಹಿಂಬಾಲಿಸಿ ರೈಲಿನೆದುರು ತಳ್ಳಿದ್ದಾನೆ ಆಗ ಆತನ ಕಾಲುಗಳು ಮತ್ತು ಒಂದು ಕೈ ತುಂಡಾಯಿತು.
ಮತ್ತಷ್ಟು ಓದಿ: ಹೊಲದಲ್ಲಿ ಪತ್ತೆಯಾಯ್ತು ಮಹಿಳೆ ಶವ; ಅನೈತಿಕ ಸಂಬಂಧ ಹೊಂದಿದ್ದವನೇ ಮಾಡಿದನಾ ಕೊಲೆ?
ಖಾದೌ ರೈಲ್ವೇ ಕ್ರಾಸಿಂಗ್ ಬಳಿ ರಕ್ತಸಿಕ್ತವಾಗಿ ಕೈಕಾಲುಗಳಿಲ್ಲದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕಿರುಕುಳದ ವಿಷಯವನ್ನು ಮೌರ್ಯ ಅವರ ಕುಟುಂಬಕ್ಕೆ ತಿಳಿಸಿದ್ದೆ ಆದರೆ ಅದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ವಿಷಯವನ್ನು ಮನಗಂಡು ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಬಾಲಕಿಯ ಎರಡೂ ಕಾಲುಗಳು ಮೊಣಕಾಲಿನ ಕೆಳಗೆ ತುಂಡಾಗಿದ್ದು, ಆಕೆಯ ಒಂದು ಕೈಯೂ ತುಂಡಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ