ಹೊಲದಲ್ಲಿ ಪತ್ತೆಯಾಯ್ತು ಮಹಿಳೆ ಶವ; ಅನೈತಿಕ ಸಂಬಂಧ ಹೊಂದಿದ್ದವನೇ ಮಾಡಿದನಾ ಕೊಲೆ?

ಅಲ್ಲಿ ಎಂದಿನಂತೆ ಜಮೀನಿಗೆ ತೆರಳಿದ ರೈತರಿಗೆ ಶಾಕ್ ಕಾದಿದ್ದು, ಮೆಕ್ಕೆಜೋಳದ ಜಮೀನಿನ ಮದ್ಯದಲ್ಲಿ ಮಹಿಳೆಯ ಶವ ಪತ್ತೆ ಆಗಿತ್ತು. ಇದೀಗ ಆ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೇ ಕೊಲೆ ಮಾಡಿದ್ದಾನೆಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. 

ಹೊಲದಲ್ಲಿ ಪತ್ತೆಯಾಯ್ತು ಮಹಿಳೆ ಶವ; ಅನೈತಿಕ ಸಂಬಂಧ ಹೊಂದಿದ್ದವನೇ ಮಾಡಿದನಾ ಕೊಲೆ?
ಮೃತ ಮಹಿಳೆ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 11, 2023 | 7:50 PM

ಚಿತ್ರದುರ್ಗ, ಅ.11: ಮೆಕ್ಕೆಜೋಳದ ಜಮೀನಿನ ಮದ್ಯ ಭಾಗದಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಭೀಕರ ಕೊಲೆ ಕಂಡು ಸಂಬಂಧಿಕರು, ಗ್ರಾಮಸ್ಥರು ಶಾಕ್​ಗೆ ಒಳಗಾಗಿದ್ದಾರೆ. ಇನ್ನು ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೌದು, ಚಿತ್ರದುರ್ಗ(Chitradurga) ತಾಲೂಕಿನ ಮಹಾದೇವನಕಟ್ಟೆ ಗ್ರಾಮದ ಹೊರವಲಯದಲ್ಲಿರುವ ಮೆಕ್ಕೆಜೋಳದ ಜಮೀನಿನಲ್ಲಿ ಇದೇ ಗ್ರಾಮದ ಭಾಗ್ಯಮ್ಮ(43)ಳ ಶವ ಪತ್ತೆ ಆಗಿತ್ತು. ಎರಡು ದಿನದ ಹಿಂದೆಯೇ ಕೊಲೆ ಮಾಡಿ ಬಿಸಾಡಿದ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದು, ಕೂಟಲೇ ಸ್ಥಳೀಯರು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಮಹಾದೇವನಕಟ್ಟೆಯ ಭಾಗ್ಯಮ್ಮಳ ಶವ ಎಂಬುದು ಪತ್ತೆ ಆಗಿದೆ.

ಇನ್ನು ಘಟನೆ ಕುರಿತು ಮೃತ ಭಾಗ್ಯಮ್ಮಳ ತಾಯಿ ಪಾರ್ವತಮ್ಮ ಅವರು ಮಾತನಾಡಿ ‘ಈ ಹಿಂದೆ ಭಾಗ್ಯಮ್ಮ ಓರ್ವನ ಜೊತೆ ಪ್ರೀತಿಸಿ ಓಡಿ ಹೋಗಿದ್ದಳು. ಬಳಿಕ ವಾಪಸ್ ಕರೆದುಕೊಂಡು ಬಂದು, ವರನನ್ನು ಹುಡುಕಿ ಮದುವೆ ಮಾಡಿದ್ದೆವು. ಆಕೆಗೆ ಓರ್ವ ಮಗಳು ಸಹ ಜನಿಸಿದ್ದು, ಆಕೆಯನ್ನು ಪಿಯುಸಿವರೆಗೆ ನಾನೇ ಓದಿಸಿ, ಮದುವೆ ಮಾಡಿಕೊಟ್ಟಿದ್ದೇವೆ. ಆದ್ರೆ, ಭಾಗ್ಯಮ್ಮ ಕಟ್ಟಿಕೊಂಡ ಪತಿಯ ಬಿಟ್ಟು ಬೇರೆಯವರ ಜತೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು. ನನ್ನನ್ನೂ ಏಕಾಂಗಿಯಾಗಿ ಬಿಟ್ಟು ತಾನೊಬ್ಬಳೇ ಹಿಂದಿನ ಮನೆಯಲ್ಲಿ ವಾಸವಾಗಿದ್ದಳು.

ಇದನ್ನೂ ಓದಿ:ಬೆಳಗಾವಿಯಲ್ಲಿ ಭೀಕರ ಕೊಲೆ; ಪತ್ನಿ, ಆಕೆಯ ಪ್ರಿಯಕರನ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಆರೋಪಿ ಪರಾರಿ

ಕಳೆದ ನಾಲ್ಕು ವರ್ಷದಿಂದ ಇದೇ ಗ್ರಾಮದ ಮಲ್ಲಿಕಾರ್ಜುನ(35) ಎಂಬ ಯುವಕನ ಜೊತೆ ಅಕ್ರಮ ಸಂಬಂದ ಹೊಂದಿದ್ದಳು. ಕೆಲ ದಿನಗಳಿಂದ ನಿತ್ಯ ಜಗಳ, ಪಂಚಾಯತಿ ನಡೆಯುತ್ತಿತ್ತು. ಭಾಗ್ಯಮ್ಮಳ ಬಳಿ ಜಮೀನು ಮಾರಾಟ ಮಾಡಿದ್ದ 2 ಲಕ್ಷ ರೂಪಾಯಿ ಹಣ ಇತ್ತು. ಹೀಗಾಗಿ, ಮಲ್ಲಿಕಾರ್ಜುನನೇ ನನ್ನ ಮಗಳನ್ನು ತನ್ನ ಜಮೀನಿಗೆ ಕರೆಸಿಕೊಂಡು ಹತ್ಯೆ ಮಾಡಿ ಪಕ್ಕದ ಮೆಕ್ಕೆಜೋಳದ ಜಮೀನಿಗೆ ಹಾಕಿದ್ದಾನೆ. ಭಾಗ್ಯಮ್ಮ ಮತ್ತು ಮಲ್ಲಿಕಾರ್ಜುನ ನಡುವೆ ಕೆಲ ತಿಂಗಳಿಂದ ಅನೇಕ ಸಲ ಗಲಾಟೆ ನಡೆಯುತ್ತಿತ್ತು. ತಿಳಿ ಹೇಳಲು ಹೋದರೆ ನನ್ನ ಜೊತೆಯೂ ಸಹ ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಕೇರ್ ಮಾಡಲಿಲ್ಲ. ಪೊಲೀಸರು ಗಮನಹರಿಸಿದ್ದರೆ ಮಗಳ ಜೀವ ಉಳಿಯಿತ್ತಿತ್ತು ಎಂದು ಪಾರ್ವತಮ್ಮ ಆರೋಪಿಸಿದ್ದಾರೆ.

ಇನ್ನು ಭಾಗ್ಯಮ್ಮಳ ಸಹೋದರರಿಬ್ಬರು ಭಾಗ್ಯಮ್ಮಳಿಂದ ದೂರಾಗಿ ವರ್ಷಗಳೇ ಉಳಿದಿವೆ. ಯಾರ ಮಾತು ಕೇಳದೆ ತನ್ನಿಚ್ಛೆಯಂತೆ ಬದುಕುತ್ತಿದ್ದ ಭಾಗ್ಯಮ್ಮ, ಸಂಬಂಧಿಕರಿಂದಲೂ ದೂರಾಗಿ ಒಂಟಿಯಾಗಿ ಬದುಕುತ್ತಿದ್ದಳು. ಭಾಗ್ಯಮ್ಮ ಕೊಲೆಯಾದ ವಿಚಾರ ತಿಳಿದ ಸಹೋದರರು ಸದ್ಯ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಒಟ್ಟಾರೆಯಾಗಿ ಚಿತ್ರದುರ್ಗದ ಮಹಾದೇವನಕಟ್ಟೆ ಗ್ರಾಮದಲ್ಲಿ ಮಹಿಳೆಯ ಬರ್ಬರ ಹತ್ಯೆ ನಡೆದಿದೆ. ಸದ್ಯ ಆರೋಪಿ ಮಲ್ಲಿಕಾರ್ಜುನ ನಾಪತ್ತೆ ಆಗಿದ್ದಾನೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನಾದ್ರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:48 pm, Wed, 11 October 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ