ಹನುಮಕೊಂಡದಲ್ಲಿ ಅತ್ತೆ-ಅಳಿಯನ ಜಗಳ, ಅತ್ತೆಯನ್ನು ಗುಂಡಿಕ್ಕಿ ಕೊಂದ ಕಾನ್‌ಸ್ಟೆಬಲ್ ಅಳಿಮಯ್ಯ

ತನಿಖೆಯನ್ನಾಧರಿಸಿದ ಮಾಹಿತಿ ಪ್ರಕಾರ ಇಂದು ಪ್ರಸಾದ್ ಗುಲ್ಲಸಿಂಗಾರ್ ನಲ್ಲಿರುವ ತನ್ನ ಅತ್ತೆಯ ಮನೆಗೆ ಬಂದಿದ್ದ. ತನ್ನ ಹಣ ವಾಪಸ್​ ನೀಡುವಂತೆ ಕೇಳಿದ್ದಾನೆ. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಕೆಲಹೊತ್ತು ವಾಗ್ವಾದ ನಡೆದಿದೆ. ಆ ವೇಳೆ ಯೋಜನೆಯಂತೆ ಪ್ರಸಾದ್ ತನ್ನೊಂದಿಗೆ ತಂದಿದ್ದ ಸರ್ವಿಸ್ ರಿವಾಲ್ವರ್ ನಿಂದ ಅತ್ತೆಯತ್ತ ಗುಂಡು ಹಾರಿಸಿ ಪ್ರಾಣ ತೆಗೆದಿದ್ದಾನೆ.

ಹನುಮಕೊಂಡದಲ್ಲಿ ಅತ್ತೆ-ಅಳಿಯನ ಜಗಳ, ಅತ್ತೆಯನ್ನು ಗುಂಡಿಕ್ಕಿ ಕೊಂದ ಕಾನ್‌ಸ್ಟೆಬಲ್ ಅಳಿಮಯ್ಯ
ಅತ್ತೆಯನ್ನು ಗುಂಡಿಕ್ಕಿ ಕೊಂದ ಕಾನ್‌ಸ್ಟೆಬಲ್ ಅಳಿಮಯ್ಯ
Follow us
ಸಾಧು ಶ್ರೀನಾಥ್​
|

Updated on: Oct 12, 2023 | 2:45 PM

ಹನುಮಕೊಂಡ ಜಿಲ್ಲೆ, ಅಕ್ಟೋಬರ್ 12: ಹನುಮನಕೊಂಡ ಜಿಲ್ಲೆಯಲ್ಲಿ ಭೀಕರ ಘಟನೆ ನಡೆದಿದೆ. ಹಣಕಾಸಿನ ವಹಿವಾಟು ಮತ್ತು ಕೌಟುಂಬಿಕ ಕಲಹಗಳಿಂದಾಗಿ ಪೊಲೀಸ್ ಪೇದೆಯೊಬ್ಬ ತನ್ನ ಅತ್ತೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಹನಮಕೊಂಡದ ಗುಂಡ್ಲಸಿಂಗಾರನ ಇಂದಿರಮ್ಮ ಕಾಲನಿಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ಪ್ರಸಾದ್ ಎಂಬ ಕಾನ್‌ಸ್ಟೆಬಲ್ ತನ್ನ ರಿವಾಲ್ವರ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಹಾಗಾಗಿ ಆಕೆ ಅಲ್ಲಿಯೇ ಪ್ರಾಣ ಕಳೆದುಕೊಂಡಳು. ಗುಂಡಿನ ದಾಳಿಯನ್ನು ಕಂಡ ಸ್ಥಳೀಯರು ಕಾನ್‌ಸ್ಟೆಬಲ್‌ನನ್ನು ಹಿಡಿದು ಚೆನ್ನಾಗಿ ಬಡಿದಿದ್ದಾರೆ. ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗುಂಡಿನ ದಾಳಿ ನಡೆಸಿದ ಪ್ರಸಾದ್ ಪ್ರಸ್ತುತ ರಾಮಗುಂಡಂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ತೋಟಪಲ್ಲಿ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 15 ವರ್ಷಗಳ ಹಿಂದೆ ಗುಂಡ್ಲ ಸಿಂಗಾರಂ ಪ್ರದೇಶದ ರಮ ಎಂಬ ಮಹಿಳೆಯೊಂದಿಗೆ ಕಾನ್‌ಸ್ಟೆಬಲ್‌ ಪ್ರಸಾದ್ ವಿವಾಹವಾಗಿತ್ತು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಕೆಲ ದಿನಗಳಿಂದ ಪತಿ-ಪತ್ನಿಯರ ನಡುವೆ ಜಗಳ ನಡೆಯುತ್ತಲೇ ಇತ್ತು. ಈ ಸಂಬಂಧ, ಪತ್ನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾನ್‌ಸ್ಟೆಬಲ್‌ ಪ್ರಸಾದ್ ತಮ್ಮ ಅತ್ತೆಗೆ ನಾಲ್ಕು ಲಕ್ಷ ರೂ ಸಾಲ ನೀಡಿದ್ದ

ತನಿಖೆಯನ್ನಾಧರಿಸಿದ ಮಾಹಿತಿ ಪ್ರಕಾರ ಇಂದು ಪ್ರಸಾದ್ ಗುಲ್ಲಸಿಂಗಾರ್ ನಲ್ಲಿರುವ ತನ್ನ ಅತ್ತೆಯ ಮನೆಗೆ ಬಂದಿದ್ದ. ತನ್ನ ಹಣ ವಾಪಸ್​ ನೀಡುವಂತೆ ಕೇಳಿದ್ದಾನೆ. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಕೆಲಹೊತ್ತು ವಾಗ್ವಾದ ನಡೆದಿದೆ. ಆ ವೇಳೆ ಯೋಜನೆಯಂತೆ ಪ್ರಸಾದ್ ತನ್ನೊಂದಿಗೆ ತಂದಿದ್ದ ಸರ್ವಿಸ್ ರಿವಾಲ್ವರ್ ನಿಂದ ಅತ್ತೆಯತ್ತ ಗುಂಡು ಹಾರಿಸಿ ಪ್ರಾಣ ತೆಗೆದಿದ್ದಾನೆ. 2 ಸುತ್ತು ಗುಂಡು ತಾಕುತ್ತಿದ್ದಂತೆ ಅತ್ತೇ ಅಲ್ಲೇ ಕುಸಿದು ಪ್ರಾಣ ನೀಗಿದ್ದಾರೆ. ಅದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಕಾನ್ ಸ್ಟೆಬಲ್ ಪ್ರಸಾದ್ ಗೆ ಕಲ್ಲಿನಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪ್ರಸಾದ್ ಪ್ರಸ್ತುತ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Also read: Kakatiya era temple – ಶಿವಲೀಲೆ! ಗಣೇಶನ ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ

ಈ ಕೊಲೆಗೆ ಕೇಲವ ಅತ್ತೆ-ಅಳಿಯ ನಡುವಿನ ಹಣಕಾಸು ಜಗಳವಷ್ಟೇ ಅಲ್ಲ; ಪತಿ-ಪತ್ನಿಯರ ನಡುವಿನ ವೈಮನಸ್ಸಿನ ಕಾರಣವೂ ಇದೆ ಎನ್ನಲಾಗಿದೆ. ಕಾನ್‌ಸ್ಟೆಬಲ್‌ ಪ್ರಸಾದ್ ಕುಡಿತದ ದಾಸನಾಗಿದ್ದಾನೆ. ಆತನ ಮಡದಿಯು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿಯ ಜೊತೆ ವಾಸಿಸುತ್ತಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಪ್ರಸಾದ್ ಅವರಿಗೆ ಸರ್ವೀಸ್ ರಿವಾಲ್ವರ್ ಹೇಗೆ ಸಿಕ್ಕಿತು? ಈ ಸರ್ವಿಸ್ ರಿವಾಲ್ವರ್ ಆತನಿಗೆ ಎಲ್ಲಿಂದ ಬಂತು? ರಿವಾಲ್ವರ್ ಕೊಟ್ಟವರು ಯಾರು ಎಂಬ ಬಗ್ಗೆ ತನಿಖೆ ಮುಂದುವರಿಯಲಿದೆ. ಈ ಮಧ್ಯೆ, ಸ್ಥಳೀಯ ಪೊಲೀಸರು ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.

ಪ್ರಸಾದ್ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಯಿಂದ ರಿವಾಲ್ವರ್ ಕದ್ದಿದ್ದಾರಾ…? ಅಥವಾ ಯಾವುದಾದರೂ ಎ ಎಸ್ ಐ ಅಥವಾ ಕೆಳಹಂತದ ಅಧಿಕಾರಿಗೆ ಮಾಹಿತಿ ನೀಡದೆ ರಿವಾಲ್ವರ್ ಗೆ ಗುಂಡು ಹಾರಿಸಿದ್ದಾರೆಯೇ? ಅಷ್ಟಕ್ಕೂ ತೋಟಪಲ್ಲಿ ಪೊಲೀಸ್​ ಠಾಣೆಯಿಂದ ಇಷ್ಟು ದೂರಕ್ಕೆ ರಿವಾಲ್ವರ್ ತಂದು, ಹೇಗೆ ಗುಂಡು ಹಾರಿಸಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಘಟನೆ ಪೊಲೀಸ್​ ಇಲಾಖೆಯಲ್ಲಿ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ