Kakatiya era temple: ಶಿವಲೀಲೆ! ಗಣೇಶನ ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ

Warangal Fort Hanamkonda: 1,100 ವರ್ಷಗಳ ಹಿಂದೆ ಹನುಮಕೊಂಡದಲ್ಲಿ ನಿರ್ಮಿಸಿದ ಸ್ವಯಂಭೂ ಸಿದ್ಧೇಶ್ವರ ದೇವಾಲಯವು ಪಶ್ಚಿಮಾಭಿಮುಖವಾಗಿದೆ. ದೇಗವುಲದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಸೂರ್ಯನ ಕಿರಣ ಬೀಳುತ್ತದೆ. ಅದು ಕೂಡ ವರ್ಷದಲ್ಲಿ ಮೂರು ದಿನ ಮಾತ್ರ. ಶಿವಪುತ್ರ ಗಣೇಶನ ಹಬ್ಬದ ಸಂದರ್ಭದಲ್ಲಿ ಸೂರ್ಯನ ಕಿರಣ ಶಿವನನ್ನು ಸ್ಪರ್ಶಿಸಿ ಭಕ್ತರನ್ನು ಪುಳಕಿತಗೊಳಿಸುತ್ತದೆ.

Kakatiya era temple: ಶಿವಲೀಲೆ! ಗಣೇಶನ ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ
ವರ್ಷಕ್ಕೆ 3 ದಿನ ಮಾತ್ರ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ!
Follow us
ಸಾಧು ಶ್ರೀನಾಥ್​
|

Updated on:Sep 25, 2023 | 6:20 PM

ಹನುಮಕೊಂಡ, ಸೆಪ್ಟೆಂಬರ್ 25: ಅಲ್ಲಿ ನಿರ್ಮಾಣ ಕಾರ್ಯದ ನೈಪುಣ್ಯ, ಕೌಶಲ್ಯವೇ ಅಡಗಿದೆ! ವರ್ಷದಲ್ಲಿ 3 ದಿನ ಮಾತ್ರ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ! ನಮ್ಮ ಬೆಂಗಳೂರು ನಗರದ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿಯೂ ಮಕರ ಸಂಕ್ರಾಂತಿಯ ದಿನ ಸೂರ್ಯ ರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಘಳಿಗೆ ಸಂಜೆಗೆ ಘಟಿಸುತ್ತದೆ. ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗದ ಕಿಂಡಿಯಿಂದ ಸೂರ್ಯರಶ್ಮಿ ಪ್ರವೇಶಿಸುತ್ತದೆ. ಆರಂಭದಲ್ಲಿ ನಂದಿವಾಹನವನ್ನು ಸ್ಪರ್ಶಿಸಿದ ಸೂರ್ಯ ರಶ್ಮಿಯು, ಕೆಲ ಕ್ಷಣಗಳಲ್ಲೇ ನಂದಿಯ ಎರಡು ಕೊಂಬಿನ ಮುಖಾಂತರ ಶಿವಲಿಂಗದ ಪಾದವನ್ನು ಸ್ಪರ್ಶಿಸುವುದು ಇಲ್ಲಿಯ ವಾಡಿಕೆಯಾಗಿದೆ. ಇನ್ನು ಪಕ್ಕದ ಆಂಧ್ರದಲ್ಲಿಯೂ ಇಂತಹುದೇ ಪವಾಡ ನಡೆಯುತ್ತದೆ. ಅದೂ ಶಿವಪುತ್ರ ಗಣೇಶನ ಹಬ್ಬದ (Ganesh Chaturthi) ಸಂದರ್ಭದಲ್ಲಿ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ವರ್ಷದಲ್ಲಿ ಮೂರು ದಿನ ಮಾತ್ರ ಬೀಳುತ್ತದೆ. ಅದು ಶಿವನ ಮಹಿಮೆ ಎಂದು ಭಕ್ತರು ಪರಿಗಣಿಸುತ್ತಾರೆ. ಮೂರು ಮುಖ್ಯದ್ವಾರಗಳ ಆಚೆಗಿನ, ನಾಲ್ಕು ಗುಡ್ಡಗಳ ಮಧ್ಯೆಯಿರುವ ದೇಗುಲದಲ್ಲಿ ಲಿಂಗದ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ ( Warangal Fort Hanamkonda Swayambhu Siddeshwara Temple).

ಈ ಸೂರ್ಯನ ಕಿರಣಗಳು ನಿಜವಾಗಿಯೂ ಪದಗಳಿಗೆ ನಿಲುಕದ ಅದ್ಭುತವಾಗಿದೆ. ಸುತ್ತಲೂ ನಾಲ್ಕು ಕಡೆ ದಿಬ್ಬಗಳಿವೆ.. ಪಶ್ಚಿಮ ದಿಕ್ಕಿನ ಮುಖವನ್ನು ಹೊಂದಿರುವ ಈ ಶಿವಾಲಯದಲ್ಲಿ ನೇರವಾಗಿ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಬೀಳುವ ಸೂರ್ಯನ ಕಿರಣಗಳು ಸ್ವಯಂಭೂ ಶಿವಲಿಂಗವನ್ನು ಪುನರುಜ್ಜೀವನಗೊಳಿಸುತ್ತಿವೆ. ಅದು ಕೂಡ ವರ್ಷದಲ್ಲಿ ಮೂರು ದಿನ ಮಾತ್ರ ಸೂರ್ಯನ ಕಿರಣಗಳು ಶಿವನನ್ನು ಸ್ಪರ್ಶಿಸಿ ಭಕ್ತರನ್ನು ಪುಳಕಿತಗೊಳಿಸುತ್ತದೆ.

1,100 ವರ್ಷಗಳ ಹಿಂದೆ ( Kakatiya era temple) ಹನುಮಕೊಂಡ ನಿರ್ಮಿಸಿದ ಸ್ವಯಂಭೂ ಸಿದ್ಧೇಶ್ವರ ದೇವಾಲಯವು ಭಕ್ತರನ್ನು ಇಂದಿಗೂ ಬೆರಗುಗೊಳಿಸುತ್ತದೆ. ಈ ದೇವಾಲಯದ ಮುಂಭಾಗದಲ್ಲಿ ನಂದಿ ಮಂಟಪವಿದೆ.. ಇದರ ಮುಂಭಾಗದಲ್ಲಿ ಮುಖ್ಯ ದ್ವಾರವಿದೆ. ಇದರ ಮುಂಭಾಗದಲ್ಲಿ ಪದ್ಮಾಕ್ಷಿ ದೇವಾಲಯ ಬೆಟ್ಟವಿದೆ. ದೇವಸ್ಥಾನದ ಬಲಕ್ಕೆ ಹನುಮದ್ಗಿರಿ ಬೆಟ್ಟವಿದೆ. ಎಡಕ್ಕೆ ಕಾಲಭೈರವ ಬೆಟ್ಟ, ಹಿಂದೆ ಲಕ್ಷ್ಮೀ ನರಸಿಂಹಸ್ವಾಮಿ ಗುಡ್ಡ. ಮುಂಭಾಗದಲ್ಲಿ ಪದ್ಮಾಕ್ಷಿ ದೇವಸ್ಥಾನದ ದಿಬ್ಬವಿದೆ.

Also Read: ಕೌತುಕಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರನ‌ ಸನ್ನಿಧಿ, ಲಿಂಗ ಸ್ಪರ್ಶಿಸಲಿದ್ದಾನೆ ಸೂರ್ಯ

ಅದೇನೇ ಇರಲಿ, ನಾಲ್ಕೂ ಕಡೆ ದಿಬ್ಬಗಳಿವೆ.. ಮೇಲಾಗಿ, ಪಶ್ಚಿಮಾಭಿಮುಖವಾಗಿ ಇರುವ ಈ ದೇವಸ್ಥಾನದೊಳಗೆ ಯಾವುದೇ ಪ್ರಬಲವಾದ ಸೂರ್ಯಕಿರಣಗಳು ಪ್ರವೇಶಿಸುವ ಅವಕಾಶವಿಲ್ಲ.. ಮೂರು ಮುಖ್ಯ ದ್ವಾರಗಳು ಸಂಪೂರ್ಣವಾಗಿ ಕೆಳಗಿವೆ.. ಇನ್ನು ದೇಗುಲದ ಒಳಗೆ ಹೋಗುವ ಭಕ್ತರು ಕೂಡ ದ್ವಾರಗಳಲ್ಲಿ ತಲೆ ತಗ್ಗಿಸಿಕೊಂಡು ಹೋಗಿ ನಮಸ್ಕರಿಸಬೇಕಾಗಿದೆ. ಹೀಗಿರುವ ಗರ್ಭಗುಡಿಯಲ್ಲಿ ಸೂರ್ಯ ರಶ್ಮಿ ಬೀಳುವ ಅವಕಾಶವಿಲ್ಲ.

ಆದರೆ ಈ ವಿಚಿತ್ರ ಬೆಳಕಿಗೆ ಬರುವುದು ಪ್ರತಿ ವರ್ಷ ಭಾದ್ರಪದ ಮಾಸದ ವಿನಾಯಕ ನವರಾತ್ರಿಯ ಸಂದರ್ಭದಲ್ಲಿ ಮಾತ್ರ. ಸೂರ್ಯಾಸ್ತದ ಸಮಯದಲ್ಲಿ 5.55 ನಿಮಿಷದಿಂದ 6 ಗಂಟೆಗಳವರೆಗೆ ಅಂದರೆ ಐದು ನಿಮಿಷಗಳವರೆಗೆ, ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತವೆ. ಅದರಿಂದ ಆ ಸ್ವಯಂಭೂ ಶಿವಲಿಂಗವನ್ನು ಪುನರುಜ್ಜೀವನಗೊಳಿಸುತ್ತವೆ. ಕೇವಲ ಮೂರು ದಿನಗಳ ಕಾಲ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಬೀಳುವುದು ಖಂಡಿತವಾಗಿಯೂ ಶಿವನ ಹಿರಿಮೆ ಎಂದು ಭಕ್ತರು ನಂಬುತ್ತಾರೆ. ಸೂರ್ಯ ದರ್ಶನದ ನಂತರ ನಾಗರಹಾವು ಬಂದು ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕುತ್ತದೆ ಮತ್ತು ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತದೆ ಎಂಬ ಪ್ರತೀತಿಯೂ ಇದೆ.

ಈ ದೇವಾಲಯದ ವೈಶಿಷ್ಟ್ಯಗಳೇನು? ಗರ್ಭಗುಡಿಯಲ್ಲಿರುವ ಸ್ವಯಂಭೂ ಸಿದ್ಧೇಶ್ವರ ಶಿವಲಿಂಗವನ್ನು ಕೇವಲ ಮೂರು ದಿನಗಳ ಕಾಲ ಸೂರ್ಯನ ಕಿರಣಗಳು ಹೇಗೆ ಸ್ಪರ್ಶಿಸುತ್ತಿವೆಯೋ ಆ ಹಿರಿಮೆ, ರಹಸ್ಯವನ್ನು ಯಾರಿಗೂ ಅರ್ಥವಾಗುತ್ತಿಲ್ಲ. ಮಂದಿರ ನಿರ್ಮಾಣದಲ್ಲಿನ ಕೌಶಲ್ಯವೇ..? ಅಥವಾ ಇದು ನಿಜವಾಗಿಯೂ ಶಿವನ ಹಿರಿಮೆಯೇ ಎಂಬ ಕೌತುಕ ಮನೆಮಾಡುತ್ತರದೆ. ಆದರೂ ಭಕ್ತರಿಗೆ ಈ ಸೂರ್ಯ ದರ್ಶನ ವಿಚಿತ್ರವೆನಿಸುತ್ತದೆ.. ಏನೇ ಆದರೂ ಅದರಿಂದ ಶಿವನಿಗೆ ಹೊಸ ಶಕ್ತಿ ಸಿಗಲಿ ಎಂದು ಹಾರೈಸುವ ಭಕ್ತರು ತಂಡೋಪತಂಡವಾಗಿ ಆಗಮಿಸಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ.

ಕಾಕತೀಯ ವಿಶ್ವವಿದ್ಯಾಲಯ ಮತ್ತು ಎನ್‌ಐಟಿಯ ಇಂಜಿನಿಯರಿಂಗ್ ತಜ್ಞರು ಈ ವಿಷಯವನ್ನು ಅರಿಯಲು ಈಗಾಗಲೇ ಹಲವು ಸಂಶೋಧನೆಗಳನ್ನು ಮಾಡಿದ್ದಾರೆ. ಆದರೆ ಅವರಿಗೂ ಅದು ಬಗೆಹರಿಯುತ್ತಿಲ್ಲ. ಆ ಮೂರು ದಿನ ಮಾತ್ರವೇ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಹೇಗೆ ಬೀಳುತ್ತವೆ ಎಂಬುದು ಅರ್ಥವಾಗುತ್ತಿಲ್ಲ.

ಹನಮಕೊಂಡ ಕುರಿತು ಮತ್ತಷ್ಟು… ಹನುಮ ಅಥವಾ ಹನಮ ಕೊಂಡ (Hanuma/Hanama-Konda) ಎಂದು ಕರೆಯಲ್ಪಡುವ ಹನಮಕೊಂಡ ಕಾಕತೀಯ ರಾಜವಂಶದ ಅವಧಿಯಲ್ಲಿ (Kakatiya Dynasty) ಕೊಂಡಯ್ಯ ಮತ್ತು ಹನುಮಯ್ಯ (Hanuma/Hanama-Konda) ಎಂಬ ಇಬ್ಬರು ಸಹೋದರರಿಂದ ಸ್ಥಾಪಿಸಲ್ಪಟ್ಟ ಗ್ರಾಮವಾಗಿದೆ. ಈ ಗ್ರಾಮದಲ್ಲಿರುವ ಹಲವಾರು ಹನುಮಾನ್ ದೇವಾಲಯಗಳಿಗೆ ಭೇಟಿ ನೀಡಬಹುದು, ಇದು ಪಟ್ಟಣದ ಹೆಸರಿಗೆ ಕಾರಣವಾಗಿದೆ. ಭಗವಾನ್ ಹನುಮಂತನು ಸಂಜೀವಿನಿ ಪರ್ವತದೊಂದಿಗೆ ಹಿಂದಿರುಗುತ್ತಿದ್ದಾಗ, ಈ ಸ್ಥಳದಲ್ಲಿ ಕೆಲವು ಕಲ್ಲುಗಳು ಉದುರಿಹೋಗಿವೆ ಎಂದು ನಂಬಲಾಗಿದೆ.

ವಾರಂಗಲ್ ಕೋಟೆಯು ವಾರಂಗಲ್ ಮತ್ತು ಹನಮಕೊಂಡ ನಡುವಿನ 19 ಕಿಮೀ ವ್ಯಾಪ್ತಿಯಲ್ಲಿ ಹರಡಿದೆ. ಈ ಕೋಟೆಯನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಯಿತು, ಈ ಪ್ರದೇಶವು ರಾಜ ಗಣಪತಿ ದೇವ ಮತ್ತು ಅವನ ಮಗಳು ರುದ್ರಮ್ಮ ದೇವಿಯ ಆಡಳಿತದಲ್ಲಿದ್ದಾಗ ಸ್ಥಾಪಿತವಾಗಿದೆ. ಈ ಕೋಟೆಯು ತನ್ನ ಸಂಕೀರ್ಣವಾಗಿ ಕೆತ್ತಿದ ಕಮಾನುಗಳು ಮತ್ತು ಕಂಬಗಳಿಗೆ ಹೆಸರುವಾಸಿಯಾಗಿದೆ; ಮತ್ತು ನಾಲ್ಕು ದೊಡ್ಡ ಕಲ್ಲಿನ ಗುಟ್ಟಗಳ ಮದ್ಯೆಯಿದೆ. ಕೋಟೆಯ ಒಳಗಿನ ದೇವಾಲಯವು ಭೂಮಾತೆ ಸ್ವಯಂಭೂದೇವಿಗೆ ಸಮರ್ಪಿತವಾಗಿದೆ.

ವಾರಂಗಲ್ ರೈಲು ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ವಾರಂಗಲ್ ಕೋಟೆಯನ್ನು 12 ನೇ ಶತಮಾನದಲ್ಲಿ ಕಾಕತೀಯರು ನಿರ್ಮಿಸಿದರು. ರಾಜಧಾನಿಯನ್ನು ಹನಮನಕೊಂಡದಿಂದ ಸ್ಥಳಾಂತರಿಸಿದಾಗ ರಾಜ ರುದ್ರದೇವ ಈ ಕೋಟೆಯ ನಿರ್ಮಾಣವನ್ನು ಪ್ರಾರಂಭಿಸಿದನು. ಇದನ್ನು ಅವನ ಸೋದರಳಿಯ ಗಣಪತಿ ದೇವನು ಮತ್ತಷ್ಟು ವಿಸ್ತರಿಸಿದನು ಮತ್ತು ಅಂತಿಮವಾಗಿ ರಾಜಕುಮಾರಿ ರಾಣಿ ರುದ್ರಮಾ ದೇವಿಯಿಂದ ಪೂರ್ಣಗೊಂಡಿತು. ಕೋಟೆಯು ಹೆಚ್ಚಾಗಿ ಆಕ್ರಮಣಕಾರರಿಂದ ನಾಶವಾಯಿತು ಮತ್ತು ಅವಶೇಷಗಳನ್ನು ಮಾತ್ರ ಈಗ ನೋಡಬಹುದಾಗಿದೆ.

Published On - 5:25 pm, Mon, 25 September 23