ಕೌತುಕಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರನ‌ ಸನ್ನಿಧಿ, ಲಿಂಗ ಸ್ಪರ್ಶಿಸಲಿದ್ದಾನೆ ಸೂರ್ಯ

ಬೆಂಗಳೂರು: ಉತ್ತರಾಯಣ ಕಾಲ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇವತ್ತು ಸೂರ್ಯ ತನ್ನ ಪಥ ಬದಲಿಸುವ ಹಿನ್ನೆಲೆ ಬೆಂಗಳೂರಿನ ಗುಟ್ಟಳ್ಳಿಯ ಗವಿಗಂಗಾಧರನನ್ನ ಸೂರ್ಯರಶ್ಮಿ ಸ್ಪರ್ಶಿಸಲಿದೆ. ಪ್ರತಿವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ದಿನ‌ ಸೂರ್ಯ ರಶ್ಮಿ ‌ಶಿವನನ್ನ ಸ್ಪರ್ಶಿಸಲಿದೆ. ಸಂಜೆ 5.20 ರಿಂದ 5.37 ರ ನಡುವೆ ಸೂರ್ಯನು ದೇವರನ್ನ ಸ್ಪರ್ಶಿಸಲಿದ್ದಾನೆ. ಈ‌ ಹಿನ್ನೆಲೆ ಗವಿಗಂಗಾಧರ ಸನ್ನಿಧಿಯಲ್ಲಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಶಿವನಿಗೆ ರುದ್ರಾಭಿಷೇಕ ಸೇರಿ‌ ವಿಶೇಷ ಪೂಜಾ ಕೈಂಕರ್ಯ ಜರುಗಲಿದೆ. […]

ಕೌತುಕಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರನ‌ ಸನ್ನಿಧಿ, ಲಿಂಗ ಸ್ಪರ್ಶಿಸಲಿದ್ದಾನೆ ಸೂರ್ಯ
Follow us
ಸಾಧು ಶ್ರೀನಾಥ್​
|

Updated on:Jan 16, 2020 | 9:51 AM

ಬೆಂಗಳೂರು: ಉತ್ತರಾಯಣ ಕಾಲ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇವತ್ತು ಸೂರ್ಯ ತನ್ನ ಪಥ ಬದಲಿಸುವ ಹಿನ್ನೆಲೆ ಬೆಂಗಳೂರಿನ ಗುಟ್ಟಳ್ಳಿಯ ಗವಿಗಂಗಾಧರನನ್ನ ಸೂರ್ಯರಶ್ಮಿ ಸ್ಪರ್ಶಿಸಲಿದೆ. ಪ್ರತಿವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ದಿನ‌ ಸೂರ್ಯ ರಶ್ಮಿ ‌ಶಿವನನ್ನ ಸ್ಪರ್ಶಿಸಲಿದೆ. ಸಂಜೆ 5.20 ರಿಂದ 5.37 ರ ನಡುವೆ ಸೂರ್ಯನು ದೇವರನ್ನ ಸ್ಪರ್ಶಿಸಲಿದ್ದಾನೆ. ಈ‌ ಹಿನ್ನೆಲೆ ಗವಿಗಂಗಾಧರ ಸನ್ನಿಧಿಯಲ್ಲಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಶಿವನಿಗೆ ರುದ್ರಾಭಿಷೇಕ ಸೇರಿ‌ ವಿಶೇಷ ಪೂಜಾ ಕೈಂಕರ್ಯ ಜರುಗಲಿದೆ.

ಸೂರ್ಯ ರಶ್ಮಿ ಬೀಳುವ ಸಮಯದಲ್ಲಿ ದೇವರಿಗೆ ಕ್ಷೀರಾಭಿಷೇಕ ನಡೆಯಲಿದೆ. ನಂತ್ರ ಶಿವನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತೆ. ಅದೇರೀತಿ ದೇವರ ಮೇಲೆ ಹೆಚ್ಚು ಕಾಲ ಸೂರ್ಯ ರಶ್ಮಿ ಉಳಿಯಬಾರದು ಅನ್ನೋ ನಂಬಿಕೆ ಇದೆ. ಕಳೆದ ವರ್ಷ 1 ನಿಮಿಷ 3 ಸೆಕೆಂಡುಗಳವರೆಗೆ ಸೂರ್ಯ ರಶ್ಮಿ ದೇವರ ಮೇಲೆ ಇತ್ತು. ಅಲ್ಲದೆ ನಿನ್ನೆಯೇ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಆದ್ರೆ ಒಂದು ದಿನ ತಡವಾಗಿ ಸ್ಪರ್ಶಿಸುತ್ತಿದೆ. ಹೀಗಾಗಿ ಈ ಬಾರಿಯೂ ದೇವರ ಮೇಲೆ ಸೂರ್ಯ ರಶ್ಮಿ ಹೆಚ್ಚು ಕಾಲ ಉಳಿಯೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಒಟ್ನಲ್ಲಿ, ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನಲ್ಲಿ ಇಂದು ವಿಸ್ಮಯವೇ ನಡೆಯಲಿದೆ.‌ ಸೂರ್ಯನ ಕಿರಣ ಶಿವಲಿಂಗವನ್ನ ಚುಂಬಿಸೋ ಕ್ಷಣವನ್ನ ನೋಡಲು ಭಕ್ತರು ಕಾರದಿಂದ ಕಾಯುತ್ತಿದ್ದಾರೆ.

Published On - 6:54 am, Wed, 15 January 20