ರಾಜಣ್ಣ 75ನೇ ಹುಟ್ಟುಹಬ್ಬಕ್ಕೆ ಆಗಮಿಸಿದ ಶಿವಕುಮಾರ್ ವೇದಿಕೆಯ ಮೇಲೆ ಆತ್ಮೀಯವಾಗಿ ಹರಟಿದರು!
ವೇದಿಕೆಗೆ ಶಿವಕುಮಾರ್ ಆಗಮಿಸಿದಾಗ ನೆರೆದಿದ್ದ ಜನ ಶಿಳ್ಳೆ ಚಪ್ಪಾಳೆಯೊಂದಿಗೆ ಅವರನ್ನು ಸ್ವಾಗತಿಸಿದರು. ರಾಜಣ್ಣ ಅವರ ಮಗ ರಾಜೇಂದ್ರ ರಾಜಣ್ಣ ಶಿವಕುಮಾರ್ರನ್ನು ವೇದಿಕೆಗೆ ಕರೆತಂದರು. ಶಿವಕುಮಾರ್ ಮತ್ತು ರಾಜಣ್ಣ ಅಕ್ಕಪಕ್ಕದಲ್ಲಿ ಕುಳಿತಿದ್ದರು ಮತ್ತು ಅವರ ನಡುವೆ ಗಹನವಾದ ಚರ್ಚೆ ನಡೆದಿತ್ತು. ತಮ್ಮ ಭಾಷಣದಲ್ಲೂ ಉಪ ಮುಖ್ಯಮಂತ್ರಿಯವರು ಸಹಕಾರ ಸಚಿವರನ್ನು ವಿಶೇಷವಾಗಿ ಕೊಂಡಾಡಿದರು.
ತುಮಕೂರು, ಜೂನ್ 21: ಸಹಕಾರ ಸಚಿವ ಕೆಎನ್ ರಾಜಣ್ಣ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ, ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಕಾರ್ಯಕ್ರಮ ತುಮಕೂರಿನ ಕಾಲೇಜು ಮೈದಾನದಲ್ಲಿ ಬಹು ಅದ್ದೂರಿಯಾಗಿ ನಡೆಯುತ್ತಿದೆ. ರೇಷ್ಮೆ ಅಂಗಿ ಮತ್ತು ರೇಷ್ಮೆ ಪಂಚೆ ತೊಟ್ಟ ಬರ್ತ್ಡೇ ಬಾಯ್ ಮದುಮಗನಂತೆ ಮಿಂಚುತ್ತಿದ್ದರು. ಅವರ ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ನಡುವಿನ ಸಂಬಂಧ ಅನ್ಯೋನ್ಯವಾಗಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಅದರೆ ಶಿವಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿದರಲ್ಲದೆ ರಾಜಣ್ಣ ಅವರಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ ಗೌರವಿಸಿ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಿದರು. ಪ್ರತಿಯಾಗಿ ರಾಜಣ್ಣ ಕೂಡ ಶಿವಕುಮಾರ್ರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.
ಇದನ್ನೂ ಓದಿ: KN Rajanna: ಸಚಿವ ಕೆಎನ್ ರಾಜಣ್ಣ ಚುನಾವಣೆ ರಾಜಕಾರಣಕ್ಕೆ ಗುಡ್ ಬೈ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ