ಈಗಲೂ ಯಡಿಯೂರಪ್ಪನವರ ಸರ್ಕಾರ ಅಧಿಕಾರದಲ್ಲಿದೆ ಅಂತ ಸಂಸದ ರಾಘವೇಂದ್ರ ಭಾವಿಸಿದ್ದಾರೆ: ಮಧು ಬಂಗಾರಪ್ಪ
ಶರಾವತಿ ಸಂತ್ರಸ್ತರ ಬಗ್ಗೆ ಸಂಸದರಿಗೆ ಯಾವ ಕಾಳಜಿಯೂ ಇಲ್ಲ, 2012 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಜಾರಿಗಳೊಳಿಸಿದ ಕಾನೂನಿಂದಾಗಿ ಸಂತ್ರಸ್ತರು ಅಲೆದಾಡುವಂತಾಗಿದೆ, ಕಾಗೋಡು ತಿಮ್ಮಪ್ಪನವರು ಕೊಟ್ಟಿದ್ದನ್ನು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಳು ಮಾಡಿದ್ದಾರೆ, ಅದನ್ನು ಸರಿಮಾಡುವ ಕೆಲಸವನ್ನ ಸಿಎಂ ಸಿದ್ದರಾಮಯ್ಯ ಮತ್ತು ತಾನು ಮಾಡುತ್ತಿರೋದಾಗಿ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ, ಜೂನ್ 21: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಸ್ಥಳೀಯ ಸಂಸದ ಬಿವೈ ರಾಘವೇಂದ್ರ (BY Raghavendra) ನಡುವೆ ಶೀತಲ ಸಮರ ಬಹಳ ದಿನಗಳಿಂದ ನಡೆಯುತ್ತಿದೆ. ಇಂದು ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತಾಡಿದ ಮಧು ಬಂಗಾರಪ್ಪ, ಸಂಸದರು ಮಾತಾಡುವಾಗ ಎಚ್ಚರವಹಿಸಿ ಮಾತಾಡಬೇಕು, ಅವರು ರಾಜ್ಯದಲ್ಲಿ ಈಗಲೂ ತಮ್ಮ ತಂದೆಯದ್ದೇ ಸರ್ಕಾರ ಇದೆ ಅಂತ ಭಾವಿಸಿದಂತಿದೆ, ದಿನ ಬೆಳಗಿದರೆ ಅವರು ಕೈಯಲ್ಲಿ ಕತ್ತರಿ ಹಿಡಿದು ಟೇಪು ಕಟ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ, ಎಲ್ಲರೂ ಘನತೆ ಗೌರವಗಳಿಂದ ಕೆಲಸ ಮಾಡುತ್ತಾರೆ ಅನ್ನೋದನ್ನು ಅವರು ಮನಗಾಣಬೇಕು ಎಂದು ಹೇಳಿದರು.
ಇದನ್ನೂ ಓದಿ: ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕುಮಾರಸ್ವಾಮಿ ನೇತೃತ್ವದ ಸರ್ಕಾರವಲ್ಲ: ಮಧು ಬಂಗಾರಪ್ಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ