AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕುಮಾರಸ್ವಾಮಿ ನೇತೃತ್ವದ ಸರ್ಕಾರವಲ್ಲ: ಮಧು ಬಂಗಾರಪ್ಪ

ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕುಮಾರಸ್ವಾಮಿ ನೇತೃತ್ವದ ಸರ್ಕಾರವಲ್ಲ: ಮಧು ಬಂಗಾರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 18, 2025 | 12:31 PM

ಜಾತಿ ಗಣತಿ ವರದಿಯ ಬಗ್ಗೆ ಯಾರೇನು ಹೇಳುತ್ತಾರೆ ಅನ್ನೋದು ಮುಖ್ಯವಲ್ಲ, ಮಾಧ್ಯಮದವರು ದಯವಿಟ್ಟು ಇದೇ ಪ್ರಶ್ನೆಯನ್ನು ಎಲ್ಲ ಸಚಿವರಿಗೆ, ಶಾಸಕರಿಗೆ ಕೇಳಬೇಡಿ, ವರದಿಯ ಬಗ್ಗೆ ಸಮಗ್ರವಾದ ಮಾಹಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿಗಿ ಅವರಲ್ಲಿ ಸಿಗುತ್ತದೆ, ಜನರಿಗೆ ಮಾಹಿತಿ ಮಾಧ್ಯಮಗಳ ಮೂಲಕವೇ ಸಿಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು.

ಬೆಂಗಳೂರು, ಏಪ್ರಿಲ್ 18: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy) ಜಾತಿ ಗಣತಿ ಕುರಿತು ಮಾಡಿರುವ ಕಾಮೆಂಟ್​ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದರು. ಮಾಧ್ಯಮಗಳೊಡನೆ ಮಾತಾಡಿದ ಅವರು, ಸರ್ಕಾರ ಕುಮಾರಸ್ವಾಮಿಯವರದ್ದಲ್ಲ ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ; ಹಿಂದೆ ಕುಮರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪವರ ಮುಖ್ಯಮಂತ್ರಿಯಾಗಿದ್ದಾಗ ನಡೆದ ಪ್ರಮಾದಗಳನ್ನು ತಾನು ಎಣಿಸುತ್ತಾ ಕೂರಲ್ಲ, ಮಾಡಲು ಬೇಕಾದಷ್ಟು ಕೆಲಸವಿದೆ ಎಂದರು. ಸಾಮಾಜಿಕ, ಅರ್ಥಿಕ ಮತ್ತು ಶೈಕ್ಷಣಿಕವಾಗಿ ಜನರಿಗೆ ನ್ಯಾಯ ಒದಗಿಸಿಕೊಡಲು ಸಿದ್ದರಾಮಯ್ಯ ಜಾತಿ ಗಣತಿಯನ್ನು ಮಾಡಿಸಿದ್ದಾರೆ, ಎಲ್ಲರಿಗೂ ಸಮಾನತೆ ಒದಗಿಸಿಕೊಡಬೇಕೆಂಬ ಚಿಂತನೆ ಅವರಿಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಇದನ್ನೂ ಓದಿ:  SSLC ವಿದ್ಯಾರ್ಥಿಗಳಿಗೆ ಬಿಗ್​ ಅಪ್ಡೇಟ್ ನೀಡಿದ ಮಧು ಬಂಗಾರಪ್ಪ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ