ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಮರಳು ಮಾಫಿಯಾ ಅರೋಪ, ಸ್ಥಳಕ್ಕೆ ಭೇಟಿ ನೀಡಿದ ಬಿವೈ ವಿಜಯೇಂದ್ರ
ಕಾಂಗ್ರೆಸ್ ಕಾರ್ಯಕರ್ತರು ಕಾಗಿಣ ನದಿದಡಕ್ಕೆ ಬರುವ ನಿರೀಕ್ಷೆ ವಿಜಯೇಂದ್ರ ಅವರಿಗಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಅವರು ಅಲ್ಲಿಗೆ ಬಂದಾಗ ಮಾತಾಡುವ ಪ್ರಯತ್ನ ಮಾಡೋದಿಲ್ಲ. ಅಲ್ಲೇ ನಿಂತು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನಾದರೂ ನೀಡಿದ್ದರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚುತಿತ್ತು. ವಿಜಯೇಂದ್ರ ಮೌನವಾಗಿ ಅಲ್ಲಿಂದ ತೆರಳಿದ್ದು ಕಾರ್ಯಕರ್ತರಿಗೆ ನಿರಾಶೆ ಉಂಟುಮಾಡಿರಬಹುದು.
ಕಲಬುರಗಿ, ಏಪ್ರಿಲ್ 18: ಜನಾಕ್ರೋಶ ಯಾತ್ರೆ ನಿಮಿತ್ತ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇಂದು, ಮರಳು ಮಾಫಿಯಾ (sand mafia) ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತಾಪುರ ಕ್ಷೇತ್ರದಲ್ಲಿ ಬಾಗೋಡಿ ಮೂಲಕ ಹರಿಯುವ ಕಾಗಿಣ ನದಿತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮ್ಮ ಕಾರ್ಯಕರ್ತರೊಂದಿಗೆ ಮಾತಾಡುತ್ತ ಅವರು ಮರಳ ಧಂದೆ ನಡೆಯುತ್ತಿರುವಾಗ ವಿಡಿಯೋ ಮಾಡಿ, ಫೋಟೋಗಳನ್ನು ತೆಗೆಯಿರಿ ಅಂತ ಹೇಳುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಬಂದು, ನಿಮ್ಮ ಸರ್ಕಾರದ ಅವಧಿಯಲ್ಲೇ ಬಾಗೋಡಿಯಲ್ಲಿ ಸ್ಯಾಂಡ್ ಪಾಯಿಂಟ್ ಮಾಡಿದ್ದು ಅಂತ ಹೇಳಿದಾಗ ವಿಜಯೇಂದ್ರ ಮಾತಾಡದೆ ಅಲ್ಲಿಂದ ಹೊರಡುತ್ತಾರೆ.
ಇದನ್ನೂ ಓದಿ: ಯತ್ನಾಳ್ ಅಡ್ಡದಲ್ಲಿ ಬಿವೈ ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
