ಶಿವಕುಮಾರ್ 2028ರಲ್ಲಿ ಚೀಫ್ ಮಿನಿಸ್ಟ್ರಾಗಲಿ ಇಲ್ಲ ಪ್ರೈಮ್ ಮಿನಿಸ್ಟರ್, ಯಾರು ಬೇಡವೆನ್ನುತ್ತಾರೆ: ರಾಜಣ್ಣ
ಶನಿವಾರ ತುಮಕೂರುನಲ್ಲಿ ತಮ್ಮ 75ನೇ ಜನ್ಮದಿನೋತ್ಸವ ಆಚರಿಸಿಕೊಳ್ಳಲಿರುವ ರಾಜಣ್ಣ ಅವರಿಗೆ ಮುಖ್ಯಮಂತ್ರಿಯಾಗುವ ಆಸೆಯೇನೂ ಇಲ್ಲ ಅದರೆ ಅವರಿಗೆ ಕೆಪಿಸಿಸಿ ರಾಜ್ಯಾಧ್ಯಕ್ಷನ ಸ್ಥಾನ ಬೇಕಾಗಿದೆ. ಪ್ರಾಯಶಃ ಇದೇ ಕಾರಣಕ್ಕೆ ಅವರ ಮತ್ತು ಡಿಕೆ ಶಿವಕುಮಾರ್ ನಡುವೆ ಸಂಬಂಧ ಸೌಹಾರ್ದಯುತವಾಗಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಭೇಷ್ ಅನಿಸಿಕೊಂಡಿರುವ ಶಿವಕುಮಾರ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬೆಂಗಳೂರು, ಜೂನ್ 19: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಹಕಾರ ಸಚಿವ ಕೆಎನ್ ರಾಜಣ್ಣ 2028ರಲ್ಲಿ ಡಿಕೆ ಶಿವಕುಮಾರ್ (DK Shivakumar) ಸರ್ಕಾರ ಬರಲಿ ಅವರು ಮುಖ್ಯಮಂತ್ರಿ ಯಾಕೆ ಪ್ರಧಾನ ಮಂತ್ರಿ ಬೇಕಾದರೂ ಅಗಲಿ ಯಾರು ಬೇಡ ಅನ್ನುತ್ತಾರೆ ಎಂದು ಹೇಳಿದರು. ಪಕ್ಷದ ನಾಯಕತ್ವ ಯಾರದ್ದೇ ಇರಲಿ ರಾಜ್ಯವೊಂದಲ್ಲಿ ಅಧಿಕಾರಕ್ಕೆ ಬರಬೇಕಾದರೆ ನಂಬರ್ ಗಳು ಬೇಕಾಗುತ್ತವೆ ಮತ್ತು ಅದನ್ನು ಪಡೆಯಲು ಸಾಮೂಹಿಕ ನಾಯಕತ್ವ ಬೇಕಾಗುತ್ತದೆ, ಸರ್ಕಾರ ರಚಿಸಲು ಬೇಕಿರುವಷ್ಟು ನಂಬರ್ ಗಳು ಸಿಕ್ಕರೆ ಸಿಎಂ ಯಾರಾಗಬೇಕೆನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ರಾಜಣ್ಣ ಹೇಳಿದರು.
ಇದನ್ನೂ ಓದಿ: KN Rajanna: ಸಚಿವ ಕೆಎನ್ ರಾಜಣ್ಣ ಚುನಾವಣೆ ರಾಜಕಾರಣಕ್ಕೆ ಗುಡ್ ಬೈ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ