ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯ ಹಾಜರಿ ಪುಸ್ತಕದಲ್ಲೂ ಹತ್ತಾರು ಪ್ರಮಾದಗಳು, ಕೃಷ್ಣ ಭೈರೇಗೌಡಗೆ ಅಚ್ಚರಿ!
ಕೆಲ ನೌಕರರು ಅಟೆಂಡೆನ್ಸ್ ರಿಜಿಸ್ಟರ್ ನಲ್ಲಿ ದಿನಗಟ್ಟಲೆ ಸಹಿ ಮಾಡಿಲ್ಲ, ಒಬ್ಬ ಸಿಬ್ಬಂದು ಮಿನಿಸ್ಟ್ರು ಚೆಕ್ ಮಾಡಿಯಾರು ಅಂತ ಗಾಬರಿ ಬಿದ್ದು ಇವತ್ತೇ ತಾವು ಕೆಲಸಕ್ಕೆ ಬಾರದ ದಿನಗಳ ಮುಂದೆ ಸಿಎಲ್ ಅಂತ ಅವಸರದಲ್ಲಿ ಬರೆದಿದ್ದಾರೆ. ಚಾಣಾಕ್ಷ ಸಚಿವರಿಗೆ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ. ಸಿಎಲ್ಗಾಗಿ ಸಲ್ಲಿಸಿರುವ ಅರ್ಜಿ ಎಲ್ಲಿ ಎಂದು ಸಚಿವ ಕೇಳಿದರೆ ಮಹಿಳಾ ಉದ್ಯೋಗಿ ಬಳಿ ಉತ್ತರವಿಲ್ಲ.
ಬೆಂಗಳೂರು, ಜೂನ್ 19: ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯಲ್ಲಿ ಇರೋವರೆಗೆ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಬೆಂಕಿಯ ಮೇಲೆ ಕುಳಿತಂತೆ ಆಡಿದ್ದು ಸುಳ್ಳಲ್ಲ. ಸಿಬ್ಬಂದಿಯ ಕಾರ್ಯವೈಖರಿ, ಕರ್ತವ್ಯಲೋಲುಪತೆ, ಬೇಜವಾಬ್ದಾರಿತನ ಮತ್ತು ಲಂಚಗುಳಿತನವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಸಚಿವ ಭೈರೇಗೌಡ ಕಚೇರಿ ಸಿಬ್ಬಂದಿಯ ಹಾಜರಿ ಪುಸ್ತಕವನ್ನು ಕೈಗೆತ್ತಿಕೊಂಡರು. ಅದರಲ್ಲೂ ನೂರೆಂಟು ಪ್ರಮಾದಗಳು. ಯಾಕೆ ಹೀಗೆ ಅಂತ ಸಚಿವ ಕೇಳಿದರೆ ಸಿಬ್ಬಂದಿಯಿಂದ ಬಂದಿದ್ದು ಅರ್ಥವಿಲ್ಲದ ಸಮರ್ಥನೆ ಇಲ್ಲವೇ ಮೌನ!
ಇದನ್ನೂ ಓದಿ: ಸಚಿವ ಕೃಷ್ಣ ಭೈರೇಗೌಡ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯ ಸಿಬ್ಬಂದಿಯೊಬ್ಬನಿಗೆ, ‘ಪಾಳೆಗಾರನಿಗೆ ಸಲಾಂ’ ಅಂದರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos