ಸಚಿವ ಕೃಷ್ಣ ಭೈರೇಗೌಡ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯ ಸಿಬ್ಬಂದಿಯೊಬ್ಬನಿಗೆ, ‘ಪಾಳೆಗಾರನಿಗೆ ಸಲಾಂ’ ಅಂದರು!
ಒಬ್ಬ ಮಹಿಳಾ ಅಧಿಕಾರಿಗೆ ಸಚಿವ, ನಿಮ್ಮಿಂದ ಜನ ಕೆಲಸ ಮಾಡಿಸಿಕೊಳ್ಳಬೇಕೆಂದರೆ ಯಾವ್ಯಾವುದಕ್ಕೆ ಎಷ್ಟೆಷ್ಟು ರೇಟು ಅಂತ ಒಂದು ದರಪಟ್ಟಿಯನ್ನು ಕಚೇರಿಯಲ್ಲಿ ಲಗತ್ತಿಸಿಬಿಡಿ, ಆ ದೃಷ್ಟಿಯಿಂದಾದರೂ ಪಾರದರ್ಶಕತೆ ಕಾಯ್ದುಕೊಂಡಂತೆ ಅಗುತ್ತದೆ ಎಂದು ಗೇಲಿ ಮಾಡುತ್ತಾರೆ. ಮಹಿಳಾ ಸಿಬ್ಬಂದಿ ತನ್ನಿಂದಾಗಿರುವ ವಿಳಂಬ ಮತ್ತು ತಪ್ಪನ್ನು ಬೇರೆಯವರ ತಲೆಗೆ ಕಟ್ಟುವ ಪ್ರಯತ್ನ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಬೆಂಗಳೂರು, ಜೂನ್ 19: ಕೃಷ್ಣ ಭೈರೇಗೌಡ ನೇರ ನುಡಿಯ ದಕ್ಷ ಕಂದಾಯ ಸಚಿವ (revenue minister) ಎಂದು ಹೆಸರಾಗಿದ್ದಾರೆ. ಅದರೆ ರಾಜ್ಯದಲ್ಲಿ ಕಂದಾಯ ಇಲಾಖೆಯ ಕಚೇರಿಗಳು ಅದೆಷ್ಟು ಕುಲಗೆಟ್ಟು ಹೋಗಿವೆ ಎಂದರೆ ಅವುಗಳನ್ನು ಸರಿಮಾಡುವುದು ಕಷ್ಟದ ಕೆಲಸ. ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ ಸಚಿವ ಕಡತಗಳನ್ನು ದುಡ್ಡಿನಾಸೆಗಾಗಿ ಅವುಗಳನ್ನು ಮುಂದೆ ಸಾಗಿಸದೆ ತಮ್ಮ ಮುಂದೆ ಇಟ್ಟುಕೊಂಡಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಬ್ಬ ಸಿಬ್ಬಂದಿಗೆ ಸಚಿವರು, ನೀವು ದೊಡ್ಡ ಸಾಹೇಬರು, ನಿಮಗೆ ಸಲಾಂ ಹೊಡೆದು ಪಾಪದಪೂಜೆ ಏನಾದರೂ ಮಾಡಬೇಕಾ? ಎಂದು ಕೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರು ಡಿಸಿ ಕಚೇರಿಗೆ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ: ಅಧಿಕಾರಿಗಳು, ಸಿಬ್ಬಂದಿಗೆ ಕ್ಲಾಸ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Jun 19, 2025 03:22 PM