ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪ್ರದೀಪ್ ಈಶ್ವರ್ ವಿಷಯಾಂತರ ಮಾಡುವ ಪ್ರಯತ್ನ ಮಾಡಿದರು
ಕೇಂದ್ರದಿಂದ ಅನುದಾನ ಸಿಕ್ಕಿಲ್ಲ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶುರುವಾಗಿಲ್ಲ, ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಹಣ ಸಿಕ್ಕಿಲ್ಲ ಎಂದು ಹೇಳುವ ರಾಜ್ಯಸರ್ಕಾರ ಎಷ್ಟು ಸಲ ಕೇಂದ್ರಕ್ಕೆ ಮನವಿ ಸಲ್ಲಿಸಿದೆ, ಎಂದು ಮಾಧ್ಯಮದವರು ಕೇಳಿದರೆ, ಬಹಳಷ್ಟು ಮಿನಿಸ್ಟ್ರುಗಳು ಹೋಗಿ ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ ಎಂದಷ್ಟೇ ಪ್ರದೀಪ್ ಈಶ್ವರ್ ಹೇಳುತ್ತಾರೆ, ವಿವರಣೆ ನೀಡಲ್ಲ.
ಬೆಂಗಳೂರು, ಜೂನ್ 19: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ಮಾತಾಡಿದ್ದು ಬಹಳ ಕಡಿಮೆ, ಮಾಧ್ಯಮಗಳ ಮುಂದೆ ಬಂದಾಗಲೆಲ್ಲ ಅವರು ತಾವು ಅಸೆಂಬ್ಲಿ ಚುನಾವಣೆಯಲ್ಲಿ ಸೋಲಿಸಿದ ಡಾ ಕೆ ಸುಧಾಕರ್ (Dr K Sudhakar) ಅವರನ್ನು ತೆಗಳುವ ಇಲ್ಲವೇ ಕೇಂದ್ರದಲ್ಲಿ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಮತ್ತು ಹೆಚ್ ಡಿ ಕುಮಾರಸ್ವಾಮಿಯನ್ನು ಟೀಕಿಸುವುದನ್ನು ಮಾಡುತ್ತಿರುತ್ತಾರೆ. ಇವತ್ತು ವಿಧಾನ ಸೌಧದ ಮುಂದೆ ಅವರಿಗೆ ಪತ್ರಕರ್ತರ ಸರಳ ಪ್ರಶ್ನೆಗಳಿಗೆ ಉತ್ತರ ಕೊಡಲಾಗಲಿಲ್ಲ. ಈ ವಿಡಿಯೋನಲ್ಲಿ ಅವರು ಎರಡು ಬಾರಿ ವಿಷಯಾಂತರ ಮಾಡುವ ಪ್ರಯತ್ನವನ್ನು ಗಮನಿಸಬಹುದು.
ಇದನ್ನೂ ಓದಿ: ನಾನೊಬ್ಬ ಸಂಸ್ಕಾರವಂತ ಹಾಗಾಗಿ ನಾರಾಯಣಸ್ವಾಮಿ ಚಲವಾದಿಯವರನ್ನು ನಾಯಿ ಅನ್ನಲ್ಲ: ಪ್ರದೀಪ್ ಈಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ